ಲಿಚಿ ಹಣ್ಣಿನ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಲಿಚಿ ಹಣ್ಣು ಚೀನಾ ದೇಶದ ಸ್ಥಳೀಯ ಹಣ್ಣಾಗಿದ್ದು, 17 ನೇ ಶತಮಾನದ ಕೊನೆಯಲ್ಲಿ ಭಾರತಕ್ಕೆ ಪರಿಚಯಿಸಲಾಯಿತು. ಚೀನಾದ ನಂತರ ಭಾರತ ಲಿಚಿ ಹಣ್ಣಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಬಿಹಾರ ಲಿಚಿ ಹಣ್ಣಿನ ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ.

ಭಾರತದಲ್ಲಿ ಈ ಹಣ್ಣುಗಳನ್ನು ಬಿಹಾರ, ಉತ್ತರಾಂಚಲ, ಪಶ್ಚಿಮ ಬಂಗಾಲ, ಪಂಜಾಬ್, ಒರಿಸ್ಸಾ, ಹರಿಯಾಣ ಮುಂತಾದ ರಾಜ್ಯಗಳಲ್ಲಿ ಬೆಳೆಯುತ್ತಾರೆ. ವಿವಿಧ ರಾಜ್ಯಗಳಲ್ಲಿ ವಿವಿಧ ಬಗೆಯ ತಳಿಗಳನ್ನು ಬೆಳೆಯುತ್ತಾರೆ.

ಹವಾಮಾನದ ಅವಶ್ಯಕತೆ: ಈ ಹಣ್ಣುಗಳು ತೇವಾಂಶವುಳ್ಳ ಹವಾಮಾನ ಪರಿಸ್ಥಿತಿಯಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಹಾಗೂ ಈ ಹಣ್ಣಿನ ಗಿಡಗಳಿಗೆ ಮಳೆಯ ಅಗತ್ಯವಿರುತ್ತದೆ. ಲಿಚಿ ಹಣ್ಣಿನ ಮರವು ಹಿಮವನ್ನು ತಡೆದುಕೊಳ್ಳುವುದಿಲ್ಲ. ಆದರೆ ಉತ್ತಮ ಬೆಳವಣಿಗೆ ಮತ್ತು ಇಳುವರಿಗೆ ಮತ್ತು ಹಣ್ಣಿನ ಬೆಳೆಗೆ ಶುಷ್ಕ ಬೇಸಿಗೆ ಮತ್ತು ಲಘು ಚಳಿಗಾಲವು ಉತ್ತಮವಾಗಿರುತ್ತದೆ.

ಮಣ್ಣಿನ ಅವಶ್ಯಕತೆ : ಈ ಹಣ್ಣಿನ ಮರವನ್ನು ವ್ಯಾಪಕ ಶ್ರೇಣಿಯಲ್ಲಿ ಮಣ್ಣಿನಲ್ಲಿ ಬೆಳೆಯಬಹುದು. ಸಾವಯವ ಪದಾರ್ಥಗಳಿಂದ ಸಮೃದವಾಗಿ ಚನ್ನಾಗಿ ಬರಿದುಹೋದ ಲೋಮ್ ಮಣ್ಣು ಲಿಚಿಗೆ ಕೃಷಿಗೆ ಸೂಕ್ತವಾಗಿದೆ.

ನೀರಾವರಿ: ಫಲ ನೀಡುವ ಲಿಚಿ ಮರಗಳಿಗೆ ಮಳೆಗಾಲದಲ್ಲಿ 45 ರಿಂದ 60 ದಿನಗಳ ಮಧ್ಯಂತರದಲ್ಲಿ ಸುಮಾರು 2ರಿಂದ 3 ನೀರಾವರಿಗಳು ಬೇಕಾಗುತ್ತದೆ. ಬೇಸಿಗೆಯ ತಿಂಗಳಿನಲ್ಲಿ ಎರಡು ವಾರಗಳ ಮಧ್ಯಂತರದ್ಲಲಿ ನೀರು ನೀಡಬೇಕಾಗುತ್ತದೆ. ಲಿಚಿ ಹಣ್ಣಿನ ಬೆಳೆಯಲ್ಲಿ ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಳ್ಳಬಹುದು.

ಅರೋಗ್ಯ ಪ್ರಯೋಜನಗಳು :
# ಲಿಚಿ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ
# ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
# ಪಾರ್ಶ್ವವಾಯುವಿನಿಂದ ರಕ್ಷಿಸುತ್ತದೆ
# ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ
# ಮೂಳೆಗಳನ್ನು ಬಲಪಡಿಸುತ್ತದೆ
# ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ

Ashika S

Recent Posts

ಮನೆಯ ಗೇಟ್ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತ್ಯು

ಮನೆಯ ಗೇಟ್ ಮುಂಭಾಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಿರೂರು ಗ್ರಾಮದ ಹಡವಿನಕೋಣೆ ಮುದ್ರುಮಕ್ಕಿ…

3 mins ago

ಐತಿಹಾಸಿಕ ʻಹಲಗಲಿʼ ಕಥೆಗೆ ನಾಯಕನಾದ ನಟರಾಕ್ಷಸ ಧನಂಜಯ್

ಐತಿಹಾಸಿಕ ಕಥೆಯ ʻಹಲಗಲಿʼ ಸಿನಿಮಾಗೆ ನಟ ಡಾಲಿ ಧನಂಜಯ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ. 'ಕೃಷ್ಣ ತುಳಸಿ' ಚಿತ್ರದ ಖ್ಯಾತ ಡೈರೆಕ್ಟರ್‌ ಸುಕೇಶ್‌…

4 mins ago

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ವೇಳೆ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದ ಪ್ರಯಾಣಿಕ!

ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಚೆಕ್ ಇನ್ ಮಾಡುತ್ತಿದ್ದ ವೇಳೆ ಪ್ರಯಾಣಿಕನೊಬ್ಬನ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದ ಘಟನೆ…

9 mins ago

ಮುಂಬೈನ ಮೆಕ್​ಡೊನಾಲ್ಡ್ಸ್​ಗೆ ಬಾಂಬ್​ ಬೆದರಿಕೆ

ಇತ್ತೀಚೆಗೆ ದೇಶದಾದ್ಯಂತ ಬಾಂಬ್‌ ಬೆದರಿಕೆ ಕೇಳಿಬರುತ್ತವೆ ಇದರ ಹಿಂದೆ ಯಾರ ಕೈಚಳಕವಿದೆ ಎಂದು ಇನ್ನು ಬೆಳಕಿಗೆ ಬಂದಿಲ್ಲ. ಈಗಾಗಲೇ ಶಾಲೆಗಳಿಗ,…

20 mins ago

ಅಂಜಲಿ ಅಂಬಿಗೇರ ಸಹೋದರಿ ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿಯಲ್ಲಿ ಹಂತಕನ ದಾಳಿಗೆ ಬಲಿಯಾಗಿರುವ ಅಂಜಲಿ ಅಂಬಿಗೇರ ಕುಟುಂಬಕ್ಕೆ ಭಾರಿ ಸಿಡಿಲು ಬಡಿದಿದೆ.

32 mins ago

ಪತಂಜಲಿಯ ಸೋನ್​ಪಾಪ್ಡಿ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ : ಮೂವರ ಬಂಧನ

 ಪತಂಜಲಿಯ ನವರತ್ನ ಇಲೈಚಿ ಸೋನ್ ಪಾಪ್ಡಿ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ನಂತರ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಅಧಿಕಾರಿ ಮತ್ತು ಇತರ…

37 mins ago