News Karnataka Kannada
Monday, April 29 2024
ಅಂಕಣ

ಹಲವು ಗೊಂದಲ, ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ಮುಂದೆ ಸಾಗುತ್ತದೆ “ಮಂದಾರ ಕುಸುಮ” ಕೃತಿ

"Mandara Kusuma" goes on to raise many confusions and questions.
Photo Credit : Freepik

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ.

ಬಾವಿಯೊಳಗಿನ ಕಪ್ಪೆ ತನ್ನ ಜಗತ್ತೇ ದೊಡ್ಡದು, ಶ್ರೇಷ್ಠ ಎಂಬ ಭಾವನೆಯಿಂದ ಇನ್ನೊಂದು ಜಗತ್ತು ಇಲ್ಲ ಎಂಬ ಭ್ರಮೆಯಲ್ಲಿ ಬದುಕುತ್ತದೆ. ಹೊರ ಜಗತ್ತೊಂದು ಇದೆಯಾದರೂ, ಅದರ ಬಗ್ಗೆ ತಿಳಿಯಲು ಕೂಡ ಮುಂದಾಗುವುದಿಲ್ಲ. ಅನುಭವದ ಮೂಲಕ ಮನುಷ್ಯನಿಗೆ ಸಿಗುವ ಪಾಠವು ಬೇರೆಲ್ಲೂ ದೊರಕಲು ಸಾಧ್ಯವಿಲ್ಲ.

ಹೃದಯ, ಮನಸ್ಸು ಎರಡೂ ಬೆರೆತು ಒಪ್ಪಂದದ ಪ್ರಕಾರ ಪ್ರೀತಿಸಿ ಮದುವೆಯಾಗುವವರು ಬೆರಳೆಣಿಕೆಯಾದರೆ, ಹೃದಯದ ಮಾತು ಕೇಳೋದ ಅಥವಾ ಮನಸ್ಸಿನಂತೆ ಹೆಜ್ಜೆ ಹಾಕೋದ ಎಂದು ಗೊಂದಲದಲ್ಲಿ ಮುಂದೆ ಸಾಗುವವರು ಹಲವರು!

ಮಕ್ಕಳಾಗಿಲ್ಲವೆಂದು ಸ್ವಂತ ಅಣ್ಣನ ಮಗನನ್ನು ಸ್ವಂತ ಮಗನಾಗಿಯೇ ಬೆಳೆಸಿದ್ದ ಕಮಲಾಕ್ಷಮ್ಮ, ತನಗೆ ಮಗಳು ಹುಟ್ಟಿದಾಗ ಅವರಿಬ್ಬರು ಮುಂದೆ ಸತಿ – ಪತಿ ಎನ್ನುತ್ತಾರೆ, ಅದನ್ನು ಪಾಲಿಸುತ್ತಾರೆ ಕೂಡ. ಮಹೇಶನಿಗಾಗಿದ್ದೂ ಕೂಡ ಅದೇ! ಹಿರಿಯರ ಅಣತಿಯಂತೆ ಉಮಾಳನ್ನೇ ವರಿಸಬೇಕಾಗಿದ್ದವನಿಗೆ, ನಗರದ ಬೆಡಗಿ ಸುಷ್ಮಾಳ ಪರಿಚಯವಾಗುತ್ತದೆ.

ನಂತರ, ಪ್ರೀತಿಯಾಗಿ ಪರಿವರ್ತನೆಗೊಂಡು ಮದುವೆಯಾಗುತ್ತಾರೆ! ಅವನ ಭಾವನೆಗಳಲ್ಲಿ ಉಚ್ಚ ಸ್ಥಾನದಲ್ಲಿದ್ದ ಉಮಾ ಹಳ್ಳಿಗುಗ್ಗು ತರಹ ಕಾಣಿಸ್ತಾಳೆ. ಅದಿಕ್ಕೆ ಅಂದಿದ್ದು ಅವನದ್ದು ದುರ್ಬಲ ಹೃದಯವಲ್ಲದ್ದೆ ಮತ್ತಿನ್ನೇನು? ಅಥವಾ ಹೃದಯ ಮನಸ್ಸು ಯಾವುದಕ್ಕೆ ಹೆಚ್ಚು ಒತ್ತು ಕೊಡಲಾರದೆ, ಸೋತು ಹೋದನಾ? ಈ ಎಲ್ಲಾ ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ಈ ಕೃತಿಯೂ ಮುಂದೆ ಸಾಗುತ್ತದೆ.

ಮಹೇಶ ಮಾಡಿದ ತಪ್ಪಿನಿಂದ ಭೀಕರ ಶಿಕ್ಷೆಗೊಳಪಟ್ಟಿದ್ದು ಉಮಾಳ ಕುಟುಂಬ! ಉಮಾ ದುರಂತ ನಾಯಕಿ!? ಮನೋಹರನ ಆಗಮನ ಸ್ವಲ್ಪ ಮಟ್ಟಿಗಾದರೂ ಅವಳಲ್ಲಿ ನೆಮ್ಮದಿ ತಂದರೂ, ಹೃದಯದಲ್ಲಿ ಪ್ರತಿಷ್ಠಾಪನೆಯಾಗಿದ್ದ ಮಹೇಶನ ಮೂರ್ತಿಯನ್ನು ಅಲುಗಾಡಿಸಲು ಸಾಧ್ಯವಾಯಿತೇ ಅವಳಿಗೆ? ಉಮಾ ಯಾರ ಮಂದಾರ ಕುಸುಮ? ಹೀಗೆ ಹಲವು ಗೊಂದಲ, ಪ್ರಶ್ನೆಗಳೊಂದಿಗೆ, ಚರ್ಚಿಸುತ್ತಾ ಈ ಕೃತಿಯೂ ಮುಂದೆ ಸಾಗುತ್ತದೆ  ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು