ಅಂಕಣ

ತಜಂಕ್ ಸಾಮನ್ಯ ಸೊಪ್ಪು ಆಹಾರಕ್ಕೂ, ಆರೋಗ್ಯಕ್ಕೂ ಅಸಾಮಾನ್ಯ ಇದರ ಮಹತ್ವ

ಜನರು ಮತ್ತು ಅವರ ಜೀವನ ಶೈಲಿಯು ಆಯಾ ಭೌಗೋಳಿಕ ಭಾಗಕ್ಕೆ ಅನುಗುಣವಾಗಿ ಆಹಾರ ಪದ್ಧತಿಯು ನಿರ್ಧಾರಿತವಾಗಿರುತ್ತದೆ. ಈ ನಿರ್ಧಾರಗಳು ನಮ್ಮ ಹಿರಿಯರು ಕೂಡಿಟ್ಟ ಅತೀ ಅಮೂಲ್ಯವಾದ ನಿಧಿ ಎನ್ನಬಹುದು.

ಆಹಾರವು ನಮ್ಮ ಜೀವನ ಶೈಲಿಯನ್ನು ಮಾತ್ರವಲ್ಲ. ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆಹಾರ ಮತ್ತು ಆರೋಗ್ಯ ಒಂದಕ್ಕೊಂದು ಅವಲಂಬಿತವಾಗಿರುತ್ತದೆ.

ಕರ್ನಾಟಕ ಕರಾವಳಿಯ ಜನರ ಬದುಕಿನ ಶೈಲಿ ಭಿನ್ನ. ಅದರಂತೆ ಆಹಾರ ಪದ್ಧತಿ ಕೂಡ ವಿಭಿನ್ನವಾಗಿದೆ. ಸೊಪ್ಪು ತರಾಕಾರಿ ವಿಷಯಕ್ಕೆ ಹೋಲಿಸಿದರೆ ಇನ್ನು ಭಿನ್ನವಾಗಿರುತ್ತದೆ. ಮಳೆಗಾಲದಲ್ಲಿ ಹೇರಾಳವಾಗಿ ಸಿಗುವ ತಜಂಕ್ (ತಗತೆ/ತಗಚೆ/ತಗಟೆ) ಗಿಡದ ಚಿಗುರುನಿಂದ ಮಾಡುವ ಪಲ್ಯ ಕರಾವಳಿ ಜನರ ಅಚ್ಚು ಮೆಚ್ಚು.

ಮಳೆಗಾಲದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಈ ಗಿಡವು ಸರ್ವೆ ಸಾಮಾನ್ಯವಾಗಿ ಕಾಣಸಿಗುತ್ತದೆ. ಕಳೆ ಗಿಡ ಎಂದು ಅರಿವಿಲ್ಲದ ಜನ ಮುಗುಮರಿದರೆ. ಅದೇ ಇನ್ನು ಕೆಲವರು ಇದರ ಮಹಿಮೆ ರುಚಿಯನ್ನು ಕಂಡವರು ಬಿಡುವುದಿಲ್ಲ.

ತಜಂಕನ ಚಿಗುರನ್ನು ಕೊಯ್ದು ತಂದು ಅದನ್ನು ಆರಿಸಿ ಸ್ವಚ್ಚ ಮಾಡಿ ಸಣ್ಣಗೆ ಚೂರು ಚೂರು ಆಗಿ ಕತ್ತರಿಸಿ ಪಲ್ಯ ಮಾಡಲಾಗುವುದು. ಕೆಲವರು ಇದಕ್ಕೆ ಹಲಸಿನ ಬೀಜವನ್ನು ಸೇರಿಸಿ ಬೇಯಿಸುತ್ತಾರೆ. ಇದರಿಂದ ತಜಂಕ್ ಪಲ್ಯದ ರುಚಿ ಇಮ್ಮಡಿಯಾಗುತ್ತದೆ.

ಇನ್ನು ತಜಂಕ್ ನಲ್ಲಿ ವಿವಿಧ ರೀತಿ ಖಾದ್ಯಗಳನ್ನು ಮಾಡಲಾಗುವುದು. ತಜಂಕ್ ಪತ್ರೋಡೆ, ತಜಂಕ್ ನೀರ್‌ದೋಸೆ, ತಜಂಕ್ ವಡೆ, ತಜಂಕ್ ಸುಕ್ಕ, ಸಾರು ಹೀಗೆ ವಿಭಿನ್ನ ರೀತಿಯಲ್ಲಿ ತಜಂಕ್ ನಲ್ಲಿ ಆಹಾರವನ್ನು ತಯಾರಿಸಲಾಗುವುದು.

ಬಾಯಲ್ಲಿ ನೀರು ಬರುವಂತೆ ಮಾಡುವ ತಜಂಕ್ ಆರ್ಯುವೇದದಲ್ಲಿಯು ವಿಶಿಷ್ಟ ಸ್ಥಾನವನ್ನು ಪಡೆದಿದೆ. ತಜಂಕ್ ನ ಒಣಬೀಜವನ್ನು ತೆಗೆದುಕೊಂಡು ಪುಡಿಮಾಡಿ ಅದರಿಂದ ಕಾಫಿಯನ್ನು ಮಾಡುತ್ತಾರೆ. ಇದು ದೇಹಕ್ಕೆ ಸಾಷ್ಟು ತಂಪ್ಪು ಎನ್ನತ್ತಾರೆ ಜನ ಸಾಮನ್ಯರು.

ಗಾಯಕ್ಕೆ ಇದರ ರಸವನ್ನು ಹಚ್ಚಿದರೆ ಉರಿ ಕಡಿಮೆಯಾಗುತ್ತದೆ. ರಕ್ತವನ್ನು ಶುಧ್ಧೀಕರಿಸುವ ಗುಣವನ್ನು ಹೋದಿರುವ ತಜಂಕ್ ಕಿಬ್ಬೊಟ್ಟೆ ನೋವು,ಊರಿಯೂತ, ಮಲಬಧ್ಧತೆ, ಬೊಜ್ಜು ಕರಗಿಸುವಲ್ಲಿಯು ಪರಿಣಾಮಕಾರಿ.

ಇವೆಲ್ಲದಕ್ಕಿಂತಲೂ ಮುಖ್ಯವಾಗಿ ತ್ವಚೆಯ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು.ಒಟ್ಟಿನಲ್ಲಿ ಹೇಳುವುದಾದರೆ ತಜಂಕ್ ಸಾಮನ್ಯ ಸೊಪ್ಪು ಹೊಟ್ಟೆಗೂ ಮತ್ತು ಆರೋಗ್ಯಕ್ಕು ಅಸಾಮಾನ್ಯವೆನಿಸಿದೆ ಇದರ ಮಹತ್ವ.

Sneha Gowda

Recent Posts

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ…

3 mins ago

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

22 mins ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

27 mins ago

ಮತ್ತೆ ವಿವಾದಕ್ಕೆ ಸಿಲುಕಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಒಂದು ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಹಿರಿಯ ಬಿಜೆಪಿ ಮುಖಂಡರ ಬಳಿ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದು, ಶಾಸಕ…

36 mins ago

ಚಾಮರಾಜನಗರ: ಹಾಸನೂರು ಘಾಟ್ ಬಳಿ ಕಾರು ಪಲ್ಟಿ

ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಘಾಟ್ ಬಳಿ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ.

56 mins ago

ಫ್ಲಾಟ್‌ಗಳನ್ನು ನಿರ್ಮಿಸಲು 8 ಮರಗಳನ್ನು ಕಡಿದ ಬಿಲ್ಡರ್ ವಿರುದ್ಧ ಎಫ್‌ಐಆರ್

ಫ್ಲಾಟ್‌ಗಳನ್ನು ನಿರ್ಮಿಸಲು ಎಂಟು ಮರಗಳನ್ನು ಕಡಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಬಿಲ್ಡರ್ ವಿರುದ್ಧ ಬಿಬಿಎಂಪಿ ಅರಣ್ಯ ವಿಭಾಗವು ಎಫ್‌ಐಆರ್…

1 hour ago