ಪಾಲಕ್ ಸೊಪ್ಪಿನ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಪಾಲಕ್ ಭಾರತದದ್ಯಾಂತ ಬೆಳೆಯುವ ಬಿಸಿ ಋತುವಿನ ಎಲೆಯ ತರಕಾರಿಯಾಗಿದೆ. ಇದನ್ನು ತಮ್ಮ ತಮ್ಮ ಹಿತ್ತಲಲ್ಲಿ ಯಾರು ಬೇಕಾದರೂ ಬೆಳೆಸಬಹುದು. ತುಂಬಾ ಸುಲಭವಾಗಿ ಹಾಗೂ ಸಂಪಾಗಿ ಬೆಳೆಯುವ ಹಸಿರು ಎಲೆಗಳು ಕಬ್ಬಿಣ ಜೀವಸತ್ವ ಮತ್ತು ರೋಗನಿರೋಧಕಗಳು ಸಮೃದ್ಧವಾಗಿವೆ. ಪಾಲಕ್ ಅಮರಾಂಥೇಸಿಯಾ ಕುಟುಂಬಕ್ಕೆ ಸೇರಿದ ತರಕಾರಿಯಾಗಿದೆ.

ಸಾಮಾನ್ಯವಾಗಿ ಅಡುಗೆಯಲ್ಲಿ ಉಪಯೋಗಿಸಲ್ಪಡುವ ಈ ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿ ನಾರಿನಾಂಶ ಪ್ರೋಟೀನ್ ಗಳಿವೆ. ದಿನಕ್ಕೆ ಎರಡು ಬಾರಿ ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ಈ ಪಾಲಕ್ ಸೊಪ್ಪು ನಾಟಿ ಮಾಡಿದ 6ರಿಂದ 8 ವಾರಗಳ ನಂತರ ಕೊಯ್ಲು ಮಾಡಬಹುದಾಗಿದೆ.

ಪಾಲಕ್ ಬೆಳೆಯಲು ಬೇಕಾದ ಹವಾಮಾನದ ಅವಶ್ಯಕತೆ: ಪಾಲಕ್ ಬಿಸಿ ವಾತಾವರಣದಲ್ಲಿ ಬೆಳೆಯುವ ಬೆಳೆಯಾಗಿದೆ ಆದರೆ ಮಧ್ಯಮ ಚಳಿಗಾಲದ ಅವಧಿಯಲ್ಲಿ ಟೆಂಟ್ ಗಳನ್ನು ಮಾಡಿ ಪಾಲಕ್ ಅನ್ನು ಬೆಳೆಸಬಹುದು . ಇವು ಸ್ವಲ್ಪ ಮಟ್ಟಿಗಿನ ಹಿಮವನ್ನು ಸಹಿಸಿಕೊಳ್ಳಬಲ್ಲದು. ಆದರೂ ಪಾಲಕ್ ಸೊಪ್ಪು ಚಳಿಗಾಲದಲ್ಲಿ ಚೆನ್ನಾಗಿ ಬೆಳೆದು ಬರುತ್ತದೆ. ಪಾಲಕ್ ಸೊಪ್ಪಿನ ಬೆಳೆಗೆ ನೀರಾವರಿ ಅವಶ್ಯಕತೆ.

ಪಾಲಕ್ ತೋಟಕ್ಕೆ ಮಣ್ಣಿನ ಅವಶ್ಯಕತೆ: ಪಾಲಕ್ ಯಾವುದೇ ರೀತಿಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯಬಹುದು ಅದಾಗಿಯೂ ಲೋಮ್ ಮಣ್ಣು ಸೂಕ್ತವಾಗಿದೆ. ಪಾಲಕ್ ಮೊಳಕೆ ಬರಲು ಮತ್ತು ತ್ವರಿತವಾಗಿ ಬೇರುಗಳನ್ನು ಭೂಮಿಯಲ್ಲಿ ಸ್ಥಾಪಿಸಿಕೊಳ್ಳಲು ಮಣ್ಣು ತುಂಬಾ ಸಡಿಲವಾಗಿರಬೇಕು ಮಣ್ಣಿಗೆ ತೋಟದ ಕಾಂಪೋಸ್ಟ್ ಅಥವಾ ಹೊಲದ ಗೊಬ್ಬರ ಹಾಕುವುದರಿಂದ ಮಣ್ಣಿನ ಮೇಲೆ ಒಂದು ಪೋಷಕಾಂಶ ಯುಕ್ತ ಪದರವನ್ನು ಸೃಷ್ಟಿಸುತ್ತದೆ. ಇದು ಸಸ್ಯಗಳ ಬೆಳವಣಿಗೆಗೆ ತುಂಬಾ ಉಪಯುಕ್ತ.

ಪಾಲಕ್ ಬೆಳಗೆ ನೀರಿನ ಅವಶ್ಯಕತೆ: ಪಾಲಕ್ ಗಿಡ ತೇವಾಂಶವನ್ನು ಪ್ರೀತಿಸುವ ಸಸ್ಯವಾಗಿದೆ ಸಸ್ಯದ ಸುತ್ತ ತೇವಾಂಶವನ್ನು ಉಳಿಸಿಕೊಳ್ಳಲು ಒಣಗಿದ ಎಲೆಗಳು ಒಣಹುಲ್ಲು ಇತ್ಯಾದಿಗಳನ್ನು ಬಳಸಿ ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಬಹುದು. ಚಳಿಗಾಲದಲ್ಲಿ ಪಾಲಕ್ ಬೆಳಗ್ಗೆ ಮಣ್ಣಿನ ಪ್ರಕಾರವನ್ನು ಅವಲಂಬಿಸಿ 10 ರಿಂದ 15 ದಿನಗಳ ಮಧ್ಯಂತರದಲ್ಲಿ ನೀರಾವರಿಯನ್ನು ನೀಡುವುದು ಉತ್ತಮ. ಜನವರಿಯಲ್ಲಿ ನೆಟ್ಟ ಪಾಲಕ್ ಗಿಡಗಳಿಗೆ ಬೇಸಿಗೆ ತಿಂಗಳುಗಳಲ್ಲಿ ಆರರಿಂದ ಏಳು ದಿನಗಳ ಮಧ್ಯಂತರದಲ್ಲಿ ನೀರಾವರಿ ಅಗತ್ಯವಿರುತ್ತದೆ. ಹೆಚ್ಚಿನ ಸಮಯ ಮಣ್ಣನ್ನು ತೇವವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ.

ಪಾಲಕ್ ಸೊಪ್ಪಿನ ಕೊಯ್ಲು ಮತ್ತು ಇಳುವರಿ: ಪಾಲಕ್ ಸೊಪ್ಪು ನಾಟಿ ಮಾಡಿದ ಆರರಿಂದ ಎಂಟು ವಾರಗಳ ನಂತರ ಕೊಯ್ಲು ಪ್ರಾರಂಭಿಸಬೇಕಾಗುತ್ತದೆ. ಮೂರರಿಂದ ನಾಲ್ಕು ಇಂಚು ಉದ್ದದ ಹೊರ ಎಲೆಗಳನ್ನು ಕತ್ತರಿಸುವುದರಿಂದ ಸಸ್ಯದ ಮೇಲಿನ ಹೆಚ್ಚು ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಅಂತಿಮವಾಗಿ ಕೊಯ್ಲು ಮಾಡಲು ಹೆಚ್ಚು ಎಲೆಗಳನ್ನು ನೀಡುತ್ತದೆ. ಚಳಿಗಾಲದಲ್ಲಿ ನಾಟಿ ಮಾಡಿದ ಪಾಲಕ್ ಸೊಪ್ಪುಗಳು ಹೆಚ್ಚು ಎಲೆಗಳನ್ನ ನೀಡುತ್ತದೆ. ಸರಾಸರಿ ಪಾಲಕ್ ಬೆಳೆಯಲ್ಲಿ ನಾಲ್ಕರಿಂದ ಆರು ಎಲೆಗಳನ್ನು ಕತ್ತರಿಸಬಹುದು.

ಪಾಲಕ್ ನಿಂದ ಆರೋಗ್ಯ ಪ್ರಯೋಜನಗಳು: ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಬಿ ಸಿ ಈ ಪೊಟ್ಯಾಶಿಯಂ ಕಬ್ಬಿಣ ಮತ್ತು ಒಮೆಗಾ3 ಕೊಬ್ಬಿನ ಆಮ್ಲಗಳಿವೆ. ಇವು ಮನುಷ್ಯನ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.

ಪಾಲಕ್ ಸೊಪ್ಪಿನ ಸೇವನೆಯಿಂದ ಕೂದಲ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ .

ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಅಂಶ ಇರುವುದರಿಂದ ಕೆಂಪು ರಕ್ತ ಕಣಗಳನ್ನು ಬಲಪಡಿಸುತ್ತದೆ.

ಪಾಲಕ್ ಸೊಪ್ಪಿನ ನಿಯಮಿತ ಸೇವನೆಯಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು.

ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಎರುವುದರಿಂದ ದ್ವಜೀಯ ಸೆಳೆತ ಮತ್ತು ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೆ ಮುಖದ ಮೇಲೆ ಹಳೆಯ ಕಲೆಗಳಿದ್ದರೆ ಬಚೆಯ ಭಾಗವನ್ನು ತಿಳಿಗೊಳಿಸುತ್ತದೆ.

ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಬಿ ಇರುವುದರಿಂದ ಇವುಗಳು ಸೂರ್ಯನಿಂದ ಬರುವ ಅತಿ ನೇರಳೆ ಕಿರಣಗಳ ಪ್ರಭಾವದಿಂದ ರಕ್ಷಣೆ ನೀಡುತ್ತದೆ

ಪಾಲಕ್ ಸೊಪ್ಪು ಕ್ಯಾನ್ಸರ್ ನ ಪ್ರಮಾಣವನ್ನು ಕಡಿಮೆ ಮಾಡುತ್ತದೆ

ಪಾಲಕ್ ಸೊಪ್ಪಿನಿಂದ ತ್ವಚೆಯಲ್ಲಿ ಸುಕ್ಕುಗಟ್ಟುವುದನ್ನು ಕಡಿಮೆಗೊಳಿಸಬಹುದು.

Ashika S

Recent Posts

ಶೀಘ್ರದಲ್ಲೇ ಎರ್ನಾಕುಲಂನಿಂದ ಬೆಂಗಳೂರಿಗೆ ವಂದೇ ಭಾರತ್ ಆರಂಭ

ಲೋಕಸಭೆ ಚುನಾವಣೆ ಮುಗಿದ ಬಳಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಕೊಚ್ಚಿಯ ಎರ್ನಾಕುಲಂನಿಂದ ಬೆಂಗಳೂರಿಗೆ ಸಂಚಾರ ಪ್ರಾರಂಭಿಸಲಿದೆ.

17 mins ago

ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 133ನೇ ಜಯಂತೋತ್ಸವ ಅಂಗವಾಗಿ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ವಿಮೋಚನಾ ಯುವಕರ ಸಂಘದ…

38 mins ago

ಗಾಳಿ ಮಳೆಗೆ ಮರ ಬಿದ್ದು ಮನೆಗೆ ಹಾನಿ; ಶಾಸಕರ ಭೇಟಿ, ತಕ್ಷಣ ವ್ಯವಸ್ಥೆ ಮಾಡುವಂತೆ ಸೂಚನೆ

ಭಾನುವಾರ ಸಂಜೆ ಪುತಯ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆ ಬಂದಿದ್ದು ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿ ಕಮಲ ಎಂಬವರ ಮನೆಯ ಮಾಡಿನ…

42 mins ago

‘ಸೀತಾರಾಮ’ ಖ್ಯಾತಿಯ ವೈಷ್ಣವಿಗೆ ದಂಡ ವಿಧಿಸಿದ ರಿಯಲ್ ಪೊಲೀಸರು

ಯಾವಾಗಲೂ ಯಾರೇ ಆದರೂ ಟ್ರಾಫಿಕ್​ ರೂಲ್ಸ್​​ ಪಾಲನೆ ಮಾಡಲೇ ಬೇಕು. ಅದು ರಿಯಲ್ ಆಗಿರಲಿ ಅಥವಾ ರೀಲ್ ಆಗಿರಲಿ. ಹೌದು…

57 mins ago

ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ ಯಾಕೆ ಒಪ್ಪಿಗೆ ನೀಡಿದ್ದು?

ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಬಳಿಕ   ಅಮೆರಿಕ ಸೇರಿದಂತೆ ಹಲವು ಯೂರೋಪಿಯನ್ ದೇಶಗಳು ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು…

1 hour ago

ಬೆಂಗಳೂರಿನಲ್ಲಿ ಭಾರಿ ಮಳೆ; ಆರ್​ಸಿಬಿ- ಡೆಲ್ಲಿ ಪಂದ್ಯ ರದ್ದು

ಐಪಿಎಲ್ 2024ರ 62 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಇಂದು ಸಂಜೆ…

1 hour ago