News Karnataka Kannada
Sunday, May 05 2024
ಅಂಕಣ

ಕೂದಲಿನ ಅಂದ ಹೆಚ್ಚಿಸಿಕೊಳ್ಳಲು ಬಳಸಿ ಮೆಂತ್ಯಕಾಳಿನ ಹೇರ್ ಪ್ಯಾಕ್

Fenugreek hair pack used to enhance the beauty of hair
Photo Credit : Freepik

ಸೌಂದರ್ಯ ಪ್ರಿಯೆ ಹೆಣ್ಣು ತನ್ನ ಸೌಂದರ್ಯ ವೃದ್ಧಿಗೆ ಹಲವಾರು ಹೊಸ ಹೊಸ ಪ್ರಯೋಗಗಳನ್ನು ಅನುಸರಿಸುತ್ತಾಳೆ. ಇದು ಕೆಲವೊಮ್ಮೆ ಉತ್ತಮ ರಿಸಲ್ಟ್ ಕೊಡಬಹುದು, ಕೆಲವೊಮ್ಮೆ ಸಮಸ್ಯೆಗಳನ್ನು ತಂದೊಡ್ಡುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು. ಸೌಂದರ್ಯ ಎಂದಾಗ ಯುವತಿಯರು ಕೇಶದ ಬಗ್ಗೆಯೂ ಅತೀವ ಕಾಳಜಿವಹಿಸುತ್ತಾರೆ. ಏಕೆಂದರೆ ಮುಖದ ಅಂದವನ್ನು ಹೆಚ್ಚಿಸುವಲ್ಲಿ ಕೇಶ ವಿನ್ಯಾಸವೂ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಕೂದಲು ಚೆನ್ನಾಗಿದ್ದರೆ ಕೇಶ ವಿನ್ಯಾಸವನ್ನು ಅಚ್ಚುಕಟ್ಟಾಗಿ ಮುಖಕ್ಕೆ ಒಪ್ಪುವಂತಹ ವಿನ್ಯಾಸ ಮಾಡಲು ಸಹಾಯವಾಗುತ್ತದೆ. ಹೀಗೆ ಮಾಡಿದಾಗ ಮುಖ ಅಂದವಾಗಿ ಕಾಣುತ್ತದೆ.

ಕೂದಲು ಉದ್ದ ಮತ್ತು ದಪ್ಪವಾಗಿ ಹೊಳೆಯುವಂತೆ ಮಾಡುವಲ್ಲಿ ಮೆಂತ್ಯ ಹೇರ್ ಪ್ಯಾಕ್ ಸಹಕಾರಿಯಾಗಿದೆ. ಇದಕ್ಕಾಗಿ ಕೆಲವೂಂದು ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ. ಮೊದಲಿಗೆ, ಮೆಂತ್ಯೆಯನ್ನು ನೀರಿನಲ್ಲಿ ನೆನೆಹಾಕಿ ನಂತರ ಇದರಿಂದ ಪೇಸ್ಟ್‌ ಸಿದ್ಧಪಡಿಸಿ. ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಶಾಂಪೂ ಬಳಸಿ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿ.
ಹೀಗೆ ಮಾಡುವುದರಿಂದ ಕೋಮಲವಾದ ಕೇಶರಾಶಿಯನ್ನು ಪಡೆದುಕೊಳ್ಳಬಹುದು.

ಈಗ ಸಣ್ಣ ವಯಸ್ಸಿನಲ್ಲೇ ಯುವಕ ಯುವತಿಯರು ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಲ್ಲಲ್ಲಿ ಬಿಳಿ ಕೂದಲು ಹಟ್ಟುದರಿಂದ ಇದು ಯುವ ಪೀಳಿಗೆಯ ಕೇಶ ಸೌಂದರ್ಯವನ್ನು ಹಾಳುಮಾಡುತ್ತದೆ. ಆದ್ದರಿಂದ ಈ ಸಮಸ್ಯೆಯಿಂದ ಪಾರಾಗಲು ಮೆಂತ್ಯ ಹೇರ್‌ ಪ್ಯಾಕ್‌ ಟ್ರೈ ಮಾಡಿ. ಈ ಫೇಸ್ ಪ್ಯಾಕ್ ತಯಾರಿಸಲು ಮೊದಲಿಗೆ ಮೆಂತ್ಯವನ್ನು ರುಬ್ಬಿ, ಪೇಸ್ಟ್‌ ತಯಾರಿಸಿ ನಂತರ ಅದಕ್ಕೆ ನಿಂಬೆ ರಸವನ್ನು ಬೆರೆಸಿ. ನಂತರ ಆ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿ.

‌ಕೂದಲಿನ ಕಾಂತಿ ಹೆಚ್ಚಿಸಲು ಈ ಹೇರ್ ಪ್ಯಾಕ್ ಟ್ರೈ ಮಾಡಿ. ಮೆಂತ್ಯೆಯನ್ನು ನೆನೆಯಲು ಹಾಕಿ ಪೇಸ್ಟ್ ತಯಾರಿಸಿ ನಂತರ ಈ ಪೇಸ್ಟ್ ಅನ್ನು ಒಂದು ಮೊಟ್ಟೆಯೊಂದಿಗೆ ಮಿಶ್ರ ಮಾಡಿ. ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಡಿ ನಂತರ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು