News Karnataka Kannada
Monday, April 29 2024
ಅಂಕಣ

ಮುಖದ ಮೇಲಿನ ಕಪ್ಪು ಕಲೆ ನಿವಾರಣೆಗೆ ಇಲ್ಲಿದೆ ಪರಿಹಾರ

ಮುಖದ ಮೇಲೆ ಕಪ್ಪು ಕಲೆಗಳು ಮೂಡುವುದರಿಂದ ಮುಖದ ಸೌಂದರ್ಯ ಹಾಳಾಗುತ್ತದೆ.
Photo Credit :

ಮುಖದ ಮೇಲೆ ಕಪ್ಪು ಕಲೆಗಳು ಮೂಡುವುದರಿಂದ ಮುಖದ ಸೌಂದರ್ಯ ಹಾಳಾಗುತ್ತದೆ. ಇದರಿಂದ ಪಾರಾಗಲು ಇಂದು ನಾವು ಕೆಲವೊಂದು ರೆಮಿಡಿಗಳ ಬಗ್ಗೆ ತಿಳಿದುಕೊಳ್ಳೋಣ. ತುಪ್ಪದಿಂದ ಹಲವಾರು ಪ್ರಯೋಜನಗಳಿವೆ. ಇತ್ತ ತುಪ್ಪ ಸೇವಿಸೋದರಿಂದ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ಸೌಂದರ್ಯ ದೃಷ್ಟಿಯಿಂದಲೂ ಈ ತುಪ್ಪ ಭಾರೀ ಸಹಕಾರಿಯಾಗಿದೆ. ಹಾಗಾದರೆ ಈ ತುಪ್ಪ ಮುಖದ ಅಂದ ಹೆಚ್ಚಿಸಲು ಹೇಗೆ ಸಹಕಾರಿ ಎಂಬುದನ್ನು ತಿಳಿಯೋಣ. ತುಪ್ಪವನ್ನು ಮುಖದ ಮೇಲಿನ ಕಪ್ಪು ಕಲೆಗಳ ಮೇಲೆ ಲೇಪಿಸುವುದರಿಂದ ಚರ್ಮದ ಮೇಲಿನ ಎಲ್ಲಾ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ. ಜೊತೆಗೆ ಮುಖದ ಅಂದ ಹೆಚ್ಚುತ್ತದೆ. ಈ ರೆಮಿಡಿಯನ್ನು ಒಂದು ಎರಡು ದಿನ ಮಾಡಿ ಬಿಡಬೇಡಿ ಕ್ರಮೇಣ ಮಾಡಿದರೆ ಉತ್ತಮ ರಿಸಲ್ಟ್ ಪಡೆಯಬಹುದು.

ಟೀ-ಬ್ಯಾಗ್ ಅನ್ನು ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿಟ್ಟು ಅದು ತಣ್ಣಗಾದಾಗ, ಅವುಗಳನ್ನು ಕಣ್ಣುಗಳ ಮೇಲೆ ಇರಿಸಿ. ದಿನಕ್ಕೆ ಎರಡು ಬಾರಿಯಾದರೂ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿದ್ರೆ ಕಪ್ಪು ಕಲೆಗಳು ಮಾಯವಾಗುತ್ತದೆ.

ಇನ್ನು  ತ್ವಚೆ ಒಣಗಿದ್ದರೆ ಸ್ವಲ್ಪ ಹಾಲಿಗೆ ಅರ್ಧ ಚಮಚ ಎಳ್ಳೆಣ್ಣೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ, ನೀರಿನಲ್ಲಿ ನೆನೆಸಿದ ಹತ್ತಿ ಉಣ್ಣೆಯಿಂದ ಮುಖವನ್ನು ಒರೆಸಿ. ಇದು ಕ್ರಮೇಣ ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸುತ್ತದೆ.

ಆಲೂಗಡ್ಡೆಯನ್ನು ಸ್ಲೈಸ್ ಆಗಿ ಕತ್ತರಿಸಿಕೊಂಡು, ಅದನ್ನು ಕಪ್ಪು ಕಲೆಗಳ ಮೇಲೆ ನೇರವಾಗಿ ಉಜ್ಜಿ, ಸ್ವಲ್ಪ ಸಮಯ ಹಾಗೆ ಬಿಡಿ ಅಥವಾ ಅರಿಶಿನದ ಪುಡಿ ಮತ್ತು ಸ್ವಲ್ಪ ನಿಂಬೆ ರಸದೊಂದಿಗೆ ಆಲೂಗಡ್ಡೆ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಪ್ಪು ಕಲೆ ಇರುವಲ್ಲಿಗೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದು ಕೊಳ್ಳಿ.

ಶ್ರೀಗಂಧದ ಪುಡಿ, ಗ್ಲಿಸರಿನ್, ಗುಲಾಬಿ ನೀರನ್ನು ಚೆನ್ನಾಗಿ ಮಿಶ್ರಣ ಮಾಡಿ ಕಪ್ಪು ಕಲೆಯಾದ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಹೀಗೆ ಕ್ರಮೇಣ ಮಾಡಿದರೆ ಉತ್ತಮ ರಿಸಲ್ಟ್ ಪಡೆಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು