News Karnataka Kannada
Friday, May 17 2024
ಅಂಕಣ

ಸಂಪ್ರದಾಯದಿಂದ ಟ್ರೆಂಡಾಗಿ ಬದಲಾದ ಮದರಂಗಿ

Photo Credit :

ಜೀವನದಲ್ಲಿ ನಾವು ಆಚರಿಸುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ತನ್ನದೇ ಆದ ಮಹತ್ವವಿದೆ. ಮಾತ್ರವಲ್ಲದೇ ವೈಜ್ಞಾನಿಕ ಕಾರಣಗಳಿವೆ. ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಮದರಂಗಿ ಹಚ್ಚುವದು ಅಥವಾ ಕೈಗಳಿಗೇ ಲೇಪಿಸಿಕೊಳ್ಳುವುದು ಒಂದು ಆಚಾರವಾಗಿದೆ.

ಮದರಂಗಿ ಶಾಸ್ತ್ರ ಮದುವೆಯ ಪ್ರಮುಖ ಭಾಗ. ಹಿರಿಯರು ಮದರಂಗಿ ಶಾಸ್ತ್ರ, ಸಂಪ್ರದಾಯ ಎಂದು ಪರಿಗಣಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ಇದೊಂದು ಟ್ರೆಂಡ್ ಅನ್ನೋ ರೀತಿಯಾಗಿದೆ. ಅಚ್ಚ ಕನ್ನಡದಲ್ಲಿ ಗೋರಂಟಿ ಅನ್ನೋ ಹೆಸರಿನಿಂದ ಕರೆದರು ಮೆಹಂದಿ, ಮದರಂಗಿಯೆಂದು ಹೆಚ್ಚು ಜನಪ್ರಿಯವಾಗಿದೆ.

ಕೈಯನ್ನು ಕೆಂಪಗಾಗಿಸುವ ಮದರಂಗಿ ಪ್ರತೀ ಹೆಣ್ಣು ಮಕ್ಕಳಿಗೂ ಅಚ್ಚುಮಚ್ಚು. ಹಸಿರು ಎಲೆಗಳಿಂದ ತಯಾರಿಸುವ ಗೋರಂಟಿಯನ್ನು ಕೈಗಳಿಗೆ ಲೇಪಿಸಿಕೊಂಡರೆ ದೇಹಕ್ಕೆ ತಂಪನ್ನು ನೀಡುತ್ತದೆ. ಈ ಎಲೆಗಳು ಅಗಾಧವಾದ ಔಷಧಿಯ ಗುಣಗಳನ್ನು ಒಳಗೊಂಡಿವೆ. ಆದ್ದರಿಂದ ಭಾರತದಲ್ಲಿ ಹಲವು ವರ್ಷಗಳಿಂದಲೂ ಮದುವೆಯ ಸಂಧರ್ಭದಲ್ಲಿ ಮದರಂಗಿ ಶಾಸ್ತ್ರ ಸಾಂಪ್ರಾದಾಯಿಕವಾಗಿ ಮಹತ್ವ ಪಡೆದಿದೆ.

ಮದುವೆಯೆಂದರೆ ಒಂದು ಹೊತ್ತು ಬಿಡುವಿಲ್ಲದ ಸಮಯ. ಆ ಸಮಯದಲ್ಲಿ ವಧು-ವರನಿಗೆ ಯಾವುದೇ ರೀತಿಯ ಆರೋಗ್ಯದಲ್ಲಿ ಏರುಪೇರಾಗ ಬಾರದೆಂಬ ಕಾಳಜಿಯಿಂದ ಅಂಗೈಗಳಿಗೆ ಮದರಂಗಿ ಹಾಕುವ ಶಾಸ್ತ್ರವನ್ನು ಕೈಗೊಂಡಿದ್ದಾರೆ ಎಂದು ಎಲ್ಲೋ ಓದಿದ ನೆನಪು. ಇತ್ತೀಜಿನ ದಿನಗಳಲ್ಲೂ ಗ್ರಾಮೀಣ ಭಾಗದಲ್ಲಿ ಮನೆಯಂಗಳದಿ ಬೆಳೆದ ಗೋರಂಟಿ ಎಲೆಗಳನ್ನು ಬಳಸಿ ತಯಾರಿಸುವ ಮದರಂಗಿಯನ್ನು ಮದುವೆಯ ಮುಂದಿನ ದಿನ ವಧು-ವರರ ಕೈಗಳಿಗೆ ಹಚ್ಚುವ ಸಂಪ್ರದಾಯವಿದೆ. ಹಸಿರು ಮದರಂಗಿಯೊಳಗಿನ ಕೆಂಪು ಬಣ್ಣ ದೇಹಕ್ಕೆ ತಂಪಿನ ಜೊತೆ ಸೌಂದರ್ಯವನ್ನೂ ಹೆಚ್ಚಿಸುತ್ತದೆ.

ಆದರೆ ಕೆಲವೊಂದೆಡೆ ಆಧನಿಕತೆಯ ರಂಗಿನಿಂದದಾಗಿ ಮನೆಯಲ್ಲಿ ತಯಾರಿಸಿದ ಮದರಂಗಿಯನ್ನು ವಧು-ವರರ ಕೈ ಮೇಲಿಡುವ ವೀಳ್ಯದೆಲೆಗಷ್ಟೇ ಹಚ್ಚಲಾಗುತ್ತದೆ. ವಿವಿಧ ರೀತಿಯ ಮೆಹಂದಿ ಡಿಸೈನ್‌ಗಳನ್ನು ಕೈಗೆ ಹಾಕುವ ಕಾರಣದಿಂದಾಗಿಯೋ ಏನೋ ಮಾರುಕಟ್ಟೆಯಲ್ಲಿ ಲಭ್ಯವಾಗುವ ಮೆಹಂದಿ ಕೋನುಗಳು ಮನೆ ಮಾತಾಗಿದೆ.

ಮದರಂಗಿ ಅನ್ನೋದು ಅಲಂಕಾರ ಹಾಗೂ ಮದುವೆಯ ಸಂಭ್ರಮಕ್ಕೆ ಸಂಬಂಧಿಸಿದ ಒಂದು ಶಾಸ್ತ್ರ. ಕೇವಲ ಮದುವೆಗೆ ಸೀಮಿತವಾಗದೆ ಹೆಣ್ಣು ಮಕ್ಕಳು ಬೇರೆ ಬೇರೆ ರೀತಿಯ ಹಬ್ಬ ಹರಿದಿನಗಳಲ್ಲೂ ಆಗಾಗ ಮೆಹಂದಿ ಹಚ್ಚಿಕೊಳ್ಳುತ್ತಾರೆ. ಇದು ಮನಸ್ಸಿನಲ್ಲಿ ರಂಗು ಮೂಡಿಸಿ ಒತ್ತಡ ಹಾಗೂ ಸುಸ್ತನ್ನು ನಿವಾರಿಸುವ ಶಕ್ತಿಯನ್ನು ಒಳಗೊಂಡಿದೆ.

ಮದರಂಗಿಯಲ್ಲೂ ಹಲವು ರೀತಿಯ ವಿನ್ಯಾಸಗಳಿವೆ. ಭಾರತೀಯ ಮದರಂಗಿ ವಿನ್ಯಾಸ, ಅರೇಬಿಕ್, ಪಾಕಿಸ್ತಾನಿ, ಮೊರೊಕ್ಕನ್, ಮುಘಲೈ, ರಾಜಸ್ಥಾನಿ, ಹೂವಿನ ಮದರಂಗಿ ಮತ್ತು ಮದುಮಗಳ ಮದರಂಗಿ ವಿನ್ಯಾಸ ಹೀಗೆ ಹಲವು ವಿಧಗಳಿವೆ. ಮದುಮಗಳ ಮದರಂಗಿ ವಿನ್ಯಾಸವು ತುಂಬಾ ಭಿನ್ನವಾಗಿದ್ದು, ವಿನ್ಯಾಸದಲ್ಲಿ ವಧುವರರ ಚಿತ್ರಗಳನ್ನು ಬಿಡಿಸಲಾಗುತ್ತದೆ. ಕೈಗಳಲ್ಲಿ ಮೇಲಿನಿಂದ ಕೆಳಗಿನವರೆಗೆ ವಿನ್ಯಾಸ ಮಾಡುವುದರಿಂದ ಕೈಗಳು ತುಂಬಾ ಅಲಂಕಾರಿತವಾಗಿರುತ್ತದೆ. ಹಬ್ಬ ಹರಿದಿನದಲ್ಲೂ ಹೆಣ್ಣು ಮಕ್ಕಳಿಗಿದು ಅಚ್ಚುಮೆಚ್ಚು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು