ಅಂಕಣ

ಬಿಸಿಲಿನ ತಾಪದಿಂದ ತ್ವಚೆಯ ರಕ್ಷಣೆ ಮಾಡಲು ಸನ್ ಸ್ಕ್ರೀನ್ ಕ್ರೀಮ್ ಬಳಸಿ

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲಾ ಯುವತಿಯರು ಇಚ್ಛೆ ಪಡುತ್ತಾರೆ. ಅದಕ್ಕಾಗಿ ಮಾರ್ಕೆಟ್ ನಲ್ಲಿ ಸಿಗುವ ಬಗೆ ಬಗೆಯ ಬ್ಯೂಟಿ ಕ್ರೀಮ್ ಗಳನ್ನು ಬಳಕೆ ಮಾಡುತ್ತಾರೆ. ಅದರಲ್ಲೂ ಇಂದು ಸನ್ಸಕ್ರೀನ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿದೆ. ತಮ್ಮ ತ್ವಚೆಯ ಅಂದವನ್ನು ಬಿಸಿಲಿನ ತಾಪದಿಂದ ರಕ್ಷಣೆ ಮಾಡಿಕೊಳ್ಳಲು ಉಪಯೋಗಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಯಾವ್ಯಾವುದೋ ಕ್ರೀಂ ಬಳಸದೇ, ನಿಮ್ಮ ತ್ವಚೆಗೆ ಹೊಂದುವ ಕ್ರೀಂ ಬಳಕೆ ಮಾಡಿದರೆ ಉತ್ತಮ ಇದರಿಂದ ಚರ್ಮ ಹಾಳಾಗುವುದಿಲ್ಲ. ಸನ್ ಸ್ಕ್ರೀನ್ ಯುವತಿಯರು ಮಾತ್ರವಲ್ಲ ಯುವಕರು ಬಳಕೆ ಮಾಡಬಹುದು.

ಬೇಸಿಗೆ ಕಾಲದಲ್ಲಿ ತ್ವಚೆಯ ಅಂದ ಕೆಡುವುದು ಹೆಚ್ಚು ಇಂತಹ ಸಂದರ್ಭದಲ್ಲಿ ಸನ್ ಸ್ಕ್ರೀನ್ ಹೆಚ್ಚು ಉಪಯುಕ್ತವಾಗಿದೆ. ಟ್ಯಾನಿಂಗ್, ಸನ್ಬರ್ನ್ ಸಮಸ್ಯೆಯಿಂದ ದೂರವಾಗಲು ಸನ್ ಸ್ಕ್ರೀನ್ ಕ್ರೀಂ ಬಳಸಿದರೆ ಒಳ್ಳೆಯದು.ಈ ಸನ್ ಸ್ಕ್ರೀನ್ ಕ್ರೀಮ್ ತ್ವಚೆ ಹೊಳಪು ಪಡೆಯಲು ನೆರವಾಗುತ್ತದೆ. ಜೊತೆಗೆ ಕಲೆಗಳು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.

ಸನ್ ಸ್ಕ್ರೀನ್ ಬಳಸುವ ಮೊದಲು ಅದರಲ್ಲಿ ಬಳಕೆ ಮಾಡುವಂತಹ ರಾಸಾಯನಿಕಗಳ ಮಾಹಿತಿ ತಿಳಿದುಕೊಂಡು ನಂತರ ಬಳಕೆ ಮಾಡಿದರೆ ಉತ್ತಮ. ಏಕೆಂದರೆ ಕೆಲವೊಂದು ಸನ್ ಸ್ಕ್ರೀನ್ ಗಳು ಕೆಲವರಿಗೆ ಉತ್ತಮ ರಿಸಲ್ಟ್ ಕೊಟ್ಟರೆ ಇನ್ನು ಕೆಲವರಿಗೆ ಸಮಸ್ಯೆಯನ್ನು ಮಾಡಬಹುದು. ಇಂತಹ ಸಂದರ್ಭಗಳಲ್ಲಿ ಅಲರ್ಜಿ ಆಗುವಂತಹ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಸರಿಯಾಗಿ ತಿಳಿದುಕೊಂಡು ಬಳಕೆ ಮಾಡುವುದು ಉತ್ತಮ.

ಕೆಲವು ಸನ್ ಸ್ಕ್ರೀನ್ ಗಳು ಜಿಡ್ಡು ಮತ್ತು ಎಣ್ಣೆಯಂಶದಿಂದ ಕೂಡಿರುತ್ತದೆ. ಇಂತಹ ಸನ್ ಸ್ಕ್ರೀನ್ ಬಳಸಿದರೆ ಮೊಡವೆ ಸಮಸ್ಯೆಯನ್ನು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಎಣ್ಣೆಯಂಶ ಕಡಿಮೆ ಇರುವ ಸನ್ ಸ್ಕ್ರೀನ್ ಬಳಸಿದರೆ ಉತ್ತಮ. ದೇಹಕ್ಕೆ ಬಳಸುವಂತಹ ಸನ್ ಸ್ಕ್ರೀನ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಬೇಡಿ ಏಕೆಂದರೆ ಇದರಿಂದ ಮೊಡವೆ ಸಮಸ್ಯೆ ಉಂಟಾಗುತ್ತದೆ.

Gayathri SG

Recent Posts

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

49 seconds ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

6 mins ago

ಮತ್ತೆ ವಿವಾದಕ್ಕೆ ಸಿಲುಕಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಒಂದು ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಹಿರಿಯ ಬಿಜೆಪಿ ಮುಖಂಡರ ಬಳಿ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದು, ಶಾಸಕ…

15 mins ago

ಚಾಮರಾಜನಗರ: ಹಾಸನೂರು ಘಾಟ್ ಬಳಿ ಕಾರು ಪಲ್ಟಿ

ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಘಾಟ್ ಬಳಿ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ.

36 mins ago

ಫ್ಲಾಟ್‌ಗಳನ್ನು ನಿರ್ಮಿಸಲು 8 ಮರಗಳನ್ನು ಕಡಿದ ಬಿಲ್ಡರ್ ವಿರುದ್ಧ ಎಫ್‌ಐಆರ್

ಫ್ಲಾಟ್‌ಗಳನ್ನು ನಿರ್ಮಿಸಲು ಎಂಟು ಮರಗಳನ್ನು ಕಡಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಬಿಲ್ಡರ್ ವಿರುದ್ಧ ಬಿಬಿಎಂಪಿ ಅರಣ್ಯ ವಿಭಾಗವು ಎಫ್‌ಐಆರ್…

45 mins ago

ಸಾರಿಗೆ ಬಸ್‌, ಬೊಲೆರೋ ಗೂಡ್ಸ್‌ ವಾಹನ ಮಧ್ಯೆ ಅಪಘಾತ: ಇಬ್ಬರಿಗೆ ಗಾಯ

ಪಟ್ಟಣದ ಬೈಪಾಸ್‌ ಬಳಿ ಅಣ್ಣಿಗೇರಿಯಿಂದ ಹುಬ್ಬಳ್ಳಿ ರಸ್ತೆಗೆ ಸೇರುವ ರಸ್ತೆ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಸಾರಿಗೆ ಬಸ್‌ ಮತ್ತು ತರಕಾರಿ…

1 hour ago