News Karnataka Kannada
Monday, May 06 2024
ಅಂಕಣ

ಮುಖದ ಅಂದ ಹೆಚ್ಚಿಸಿಕೊಳ್ಳಲು ಹೆಸರುಕಾಳಿನ ಫೇಸ್ ಪ್ಯಾಕ್

Green gram face pack to enhance the look of the face
Photo Credit : Freepik

ಹೆಸರುಕಾಳು ಸೌಂದರ್ಯ ವರ್ಧಕ ಗುಣವನ್ನು ತನ್ನೊಳಗೆ ಇರಿಸಿಕೊಂಡಿದ್ದು, ಇದು ಮುಖದ ಸೌಂದರ್ಯ ವೃದ್ಧಿಗೆ ಹಾಗೂ ಮುಖದ ಹಲವಾರು ಸಮಸ್ಯೆಗಳಿಂದ ಪಾರಾಗಲು ಸಹಕಾರಿಯಾಗಿದೆ. ಈ ಹೆಸರು ಕಾಳಿನ ಫೇಸ್ ಪ್ಯಾಕ್ ಮಾಡಲು ಮೊದಲಿಗೆ ಹೆಸರುಕಾಳನ್ನು ನೀರಿನಲ್ಲಿ ನೆನೆಹಾಕಿ ಹಾಕಿ ಮಾರನೇ ದಿನ ಬೆಳಿಗ್ಗೆ ಅದರಿಂದ ಪೇಸ್ಟ್ ತಯಾರಿಸಿಕೊಂಡು ಅದಕ್ಕೆ ಒಂದು ಸ್ಪೂನ್ ಜೇನುತುಪ್ಪ ಮತ್ತು ಒಂದು ಸ್ಪೂನ್ ಬಾದಾಮಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ ಇದರಿಂದ ಚರ್ಮದ ಹೊಳಪು ಕ್ರಮೇಣ ಹೆಚ್ಚಾಗುತ್ತದೆ.

ಸಾಮಾನ್ಯವಾಗಿ ಕೆಲವು ಮಹಿಳೆಯರಿಗೆ ಮುಖದ ಮೇಲೆ ಸಣ್ಣ ಸಣ್ಣ ಕೂದಲು ಕಾಣಿಸುತ್ತದೆ. ಇದರ ನಿವಾರಣೆಗೆ ಹೆಸರುಕಾಳನ್ನು ನೆನೆಹಾಕಿ ಪೇಸ್ಟ್ ತಯಾರು ಮಾಡಿಕೊಂಡು ಇದಕ್ಕೆ ಎರಡು ಚಮಚ ಶ್ರೀಗಂಧದ ಪುಡಿ ಮತ್ತು ಎರಡು ಚಮಚ ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಸ್ವಲ್ಪ ಹಾಲು ಸೇರಿಸಿ ಪೇಸ್ಟ್ ತಯಾರಿಸಿಕೊಂಡು ಮುಖ ಹಾಗೂ ಕುತ್ತಿಗೆ ಭಾಗದ ಚರ್ಮದ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ.ನಂತರ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು. ಇದರಿಂದ ಮುಖದ ಮೇಲೆ ಕಾಣಿಸಿಕೊಳ್ಳುವ ಕೂದಲುಗಳು ಮಾಯವಾಗುತ್ತದೆ.

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು, ಹೆಸರು ಕಾಳನ್ನು ಅರೆದು ಅದಕ್ಕೆ ಹಸಿ ಹಾಲು, ರೋಸ್ ವಾಟರ್ ಬೆರೆಸಿ ನೇರವಾಗಿ ಮುಖಕ್ಕೆ ಹಚ್ಚಿದರೆ ಉತ್ತಮ ರಿಸಲ್ಟ್ ಪಡೆಯಬಹುದು.

ಹೆಸರುಕಾಳಿಗೆ ಒಂದು ಚಮಚ ಅರಿಶಿನ ಮತ್ತು ಹಾಲನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಂಡು ಇದನ್ನು ಮುಖದ ಮತ್ತು ಕುತ್ತಿಗೆಗೆ ಲೇಪಿಸಿಕೊಂಡು ಒಣಗಿದ ಮೇಲೆ ತೊಳೆಯಿರಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಹೆಸರುಕಾಳನ್ನು ನೆನೆಹಾಕಿ ಬೆಳಿಗ್ಗೆ ಪೇಸ್ಟ್ ತಯಾರಿಸಿಕೊಂಡು ಅದಕ್ಕೆ ಎರಡು ಟೇಬಲ್ ಸ್ಪೂನ್ ತುಪ್ಪವನ್ನು ಮಿಕ್ಸ್ ಮಾಡಿ. ಈ ಪೇಸ್ಟನ್ನು ಚರ್ಮದ ಮೇಲೆ ಮಸಾಜ್ ಮಾಡಿದರೆ ಕ್ರಮೇಣ ಮುಖದ ಮೊಡವೆಗಳು ಮಾಯವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು