ಅಂಕಣ

ಕಣ್ಣಿನ ಅಂದವನ್ನು ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಕಣ್ಣು ಮನುಷ್ಯನ ಅವಿಭಾಜ್ಯ ಅಂಗ. ಇದು ಮುಖದ ಅಂದವನ್ನು ದ್ವಿಗುಣಗೊಳಿಸಲು ಸಹಕಾರಿಯಾಗುತ್ತದೆ. ಕಣ್ಣು ಹೇಗೆ ನಮ್ಮ ಅಂದವನ್ನು ಹೆಚ್ಚಿಸಲು ಸಹಕಾರಿಯಾಗಿರುತ್ತದೆಯೋ, ಅದೇ ರೀತಿ ಕಣ್ಣಿನಲ್ಲಿ ಏನಾದರೂ ಸಮಸ್ಯೆ ಆದರೆ ಮುಖದ ಅಂದವನ್ನು ಅಷ್ಟೇ ಬೇಗನೆ ಕೆಡಿಸುವಲ್ಲಿಯೂ ಪರಿಣಾಮಕಾರಿ ಆಗಿದೆ. ಆದ್ದರಿಂದ ಕಣ್ಣಿನ ಬಗ್ಗೆ ಕಾಳಜಿ ವಹಿಸುವುದು ಅತಿಮುಖ್ಯ.

ಹೆಣ್ಣು ಕಣ್ಣಿಗೆ ಕಾಡಿಗೆ ಹಚ್ಚುವುದು ಬಲು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ಎಂದರೆ ತಪ್ಪಾಗದು. ಹೆಣ್ಣಿನ ಕಣ್ಣಿಗೆ ಕಾಡಿಗೆ ಭೂಷಣ ಎಂಬ ಮಾತಿದೆ. ಹಲವು ಮಹಿಳೆಯರಿಗೆ ಕಣ್ಣಿನ ಸುತ್ತ ಕಾಡಿಗೆ ಹಚ್ಚಿಕೊಳ್ಳದಿದ್ದರೆ ಮೇಕಪ್ ಅಪೂರ್ಣ ಎನ್ನಿಸಿ ಬಿಡುತ್ತದೆ.

ಇನ್ನು ಬದಲಾವಣೆಯ ಜಗತ್ತಿನಲ್ಲಿರುವ ನಾವು ಹೊಸತನದೊಂದಿಗೆ ಬದುಕುತ್ತಿದ್ದೇವೆ ಇದಕ್ಕೆ ಪೂರಕವಾಗಿ ಇಂದು ಕಣ್ಣಿಗೆ ಕಾಡಿಗೆ ಹಚ್ಚುವ ಬದಲು ಹಲವಾರು ಬಗೆಯ ಪ್ರೋಡೆಕ್ಟ್ ಗಳು ಮೌರ್ಕೆಟ್ಗೆ ಬಂದಿವೆ. ಇವುಗಳಿಂದ ಕಣ್ಣಿನ ಅಂದವನ್ನು ಹೇಗೆ ಹೆಚ್ಚಿಸಿಕೊಳ್ಳ ಬಹುದು ಎಂದು ತಿಳಿಯೋಣ.

ಮಸ್ಕರಾ: ಉತ್ತಮ ಗುಣಮಟ್ಟದ ಮಸ್ಕರಾವನ್ನು ಬಳಸುವುದರಿಂದ ಕೂಡ ಕಣ್ಣಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಕಣ್ಣಿನ ರೆಪ್ಪೆಯ ಮೇಲೆ ಮಸ್ಕರಾ ಹಚ್ಚಿಕೊಳ್ಳುವುದರಿಂದ ಕಣ್ಣಗಳು ಸುಂದರವಾಗಿ ಕಾಣುತ್ತದೆ.

ಐ ಶ್ಯಾಡೋ: ತಿಳಿ ಕಂದು ಬಣ್ಣ ಅಥವಾ ಗುಲಾಬಿ ಬಣ್ಣದ ಐ ಶ್ಯಾಡೋ ಕಣ್ಣಿನ ಅಂದ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಕಾಡಿಗೆ ಹಚ್ಚದಿದ್ದಾಗ ಕಣ್ಣುಗಳು ಹೊಳೆಯುವಂತೆ ಮಾಡುವುದು ಐ ಶ್ಯಾಡೋ. ನಿಮ್ಮ ಕಣ್ಣುಗಳು ಬಟ್ಟಲು ಕಂಗಳಾಗಿದ್ದಾರೆ ಕಡು ಬಣ್ಣದ ಶೇಡ್ ಬಳಸುವುದು ಉತ್ತಮ.

ಕಾಡಿಗೆ ಪೆನ್ಸಿಲ್‌ನಿಂದ ನಿಮ್ಮ ಹುಬ್ಬನ್ನು ಅಂದವಾಗಿ ಕಾಣುವಂತೆ ಮಾಡಬಹುದು. ಗಾಢ ಕಂದು ಬಣ್ಣದ ಐ ಶ್ಯಾಡೋ ಹಚ್ಚುವುದರಿಂದ ಕಣ್ಣುಗಳ ಅಂದ ಹೆಚ್ಚುವುದು.

Gayathri SG

Recent Posts

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

7 mins ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

56 mins ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

1 hour ago

ಬಿರುಗಾಳಿ ಸಹಿತ ಮಳೆಗೆ ಕುಸಿದ ಮಹಾದ್ವಾರ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

1 hour ago

ಮತ್ತೆ ಭರ್ಜರಿ ಏರಿಕೆ ಕಂಡ ‌ಚಿನ್ನದ ಬೆಲೆ !

ಜಾಗತಿಕವಾಗಿ ಚಿನ್ನಕ್ಕೆ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ…

2 hours ago

ಮಳೆಯಿಂದಾಗಿ ಪಂದ್ಯ ರದ್ದು; ಪ್ಲೇಆಫ್​ಗೇರಿದ್ದು ಯಾರು ?

ಐಪಿಎಲ್ 2024ರ 66ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ತಂಡ ಗುಜರಾತ್ ತಂಡವನ್ನು ಎದುರಿಸಬೇಕಿತ್ತು. ಆದರೆ, ಟಾಸ್‌ಗೂ ಮುನ್ನವೇ…

2 hours ago