ಪುದೀನಾ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಮಿಂಟ್ ಎಂದು ಕರೆಯಲ್ಪಡುವ ಪುದೀನಾ ಒಂದು ಸುಗಂಧಭರಿತ ಮೂಲಿಕೆಯಾಗಿದ್ದು ಇದನ್ನು ಭಾರತದಲ್ಲಿ ಅನೇಕ ಆಹಾರ ಪದಾರ್ಥಗಳಿಗೆ ಸುವಾಸನೆಯುಕ್ತ ಪದಾರ್ಥವಾಗಿ ಬಳಸುತ್ತಾರೆ. ಮುಖ್ಯವಾಗಿ ಉತ್ತರ ಭಾರತದಲ್ಲಿ ಪುದೀನಾವನ್ನು ಹೆಚ್ಚಾಗಿ ಬಳಸುತ್ತಾರೆ. ಪುದೀನಾ ಎಣ್ಣೆಯನ್ನು ಟೂತ್ ಪೇಸ್ಟ್ ಗಳಲ್ಲಿ ಹಾಗೂ ಬಾಯಿಯ ದುರ್ಗಂಧ ಕಡಿಮೆ ಗೊಳಿಸಲು ಬಳಸುತ್ತಾರೆ.

ಪುದೀನಾ ವಿಧಗಳು: ಜಪಾನೀಸ್ ಮಿಂಟ್ ಅಥವಾ ಮೆಂಥೋಲ್ ಮಿಂಟ್, ಸ್ಪಿಯರ್ಮಿಂಟ್, ಪುದೀನಾ, ಬರ್ಗಮಾಟ್ ಮಿಂಟ್, ಜಪಾನೀಸ್ ಪುದೀನಾ ಭಾರತದಲ್ಲಿ ಹೆಚ್ಚು ವ್ಯಾಪಕವಾಗಿ ಬೆಳೆಯುವ ವಾಣಿಜ್ಯ ಬೆಳೆಯಾಗಿದೆ.

ಹವಾಮಾನ: ಸಾಮಾನ್ಯವಾಗಿ ಉಷ್ಣವಲಯದ ಹವಾಮಾನವು ಪುದೀನಾ ಕೃಷಿಗೆ ಸೂಕ್ತವಲ್ಲ. ಅದಾಗಿಯೂ ಜಪಾನೀಸ್ ಪುದೀನಾ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಬೆಳೆಸಬಹುದು. ಪುದೀನಾ ಕೃಷಿಗೆ ೨೦ ಡಿಗ್ರಿಯಿಂದ ೪೦ ಡಿಗ್ರಿ ವರೆಗೆ ಇರಬೇಕಾಗುತ್ತದೆ. ನೆಟ್ಟ ಸಮಯದಲ್ಲಿ ಲಘು ಮಳೆ ಮತ್ತು ಕೊಯ್ಲು ಹಂತದಲ್ಲಿ ಉತ್ತಮ ಬಿಸಿಲು ಅಗತ್ಯವಾಗಿರುತ್ತದೆ.

ಮಣ್ಣಿನ ಅವಶ್ಯಕತೆ: ಲೋಮ ಅಥವಾ ಮರಳು ಮಿಶ್ರಿತ ಸಾವಯವ ಪದಾರ್ಥಗಳಿಂದ ಸಮೃದ್ದವಾಗಿರುವ ಆಳವಾದ ಮಣ್ಣು ಈ ಕೃಷಿಗೆ ಉತ್ತಮ. ಹೊಲದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ. ಪುದೀನಾವನ್ನು ಕಪ್ಪು ಮತ್ತು ಕೆಂಪು ಮಣ್ಣಿನಲ್ಲಿ ಬೆಳೆಯಬಹುದಾಗಿದೆ.
ಮಳೆಗಾಲ ಪ್ರಾರಂಭವಾಗುವ ಮೊದಲು ಅಥವಾ ಉತ್ತರ ಭಾರತದಲ್ಲಿ ಜಪಾನಿಸ್ ಪುದೀನಾವನ್ನು ಫೆಬ್ರವರಿ ೧ನೇ ವಾರದಿಂದ ಮಾರ್ಚ್ ೨ನೇ ವಾರದವೆರೆಗೆ ನೆಡುವುದು ಸೂಕ್ತ.

ಆರೋಗ್ಯ ಪ್ರಯೋಜನಗಳು:
• ಪುದೀನಾ ಜೀರ್ಣಕ್ರಿಯೆ, ಹೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ವಾಕರಿಕೆ ಮತ್ತು ತಲೆನೋವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
• ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ.
• ಅಸ್ತಮಾ ರೋಗಿಗಳಿಗೆ ಸಹಾಯ ಮಾಡುತ್ತದೆ.
• ಪುದೀನಾ ಖಿನ್ನತೆ ಮತ್ತು ಆಯಾಸಕ್ಕೆ ಸಹಾಯ ಮಾಡುತ್ತದೆ.

Ashika S

Recent Posts

ಜಿಲ್ಲಾಧಿಕಾರಿಗಳಿಂದ ವಿಶ್ವಗುರು ಬಸವಣ್ಣನಿಗೆ ಪುಷ್ಪ ನಮನ

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 891 ಜಯಂತ್ಯೋತ್ಸವ ಅಂಗವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ…

9 mins ago

ಮದುವೆ ಮನೆಯ ಊಟ ಸೇವಿಸಿ ನೂರಾರು ಮಂದಿ ಅಸ್ವಸ್ಥ

ಮದುವೆ ಮನೆಯಲ್ಲಿ ಊಟ ಮಾಡಿದ ನೂರಾರು ಮಂದಿ ಏಕಾಏಕಿ ಅಸ್ವಸ್ಥಗೊಂಡ ಘಟನೆ ಚಿತ್ರದುರ್ಗ ತಾಲೂಕಿನ ಕಾಲ್ಗೆರೆ ಗ್ರಾಮದಲ್ಲಿ ನಡೆದಿದೆ.

20 mins ago

ಕಾಂಗ್ರೆಸ್ ಪರ ಮತ ಹಾಕಿಸಿದ್ದಕ್ಕೆ ಯುವಕನ ಕೊಲೆ

ಚುನಾವಣೆ ಮುಗಿದರೂ ಹಗೆತನ ಮುಗಿಯಲಿಲ್ಲ. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಯುವಕನೊಬ್ಬ ಕೊಲೆಯಾಗಿದ್ದಾನೆ. ಜಾವೀದ್ ಚಿನ್ನಮಳ್ಳಿ (25)ಹತ್ಯೆಯಾದವನು. ಕಲಬುರಗಿಯ ಅಫಜಲಪುರ…

34 mins ago

ಆನ್‌ಲೈನ್ ಟ್ರೇಡಿಂಗ್: 17.35 ಲಕ್ಷ ರೂ. ವಂಚನೆ

ಆನ್‌ಲೈನ್ ಪಾರ್ಟ್‌ಟೈಮ್ ಕೆಲಸ ಹಾಗೂ ಆನ್‌ಲೈನ್ ಟ್ರೇಡಿಂಗ್ ಮೇಸೆಜ್ ನ‌ ಬಲೆಗೆ ಬಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ 17.35 ಲಕ್ಷ ರೂ.…

55 mins ago

ಬಿಸಿಲಿನ ತಾಪ, ಮೇವಿನ ಕೊರತೆಯಿಂದ ಸಾವಿಗೀಡಾಗುತ್ತಿವೆ ಸಾಕುಪ್ರಾಣಿಗಳು

ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಸಮರ್ಪಕ ಮೇವು ದೊರಕದೆ ಕಾಡಂಚಿನ ಗ್ರಾಮಗಳ ಜಾನುವಾರು, ಸಾಕುಪ್ರಾಣಿಗಳು ಸಾವಿಗೀಡಾಗುತ್ತಿವೆ.

1 hour ago

ದೊಡ್ಡಬಳ್ಳಾಪುರ: ಹಳೇ ದ್ವೇಷಕ್ಕೆ ಯುವಕನ ಕತ್ತು ಕುಯ್ದು ಕೊಲೆ

ಹಳೇ ದ್ವೇಷಕ್ಕೆ ನಡುರಸ್ತೆಯಲ್ಲಿ ಯುವಕನ ಕತ್ತು ಕುಯ್ದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗದಲ್ಲಿ ನಡೆದಿದೆ.

1 hour ago