News Karnataka Kannada
Monday, April 29 2024
ಅಂಕಣ

ಸುಂದರ ಕಾಂತಿಯುತ ಚರ್ಮಕ್ಕಾಗಿ ಮೆಂತ್ಯೆ ಕಾಳಿನ ಫೇಸ್ ಪ್ಯಾಕ್

Fenugreek corn face pack for beautiful glowing skin
Photo Credit : Freepik

ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನು ಹಚ್ಚಿ ಸೌಂದರ್ಯ ವೃದ್ಧಿ ಮಾಡಿಕೊಳ್ಳುವ ಬದಲು ಮನೆಯಲ್ಲೇ ಇರುವಂತಹ ವಸ್ತುಗಳನ್ನು ಬಳಕೆಮಾಡಿಕೊಂಡು ಸೌಂದರ್ಯ ವೃದ್ಧಿಸಿಕೊಂಡರೆ ಉತ್ತಮ ಹಾಗೂ ಆರೋಗ್ಯವಂತ ರಿಸಲ್ಟ್ ಪಡೆಯಬಹುದು. ಅಡುಗೆ ಕೋಣೆಯಲ್ಲಿ ಸಿಗುವ ಹಲವಾರು ಪದಾರ್ಥಗಳು ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲಿ ಮೆಂತ್ಯೆ ಕಾಳು ಕೂಡ ಸೇರಿಕೊಂಡಿದೆ. ಇದನ್ನು ಬಳಸಿಕೊಂಡು ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಮುಖದ ಸೌಂದರ್ಯವನ್ನು ಕೆಡಿಸುವಂತಹ ಮೊಡವೆ ಸಮಸ್ಯೆ, ಬ್ಲಾಕ್ಹೆಡ್ಸ್, ಕಪ್ಪು ಕಲೆ, ಬಿಸಿಲಿನಿಂದ ಆಗುವಂತಹ ಟ್ಯಾನ್ ಇಂಥಹ ಸಮಸ್ಯೆಗಳಿಂದ ದೂರಾಗ ಬಹುದು.

ಮೆಂತ್ಯ ಮತ್ತು ನಿಂಬೆಯ ಫೇಸ್ ಪ್ಯಾಕ್ ಮಾಡಲು, ಮೆಂತ್ಯ ಬೀಜಗಳನ್ನು ಬಿಸಿ ನೀರಿನಲ್ಲಿ ನೆನೆಸಿಡಿ. ನಂತರ, ನೆನೆಸಿದ ಮೆಂತ್ಯಯಿಂದ ಪೇಸ್ಟ್ ತಯಾರಿಸಿ. ಇಲ್ಲದಿದ್ದರೆ ಮೆಂತ್ಯ ಬೀಜಗಳನ್ನು ರಾತ್ರಿ ರೋಸ್ ವಾಟರ್‌ನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಅದನ್ನು ಪೇಸ್ಟ್‌ ಮಾಡಿ. ಈಗ ತಯಾರಾದ ಮೆಂತ್ಯ ಪೇಸ್ಟ್‌ಗೆ ಅರಿಶಿನ ಮತ್ತು ನಿಂಬೆ ರಸವನ್ನು ಸೇರಿಸಿ. ನಂತರ ಚೆನ್ನಾಗಿ ಮಿಶ್ರಣ ಮಾಡಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಸ್ವಲ್ಪ ಸಮಯದ ಬಳಿಕ ಸ್ವಚ್ಚ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಜೊತೆಗೆ ಈ ಫೇಸ್ ಪ್ಯಾಕ್ ತ್ವಚೆಯಲ್ಲಿ ಕೊಳೆಯನ್ನು ಸಂಪೂರ್ಣವಾಗಿ ತೊಡೆದು ಹಾಕುತ್ತದೆ.

ಮೆಂತ್ಯಕಾಳುಗಳನ್ನು ನೆನೆಸಿಟ್ಟು ಚೆನ್ನಾಗಿ ಪೇಸ್ಟ್ ಮಾಡಿ, ಅದಕ್ಕೆ ಮೊಸರು, ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಚೆನ್ನಾಗಿ ಮುಖ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಚರ್ಮ ಮೃದುವಾಗುತ್ತದೆ. ಇನ್ನು ಮೆಂತ್ಯ ಕಾಳಿನ ಮಿಶ್ರಣವನ್ನು ತ್ವಚೆಗೆ ಅನ್ವಯಿಸುವುದರಿಂದ ಮೊಡವೆ ಸಮಸ್ಯೆಯಿಂದ ಪಾರಾಗಬಹುದು.

ಒಂದು ಲೋಟ ನೀರಿನಲ್ಲಿ ಮೆಂತ್ಯೆ ಬೀಜಗಳನ್ನು ಹಾಕಿ ಕುದಿಸಿ. ಕುದಿಸಿ, ನಂತರ ನೀರು ತಣ್ಣಗಾದ ನಂತರ ಮುಖಕ್ಕೆ ಹಚ್ಚಿ ಒಂದರಿಂದ ಎರಡು ಗಂಟೆಗಳ ಕಾಲ ಬಿಡಿ. ಇನ್ನೊಂದು ವಿಧಾನ ಮೆಂತ್ಯೆ ಕಾಳನ್ನು ರಾತ್ರಿಯಿಡೀ ನೆನೆಸಿಡಿ ನಂತರ ಅದನ್ನು ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಹಚ್ಚಿ ಚೆನ್ನಾಗಿ ಒಣಗಲು ಬಿಡಿ. ನಂತರ ಶುದ್ಧ ನೀರಿನಿಂದ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು