Categories: ವಿಶೇಷ

ಕೊಡಗಿನ ಹುಲಿತಾಳದ ಬೊಟ್ಲಪ್ಪ ದೇಗುಲದ ವಿಶೇಷತೆ ಗೊತ್ತಾ?

ಮಹಾಶಿವರಾತ್ರಿ ಹಿನ್ನಲೆಯಲ್ಲಿ ಶಿವದೇಗುಲಗಳಲ್ಲಿ ವಿಶೇಷ ಪೂಜೆ, ಜಾಗರಣಗಳು ನಡೆಯುತ್ತಿದ್ದು, ಅದರಲ್ಲೂ ನಿಸರ್ಗ ನಿರ್ಮಿತ ಉದ್ಭವ ಶಿವಲಿಂಗ ಹೊಂದಿರುವ ಶಿಲಾದೇಗುಲಗಳಲ್ಲಿ ವಿಶೇಷ ಪೂಜೆ ಮತ್ತು ರಾತ್ರಿ ಪೂರ್ತಿ ಜಾಗರಣೆಗಳು ನಡೆಯುತ್ತಿವೆ. ಇಂತಹ ಶಿಲಾದೇಗುಲಗಳು ಕೆಲವೇ ಕೆಲವು ಇದ್ದು ಆ ಪೈಕಿ ಕೊಡಗಿನ ಹುಲಿತಾಳದ ಬೊಟ್ಲಪ್ಪ ದೇಗುಲ ಗಮನಸೆಳೆಯುತ್ತದೆ.

ಮಡಿಕೇರಿಯಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿ ಹೆಬ್ಬಂಡೆಗಳು ಒಂದಕ್ಕೊಂದು ಆಧಾರವಾಗಿ ನಿಂತ ಬಂಡೆ ನಡುವೆ ದೇಗುಲ ನಿರ್ಮಾಣವಾಗಿದ್ದು, ಈ ದೇಗುಲವನ್ನು ಸ್ಥಳೀಯರು ಬೊಟ್ಲಪ್ಪ ಎಂದು ಕರೆಯುತ್ತಾರೆ. ಈಶ್ವರ ಇಲ್ಲಿನ ಆರಾಧ್ಯ ದೈವನಾಗಿದ್ದಾನೆ. ಜನರ ಸದ್ದುಗದ್ದಲದಿಂದ ದೂರವಾಗಿ ಸದಾ ಪ್ರಶಾಂತ ತಾಣದಲ್ಲಿ ಈ ದೇಗುಲವಿದೆ. ಹಿಂದೆ ಈ ಪ್ರದೇಶ ದಟ್ಟ ಕಾಡಿನಿಂದ ಕೂಡಿತ್ತಾದರೂ ಈಗ ಸುತ್ತ ಮುತ್ತಲ ಪ್ರದೇಶಗಳಲ್ಲಿ ಜನರು ವಾಸಿಸುತ್ತಿದ್ದಾರೆ.

ಈ ದೇಗುಲದ ಬಗೆಗೆ ತಿಳಿಯುತ್ತಾ ಹೋದರೆ ಹಿಂದೆ ಕೊಡಗನ್ನು ಆಳುತ್ತಿದ್ದ ರಾಜ ಬೇಟೆಯಾಡುವ ಸಲುವಾಗಿ ದಟ್ಟ ಕಾಡಿನಿಂದ ಕೂಡಿದ್ದ ಈ ಸ್ಥಳಕ್ಕೆ ಬಂದಿದ್ದನಂತೆ ಆಗ ಘರ್ಜಿಸುತ್ತಾ ಬಂದ ಹುಲಿಯೊಂದು ಈ ಶಿಲಾ ದೇಗುಲದ ಬಳಿ ಮಂಡಿಯೂರಿ ನಮಿಸಿ ಮುಂದೆ ಸಾಗಿತ್ತಂತೆ ಇದನ್ನು ಗಮನಿಸಿದ ರಾಜ ಈ ಸ್ಥಳದಲ್ಲಿ ಏನೋ ಮಹಿಮೆಯಿದೆ ಎಂದು ಅಲ್ಲಿಗೆ ತೆರಳಿ ನೋಡಿದಾಗ ಹೆಬ್ಬಂಡೆಗಳ ನಡುವೆ ಉದ್ಭವ ಲಿಂಗ ಕಂಡಿತಂತೆ. ಕೂಡಲೇ ಅರ್ಚಕರನ್ನು ನೇಮಿಸಿ ನಿತ್ಯವೂ ಪೂಜೆ ಮಾಡುವ ವ್ಯವಸ್ಥೆ ಮಾಡಿದನಂತೆ. ಅಂದಿನಿಂದ ಇಂದಿನವರೆಗೂ ಇಲ್ಲಿ ಪೂಜಾ ಕಾರ್ಯ ನಡೆಯುತ್ತದೆ.

ಈ ತಾಣದಲ್ಲಿ ಹಿಂದೆ ಋಷಿ ಮುನಿಗಳು ತಪ್ಪಸ್ಸು ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ದೇವಾಲಯದ ಎಡಬದಿಯ ಬಂಡೆಯ ತಳಭಾಗದಲ್ಲಿ ಗುಹೆಯೊಂದನ್ನು ಕಾಣಬಹುದಾಗಿದ್ದು, ಇದು ಹುಲಿಯ ವಾಸಸ್ಥಾನವೆಂಬ ನಂಬಿಕೆಯೂ ಇದೆ. ಬಹುಶಃ ಹಿಂದೆ ಹುಲಿಯ ವಾಸಸ್ಥಾನವಾಗಿದ್ದ ಹುಲಿತಾಣ ಕ್ರಮೇಣ ಹುಲಿತಾಳವಾಗಿರಬಹುದೇನೋ?

ಇಲ್ಲಿಗೆ ತೆರಳಬೇಕೆಂದರೆ ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಹೊರಟರೆ ಸುಮಾರು ಎಂಟು ಕಿ.ಮೀ. ದೂರದಲ್ಲಿ ಕಡಗದಾಳು ಸಿಗುತ್ತದೆ. ಅಲ್ಲಿಂದ ಬಲಕ್ಕೆ ಕಗ್ಗೋಡ್ಲು ಕಡೆಗಿನ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ಮತ್ತೆ ಎಡಕ್ಕೆ ತಿರುಗಬೇಕು ಹೀಗೆ ಸುಮಾರು ಎರಡು ಕಿ.ಮೀ.ನಷ್ಟು ಸಾಗಿದರೆ ಹುಲಿತಾಳದ ಶಿಲಾದೇಗುಲವನ್ನು ತಲುಪಬಹುದು. ಇಲ್ಲಿ ಪ್ರತಿದಿನ ಪೂಜೆ ನಡೆಯುತ್ತವೆಯಾದರೂ ಶಿವರಾತ್ರಿಯಂದು ವಿಶೇಷ ಪೂಜೆ, ಅಭಿಷೇಕ, ಜಾಗರಣೆಗಳು ನಡೆಯುವುದು ವಿಶೇಷವಾಗಿದೆ.

Gayathri SG

Recent Posts

ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ

ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…

1 hour ago

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

2 hours ago

ರಸ್ತೆಯಲ್ಲಿ ಸಿಕ್ಕಿದ್ದ ಪೆನ್‌ಡ್ರೈವ್ ಅನ್ನು ಶಾಸಕ ಎ.ಮಂಜುಗೆ ಕೊಟ್ಟಿದ್ದೆ: ನವೀನ್ ಗೌಡ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ಹಂಚಿಕೆ ಆರೋಪ ಎದುರಿಸುತ್ತಿರುವ ನವೀನ್ ಗೌಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ಪೋಸ್ಟ್ ಭಾರೀ…

2 hours ago

ಡಿಫರೆಂಟ್ ಗೆಟಪ್‌ನಲ್ಲಿ ಎಂಟ್ರಿ ಕೊಟ್ಟ ನಟ ಮಿತ್ರ

ಕನ್ನಡದ ಹಾಸ್ಯನಟ ಮಿತ್ರ ಇದೀಗ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಚಿತ್ರದಲ್ಲಿ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

3 hours ago

ಶೀಘ್ರದಲ್ಲೇ ಎರ್ನಾಕುಲಂನಿಂದ ಬೆಂಗಳೂರಿಗೆ ವಂದೇ ಭಾರತ್ ಆರಂಭ

ಲೋಕಸಭೆ ಚುನಾವಣೆ ಮುಗಿದ ಬಳಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಕೊಚ್ಚಿಯ ಎರ್ನಾಕುಲಂನಿಂದ ಬೆಂಗಳೂರಿಗೆ ಸಂಚಾರ ಪ್ರಾರಂಭಿಸಲಿದೆ.

3 hours ago

ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 133ನೇ ಜಯಂತೋತ್ಸವ ಅಂಗವಾಗಿ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ವಿಮೋಚನಾ ಯುವಕರ ಸಂಘದ…

3 hours ago