ಅಂಕಣ

ಅತಿಯಾಗಿ ಕೂದಲು ಉದುರುತ್ತಿದೆಯೇ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಇಂದಿನ ಯುವ ಪೀಳಿಗೆಗೆ ಕೇಶ ಸಮಸ್ಯೆ ಹೆಚ್ಚು ಕಾಡುತ್ತಿದೆ. ಕೂದಲು ಉದುರುವುದು, ತಲೆ ಹೊಟ್ಟು, ಕೂದಲು ಎರಡು ಭಾಗ ಆಗುವುದು ಹೀಗೆ ಅನೇಕ ತರಹದ ಸಮಸ್ಯೆಗಳು ಎದುರಾಗುತ್ತದೆ. ಇದಕ್ಕಾಗಿ ಕೆಲವೊಂದು ಸಿಂಪಲ್ ಟಿಪ್ಸ್ ಗಳು ಇಲ್ಲಿದೆ ನೋಡಿ. ಈರುಳ್ಳಿ ಸಿಪ್ಪೆ ತೆಗೆದು, ಮಿಕ್ಸರ್ ಜಾರ್‍ಗೆ ಹಾಕಿ, ಇದಕ್ಕೆ ಸ್ವಲ್ಪ (ಅಂದಾಜು) ಪ್ರಮಾಣದಲ್ಲಿ ನೀರು ಹಾಕಿ ಚೆನ್ನಾಗಿ, ರುಬ್ಬಿ ದಪ್ಪಗೆ ಪೇಸ್ಟ್ ಮಾಡಿ ಬಳಿಕ ಈ ಪೇಸ್ಟ್ ಅನ್ನು ತಲೆಯ ನೆತ್ತಿಯ ಭಾಗದಿಂದ ಹಿಡಿದು, ಕೂದಲಿನ ಬುಡದವರೆಗೂ ಕೂಡ, ದಪ್ಪಗೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯ ಹಾಗೆಯೇ ಒಣಗಲು ಬಿಡಿ. ನಂತರ ಚೆನ್ನಾಗಿ ಶಾಂಪೂ ಹಾಕಿ ತೊಳೆದುಕೊಳ್ಳಿ.

ಕೂದಲು ಉದುರುವಿಕೆ ಸದ್ಯಕ್ಕೆ ಅತೀಯಾಗಿ ಕಾಡುವ ಸಮಸ್ಯೆಗಳಲ್ಲಿ ಒಂದು. ಈ ಸಮಸ್ಯೆಯಿಂದ ಪಾರಾಗಲು ಹೀಗೆ ಮಾಡಿ. ಮೊದಲಿಗೆ ಮೆಂತ್ಯೆಯನ್ನು ರಾತ್ರಿ ನೀರಿನಲ್ಲಿ ಹಾಕಿ ಬೆಳಗ್ಗೆ ರುಬ್ಬಿಕೊಂಡು ತಲೆಗೆ ಹಚ್ಚಿ. ಸ್ವಲ್ಪ ಸಮಯ ಹಾಗೆ ಬಿಟ್ಟು ಅನಂತರ ಶ್ಯಾಂಪೂ, ಸಾಬೂನು ಬಳಸದೇ ತಲೆ ಸ್ನಾನ ಮಾಡಬೇಕು. ಹೀಗೆ ಕ್ರಮೇಣ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ಭೃಂಗರಾಜ್ ಎಣ್ಣೆ ಕೂದಲಿನ ಸಮಸ್ಯೆಗೆ ರಾಮಬಾಣದಂತೆ ಕೆಲಸ ಮಾಡುವ ಗುಣ ಇದೆ. ಈ ಭೃಂಗರಾಜ್ ಎಣ್ಣೆಯನ್ನು ನೇರವಾಗಿ ನೆತ್ತಿಯ ಮೇಲೆ ಹಚ್ಚಿ ರಾತ್ರಿ ಮಸಾಜ್ ಮಾಡಿ. ಮರುದಿನ ಬೆಳಿಗ್ಗೆ ನಿಮ್ಮ ಕೂದಲನ್ನು ತೊಳೆಯಿರಿ.

ಶುದ್ಧ ತೆಂಗಿನ ಎಣ್ಣೆಯನ್ನು ತಲೆಗೆ ಹಚ್ಚುವ ಅಭ್ಯಾಸ ಮಾಡಿಕೊಂಡರೆ ಬಾರಿ ಒಳ್ಳೆಯದು. ಇದು ಕೂದಲು ಉದುರುವಿಕೆ, ತಲೆ ಹೊಟ್ಟು, ಕೂದಲು ಎರಡು ಭಾಗ ಆಗುವುದು ಹೀಗೆ ನಾನಾ ಸಮಸ್ಯೆಗಳನ್ನು ಶಮನ ಮಾಡುವ ಗುಣ ಹೊಂದಿದೆ. ಸಂಜೆ ವೇಳೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ಶಾಂಪೂ ಹಾಕಿ ತೊಳೆದುಕೊಳ್ಳಿ. ಸಾಬೂನು ಹಾಕಿ ತೊಳೆದುಕೊಂಡರೆ ಎಣ್ಣೆ ಅಂಶ ಸರಿಯಾಗಿ ಹೋಗುವುದಿಲ್ಲ ಹಾಗಾಗಿ ಶಾಂಪೂ ಬಳಸಿ.

ಇನ್ನು ಮದರಂಗಿ ಎಲೆಯನ್ನು ರುಬ್ಬಿ ಪೇಸ್ಟ್‌ ಮಾಡಿ ತಲೆಗೆ ಹಚ್ಚಿದರು ಕೂದಲು ಉದುರುವ ಸಮಸ್ಯೆ ಸರಿಪಡಿಸಬಹುದು.

ವೀಳ್ಯದೆಲೆಯನ್ನು ಚೆನ್ನಾಗಿ ಅರೆದು, ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ, ಕೂದಲು ಉದುರುವ ಸಮಸ್ಯೆಯಿಂದ ಪಾರಾಗಬಹುದು.

Gayathri SG

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

3 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

4 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

4 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

4 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

5 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

5 hours ago