ಅಂಕಣ

ತಾಯಿಯ ಪ್ರತಿ ರೂಪ ಅತ್ತೆ, ಸೊಸೆಯ ರೂಪದಲ್ಲಿ ಮಗಳು

ಮಹಡಿ ಮೇಲೆ ಇಬ್ಬರು ಮಹಿಳೆಯರು ನಿಂತಿರುತ್ತಾರೆ. ಅಷ್ಟರಲ್ಲಿ ಯಾರೊದೊ ಮದುವೆ ದಿಬ್ಬಣ ಬರತ್ತಾ ಇರುತ್ತದೆ. ದಿಬ್ಬಣದ ಹಾಡಿಗೆ ನಿಂತಲ್ಲಿಯೇ ಕಾಲು ಕುಣಿಸಲು ಶುರುಮಾಡುತ್ತಾರೆ. ಸ್ವಲ್ಪದರಲ್ಲಿಯೇ ತುಂಬಿದ ಜನಜಂಗುಳಿಯ ಮಧ್ಯೆ ಈ ಇಬ್ಬರು ಮಹಿಳೆಯರು ಕುಣಿಯಲು ಶುರು ಮಾಡುತ್ತಾರೆ. ಇದು ಜಾಹೀರಾತಿನ ಒಂದು ಸಣ್ಣ ತುಣುಕು.

ಸಂಬಂಧಗಳು, ಯೋಚನೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಅತ್ತೆಯಾದವಳು ಮನೆಗೆ ಬರುವ ಸೊಸೆಗೆ ಒಳ್ಳೆ ಅಮ್ಮನೂ ಆಗಬಹುದು. ಸೂಸೆ ಒಬ್ಬ ಒಳ್ಳೆಯ ಮಗಳು ಆಗಬಹುದು. ಇವರಿಬ್ಬರು ಮನಸ್ಸು ಮಾಡಿದಲ್ಲಿ ಮನೆಯ ವಾತಾವರಣವನ್ನು ಸ್ವರ್ಗದಂತಿರಿಸಬಹುದು.
ಅತ್ತೆಯಾದವಳು ಸೊಸೆಯನ್ನು ಮಗನ ಹೆಂಡ್ತಿ ಎನ್ನುವ ಮನೋಭಾವದಿಂದ ನೋಡುವ ಬದಲು ಸೊಸೆ ರೂಪದಲ್ಲಿ ಮಗಳು ಸಿಕ್ಕಿದ್ದಾಳೆ ಅಂದುಕೊಂಡರೆ ಅತ್ತೆ ಸೊಸೆ ಕಾದಾಟಕ್ಕೆ ಅವಕಾಶವೇ ಇರುವುದಿಲ್ಲ.

ಹೊಸದಾಗಿ ಮದುವೆಯಾಗಿ ಬಂದಿರುವ ಆ ಹೆಣ್ಣು ಮಗಳ ಮನಸ್ಥಿಯನ್ನು ಅರ್ಥ ಮಾಡಿಕೊಂಡು ನಡೆಯುವುದು ಉತ್ತಮ. ತನ್ನ ಮಗನ ಬಾಳನ್ನು ಬೆಳಗಿಸ ಬಂದಿರುವಳು ಮಗನನ್ನು ಕಿತ್ತುಕೊಳ್ಳಲು ಬಂದಿಲ್ಲ ಅನ್ನುವುದನ್ನು ಅರಿತು ಬಾಳಬೇಕು.

ಸೊಸೆ ಮಾತು ಮಾತಿಗೂ ಅತ್ತೆಯ ಬಳಿ ಸಲಹೆ ಸೂಚನೆಗಳನ್ನು ಕೇಳಬಹುದು. ಅಥಾವ ಕೇಳದೆನೇ ಇರಬಹುದು ಅದು ಅವಳ ವೈಯಕ್ತಿಕ ವಿಷಯವಾಗಿರುತ್ತದೆ. ಅದನ್ನು ಪ್ರಶ್ನಿಸಬಾರದು. ಆದರೆ ಇದು ಎಲ್ಲ ಸಂದರ್ಭದಲ್ಲೂ ಅನ್ವಯಾವಾಗದಿರಲಿ.

ತೀರಾ ಖಾಸಗಿ ವಿಷಯಗಳಿಗೆ ಆಸಕ್ತಿ ತೋರಿಸುವ ಅವಶ್ಯಕತೆ ಬೇಡ. ಕೆಲವೊಂದು ನಿರ್ಧಾರಗಳು ಅವರಿಗೆ ಬಿಟ್ಟು ಬಿಡಬೇಕು. ಅತ್ತೆಯಾದವಳು ಸೊಸೆಯನ್ನು ಮಗನ ಹೆಂಡ್ತಿ , ಮೊಮ್ಮಕ್ಕಳ ತಾಯಿ ಈ ಎರಡು ರೂಪದಲ್ಲಿ ಅವಳನ್ನು ಗೌರವಿಸಬೇಕು.

ಸೊಸೆ ಮಕ್ಕಳನ್ನು ಬೆಳೆಸುವ ರೀತಿ, ಅತ್ತೆ ಮಕ್ಕಳನ್ನು ಬೆಳೆಸಿದ ರೀತಿ ಕೊಂಚ ಭಿನ್ನವಾಗಿರಬಹುದು.

ಆಧುನಿಕ ಸೊಸೆ ಮನೆ, ಕೆಲಸ ಎರಡನ್ನು ನಿಭಾಯಿಸುವಾಗ ಮಕ್ಕಳ ವಿಷಯದಲ್ಲಿ ಕೊಂಚ ತಪ್ಪಾಗಿ ಕಾಣಬಹುದು ಅದನ್ನು ಸರಿಪಡಿಸುವಲ್ಲಿ ಅತ್ತೆ ಮುಂದಿರಬೇಕು.

ಸೊಸೆಯಾದವಳು ಅತ್ತೆಯನ್ನು ತನ್ನ ತಾಯಿ ಎಂದುಕೊಂಡರೆ ತವರು ಮನೆಯವರ ಪ್ರೀತಿ ಕಾಳಜಿ ಸದಾ ಅವಳಿಗೆ ಗಂಡನ ಮನೆಯಲ್ಲಿಯೂ ಸಿಗುತ್ತದೆ.

ಗಂಡನ ಮನಸ್ಸು ಗೆಲ್ಲುವ ಸಲುವಾಗಿ ಅತ್ತೆಯ ಜೊತೆಗೆ ಪೈಪೋಟಿ ಮಾಡುವ ಬದಲು ಇಬ್ಬರು ಸೇರಿ ಗಂಡಿನ ಜೀವನವನ್ನು ಹಸಾನಾಗಿಸಬಹುದು.
ಅತ್ತೆ ಸೊಸೆಯ ಜಗಳ ಮನೆ ಮನಸ್ಸು ಮುರಿಯುತ್ತದೆ. ಬದಲಾಗಿ ಹೊಂದಾಣಿಕೆ ಅರಿತು ಬಾಳುವುದು ಮುಖ್ಯ.

ಸಂಬಂದಗಳನ್ನು ಬೆಸೆಯುವ ಸೊಸೆಯಾಬೇಕೆ ಹೊರತು ಮನೆ ಮುರಿಯುವ ಹೆಣ್ಣಾಗಬಾರದು. ಮನೆ ಮಂದಿಯನ್ನು ಪ್ರೀತಿಸುವ, ಗೌರವಿಸುವ, ಸಂಸ್ಕಾರಯುತವಾಗಿ ಎಲ್ಲರ ಮನ ಗೆಲ್ಲುವ ಪ್ರಯತ್ನ ಮಾಡಬೇಕು.

ಮನೆಯ ಪ್ರತಿ ಸದಸ್ಯರ ಬೇಕು ಬೇಡಗಳನ್ನು ಅರಿತು ಬಾಳುವುದು ಸೊಸೆಗೆ ತುಂಬಾ ಅವಶ್ಯಕ.

Ashika S

Recent Posts

ಬಸ್ ಹತ್ತುವಾಗ ಆಯಾತಪ್ಪಿ ಬಿದ್ದ ಮಹಿಳೆ : ಚಕ್ರಕ್ಕೆ ಸಿಲುಕಿ ಸಾವು

ಬಸ್ ಹತ್ತುವಾಗ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನಪ್ಪಿರುವ ಘಟನೆ . ಶಿವಮೊಗ್ಗದ ಸಾಗರ ತಾಲೂಕಿನ ಅಂಬಾರಗೋಡ್ಲು-ಹೊಳೆಬಾಗಿಲು ಬಳಿ ನಡೆದಿದೆ. ಧಾರವಾಡ…

1 min ago

ಉಳುಮೆ ವೇಳೆ ಟ್ರ‍್ಯಾಕ್ಟರ್ ಗೆ ಸಿಲುಕಿ 8 ವರ್ಷದ ಬಾಲಕ ಸಾವು

ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರ‍್ಯಾಕ್ಟರ್‌ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವರಸನಹಳ್ಳಿಯಲ್ಲಿ ನಡೆದಿದೆ.

7 mins ago

ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್‌

ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಹೆದ್ದಾರಿಯ ಪಕ್ಕದ ರಸ್ತೆಗೆ ಹಾರಿದ ಘಟನೆ ಬೆಂಗಳೂರು ಗ್ರಾಮಾಂತರ…

22 mins ago

ಪಾಪನಕೆರೆ ಒತ್ತುವರಿ ಆರೋಪ : ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಭೀಮನಗರದ ರೈತರು ಯುವ ಮುಖಂಡ ಕೃಷ್ಣಕುಮಾರ್ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

39 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ: ಆರೋಪಿ ಬಿಭವ್‌ ಕುಮಾರ್‌ ವಶಕ್ಕೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ…

1 hour ago

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಮೇಲೆ ಪ್ರಕರಣ ದಾಖಲು

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ…

1 hour ago