ಎಳ್ಳು ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಎಳ್ಳು ಅತ್ಯಂತ ಹಳೆಯ ಎಣ್ಣೆ ಕಾಳುಗಳಲ್ಲಿ ಒಂದಾಗಿದೆ. ಇದು 40 ರಿಂದ 50 ಶೇಕಡ ದಷ್ಟು ತೈಲಾಂಶವನ್ನು ಹೊಂದಿರುವ ಪ್ರಮುಖ ತೈಲ ಇಳುವರಿ ಬೆಳೆಯಾಗಿದೆ. ತಿಲ್ ಅಥವಾ ಜಿಂಜಿಲಿ ಎಂದು ಕರೆಯಲಾಗುವ ಎಳ್ಳು ಅದರ ಬೀಜ, ಪುಡಿ ಅಥವಾ ಎಣ್ಣೆಯನ್ನು ಭಾರತೀಯ ಅಡುಗೆಯಲ್ಲಿ ಬಳಸಲಾಗುತ್ತದೆ. ಎಳ್ಳನ್ನು ಬೇಸಿಗೆ, ಖಾರಿಫ್ ಬೆಳೆಯಾಗಿ ಬೆಳೆಸಲಾಗುತ್ತದೆ.

ಬೀಜದ ವೈವಿಧ್ಯತೆಯನ್ನು ಅವಲಂಬಿಸಿ ಅವುಗಳನ್ನು ಬಿಳಿ, ಹಳದಿ, ಕಪ್ಪು, ಮತ್ತು ಕೆಂಪು ಬಣ್ಣಗಳಂತಹ ವಿವಿಧ ಬಣ್ಣಗಳಲ್ಲಿ ಬರುತ್ತವೆ.

ಎಳ್ಳಿನ ಪ್ರಮುಖ ಉತ್ಪಾದಕರು: ಎಳ್ಳಿನ ಬೀಜವನ್ನು ಭಾರತದ ಪೂರ್ವ ಪಶ್ಚಿಮ ಭಾಗಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಪ್ರಮುಖವಾಗಿ ಪಶ್ಚಿಮ ಬಂಗಾಳ, ಗುಜರಾತ್, ತಮಿಳುನಾಡು, ರಾಜಸ್ಥಾನ ಇತ್ಯಾದಿ.

ಮಣ್ಣಿನ ಅವಶ್ಯಕತೆ: ಬೇಸಿಗೆ ಬೆಳೆ ಖಾರಿಫ್ ಬೆಳೆಯಾಗಿ ಬೆಳೆಯುವ ಎಳ್ಳು ಬೆಳೆ ಆಮ್ಲೀಯ ರೀತಿಯ ಮಣ್ಣಿನಲ್ಲಿ ಚನ್ನಾಗಿ ಬೆಳೆಯುತ್ತದೆ. ಮಣ್ಣಿನಲ್ಲಿ ಯಾವುದೇ ರೀತಿಯ ನೀರಿನ ನಿಶ್ಚಲತೆ ಇರಬಾರದು. ಲವಣಯುಕ್ತ ಮಣ್ಣು ಅಥವಾ ಹೆಚ್ಚು ಮರಳು ಮಿಶ್ರುತ ಮಣ್ಣು ಎಳ್ಳು ಕೃಷಿಗೆ ಸೂಕ್ತವಲ್ಲ.

ಹವಾಮಾನ: ಈ ಬೆಳೆಯನ್ನು 1250 ಮೀ ಎತ್ತರದ ಪ್ರದೇಶಗಳಲ್ಲಿ ಬೆಳೆಯಬಹುದು. ದೀರ್ಘಕಾಳದ ಬರ ಅಥವಾ ಭಾರಿ ಮಳೆಯು ಅದರ ಕೃಷಿಗೆ ಅನುಕೂಲಕರ ಪರಿಸ್ಥಿಯಲ್ಲ. ಎಳ್ಳು ಬೆಳೆ ಉಷ್ಣವಲಯದ ಬೆಳೆಯಾಗಿದ್ದು ಈ ಬೆಳೆಗೆ ಉತ್ತಮ ಇಳುವರಿಗಾಗಿ ಅದರ ಬೆಳವಣಿಗೆಯ ಅವಧಿಯಲ್ಲಿ ಬಿಸಿ ಪರಿಸ್ಥಿತಿಗಳು ಬೇಕಾಗುತ್ತದೆ. ಎಳ್ಳು ಕೃಷಿಗೆ ಉತ್ತಮವಾದ ತಾಪಮಾನವು 25 ಡಿಗ್ರಿ ಯಿಂದ 30 ದಿಗ್ರಿ ನಡುವೆ ಬೇಕಾಗುತ್ತದೆ.

ಎಳ್ಳು ಬೀಜಗಳು ವೈವಿಧ್ಯವನ್ನು ಅವಲಂಬಿಸಿ 3 ರಿಂದ 5 ತಿಂಗಳಲ್ಲಿ ಪಕ್ವವಾಗುತ್ತದೆ. ಎಲೆ ಕಾಂಡಗಳು ಮತ್ತು ಬೀಜಗಳು ಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಸಸ್ಯದ ಕೆಳಗಿನ ಎಲೆಗಳು ಉದುರಲು ಪ್ರಾರಂಭಿಸಿದಾಗ ಕೊಯ್ಲು ಮಾಡಬಹುದು. ಮಾಗಿದ ಎಳ್ಳಿನ ಗಿಡಗಳನ್ನು ನೆಲಮಟ್ಟದಲ್ಲಿ ಕತ್ತರಿಸಿ 7ರಿಂದ 10 ದಿನಗಳ ಕಾಲ ಬಿಸಿಲಿನಲ್ಲಿ ಜೊಡಿಸಿ ಇಡಬೇಕಾಗುತ್ತದೆ.

ಆರೋಗ್ಯ ಪ್ರಯೋಜನಗಳ:
• ಎಳ್ಳು ಉತ್ತಮ ಪ್ರೋಟಿನ್ ಮೂಲವಾಗಿದೆ
• ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ
• ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ
• ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ
• ರಕ್ತ ಹೀನತೆಯನ್ನು ನಿವಾರಿಸುತ್ತದೆ
• ಮುಖದಲ್ಲಿ ಸುಕ್ಕುಗಳನ್ನು ತಡೆಯಲು ಸಹಾಯ ಮಾಡುತ್ತದೆ

Ashika S

Recent Posts

ಗುಜರಾತ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ಭರ್ಜರಿ ಜಯ

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ 152 ರನ್ ಗಳಿಸುವ ಮೂಲಕ ಆರ್‌ಸಿಬಿ…

3 hours ago

147 ರನ್​​ಗೆ ಆಲೌಟ್ ಆದ ಗುಜರಾತ್​ ಟೈಟನ್ಸ್​ : ಆರ್​ಸಿಬಿ ವೇಗಿಗಳ ದಾಖಲೆ ಪ್ರದರ್ಶನ

ಚಿನ್ನಸ್ವಾಮಿ​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು 19.3 ಓವರ್​ಗಳಲ್ಲಿ 147…

4 hours ago

ರಾಜೀನಾಮೆ ನೀಡಿದ ಪೇಟಿಎಂ ಸಿಒಒ ಭವೇಶ್ ಗುಪ್ತಾ

ಪೇಟಿಎಂನ ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ತಮ್ಮ ಹುದ್ದೆಗೆ…

4 hours ago

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ವಿವಿಧಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ…

4 hours ago

ಬೆಂಗಾವಲು ಪಡೆಯ ವಾಹನದ ಮೇಲೆ ಭಯೋತ್ಪಾದಕರ ದಾಳಿ: ಐವರು ಅಧಿಕಾರಿಗಳಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು (ಶನಿವಾರ) ಭಾರತೀಯ ವಾಯುಪಡೆ ಬೆಂಗಾವಲು ಪಡೆ ವಾಹನದ ಮೇಲೆ ಭಯೋತ್ಪಾದಕರು ದಾಳಿ…

5 hours ago

ಬಿ.ವೈ ರಾಘವೇಂದ್ರ ಪರ ಮತಯಾಚನೆ ನಡೆಸಿದ ವೇದವ್ಯಾಸ್ ಕಾಮತ್

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದ ಬಿಜೆಪಿಯ ಬೃಹತ್ ರೋಡ್ ಶೋ ನಲ್ಲಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ವೇದವ್ಯಾಸ್…

5 hours ago