News Karnataka Kannada
Thursday, May 02 2024
ವಿಶೇಷ

ಮುಂಬಯಿಯಲ್ಲಿ ಕನ್ನಡದ ಅಪೂರ್ವ ಕಾರ್ಯಕ್ರಮ “ಕನ್ನಡ ಕೃತಿ : ಮಾರಾಟ ದಾಖಲೆಗೆ ಕೈಜೋಡಿಸಿ”

Kannada Books
Photo Credit : News Kannada

ಮುಂಬಯಿ:  ಎರಡು ಶತಕಗಳಿಗಿಂತ ಹೆಚ್ಚು ಕಾಲದಿಂದ ಕನ್ನಡಿಗರ ಮತ್ತು ತುಳುವರ ಎರಡನೇ ತವರು ಆಗಿ ಎಲ್ಲರನ್ನು ಪೊರೆಯುತ್ತಿರುವ ಮುಂಬಯಿಯಲ್ಲಿ ಪುಸ್ತಕ ಲೋಕದ ಐತಿಹಾಸಿಕ ದಾಖಲೆ ಜುಲೈ 17 ರಂದು ಸಂಪನ್ನಗೊಳ್ಳಲಿದೆ.

ಲೇಖಕ ಭೋಜರಾಜ ಶೆಟ್ಟಿ ಮದ್ಯ ಮತ್ತು ಅಂಧೇರಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಹಾಲಿ ಸಂಚಾಲಕ ಕೃಷ್ಣ ಬಿ ಶೆಟ್ಟಿ ಜೊತೆಯಾಗಿ ಸರ್ವರ ಸಹಕಾರ ಪಡೆದು ದಾಖಲೆ ನಿರ್ಮಿಸಲು ಹೊರಟಿದ್ದಾರೆ. ಇಂತಹ ಅಪೂರ್ವ ಪ್ರಯತ್ನಕ್ಕೆ ಮುಂಬಯಿ ಬಂಟರ ಸಂಘ ಸಾಕ್ಷಿಯಾಗಲಿದೆ. ದಾಖಲೆಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸಹಿತ ಜಾಗತಿಕ ದಾಖಲೆ ಪುಸ್ತಕದಲ್ಲಿ ಸೇರಿಸುವ ಪ್ರಯತ್ನ ಇದಾಗಿದೆ. ದಾಖಲೆಯೊಂದಿಗೆ ಅಂಧೇರಿ ಕರ್ನಾಟಕವ ಸಂಘಕ್ಕೆ 150000 ರೂಪಾಯಿ ದೊಡ್ಡ ಮೊತ್ತ ಜಮೆಯಾಗಲಿದೆ. ಸಾರ್ವಜನಿಕರು ಜೊತೆಯಾಗಿ ಒಂದು ದಿನದಲ್ಲಿ ಸಂಗ್ರಹಿಸುವ ದಾಖಲೆ ಮೊತ್ತವು ಆಗಲಿದೆ.

ಬಿಡುಗಡೆಯಾದ ಒಂದೇ ದಿನದಲ್ಲಿ ಒಂದು ಸಾವಿರ ಪ್ರತಿ ಮಾರಾಟದ ಮೂಲಕ ದಾಖಲೆ ನಿರ್ಮಿಸುವ ಕೆಲಸದ ಕ್ಷಣಗಣನೆ ಆರಂಭವಾಗಿದೆ. ಜುಲೈ 17ರಂದು ಅಂಧೇರಿ ಕರ್ನಾಟಕ ಸಂಘದ ಆಶ್ರಯದಲ್ಲಿ ಬಂಟರ ಸಂಘದಲ್ಲಿ ದಾಖಲೆ ನಿರ್ಮಿಸಲು ಹೊರನಾಡ ಕನ್ನಡಿಗರು ಕೈಜೋಡಿಸಬೇಕಾಗಿ ವಿನಂತಿ, ಪುಸ್ತಕದ ಪ್ರಕಟಣೆಯ ಖರ್ಚನ್ನು ದಾನಿಯೊಬ್ಬರು ವಹಿಸಿಕೊಂಡಿದ್ದಾರೆ. ಮಾರಾಟದಿಂದ ಬರುವ ಎಲ್ಲಾ ಹಣವನ್ನು ಕರ್ನಾಟಕ ಸಂಘ ಅಂಧೇರಿಯ ಶೈಕ್ಷಣಿಕ ಚಟುವಟಿಕೆಗೆ ನೀಡಲು ಲೇಖಕ ಭೋಜರಾಜ್ ಶೆಟ್ಟಿ ಮಧ್ಯ ನಿರ್ಣಯಿಸಿರುವುದು ಮತ್ತೊಂದು ಐತಿಹಾಸಿಕ ದಾಖಲೆ.

ಕರ್ನಾಟಕ ಸಂಘ ಅಂಧೇರಿ(ರಿ) ಮತ್ತು ಚೆಂಬೂರು ಕರ್ನಾಟಕ ಸಂಘ (ರಿ) ಜಂಟಿ ಆಶ್ರಯದಲ್ಲಿ ಜುಲೈ 17, 2022ರ ಭಾನುವಾರದಂದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನೊಂದಿಗೆ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಮುಂಬಯಿಯ ಕನ್ನಡ ಪರ ಸಂಘ ಸಂಸ್ಥೆಗಳ ಸಹಯೋಗದಿಂದ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ -2022 ಆಚರಿಸಲಿರುವ ಈ ಸುಸಂದರ್ಭದಲ್ಲಿ ಭೋಜರಾಜ ಶೆಟ್ಟಿ ಮಧ್ಯ ಇವರ ಎರಡು ಕೃತಿಗಳಾದ ಕಲ್ಪವೃಕ್ಷ’ ಕಥಾ ಸಂಕಲನ ಮತ್ತು ‘ಕಾಮಧೇನು’ ಕವನ ಸಂಕಲನ ಬಿಡುಗಡೆಯಾಗಲಿದೆ.

ಸಾಮಾಜಿಕ ದುರಂತದ ಬಡತನದ ಸಮಸ್ಯೆಗಳು ಗಂಭೀರ ಚಿಂತನೆಯ ಕಾವುಬಿಟ್ಟ ಹೊಟ್ಟೆಗಳು ದಿನವಿಡೀ ದುಡಿದು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕನಸುಗಳು ಜೀವಂತ ದಫನವಾಗದಂತೆ ತಮ್ಮ ಪರಿಸರದ ಬಡಮಕ್ಕಳನ್ನು ಗುರುತಿಸಿ ವಿದ್ಯೆಯ ಮುಖ್ಯವಾಹಿನಿಗೆ ಪ್ರೋತ್ಸಾಹಿಸುವ ಹಿತಚಿಂತಕರಾದ ಕರ್ನಾಟಕ ಸಂಘ ಅಂಧೇರಿಯ ಸಂಚಾಲಕರಾದ ಕೃಷ್ಣ ಬಿ. ಶೆಟ್ಟಿ ಹಾಗೂ ಬಳಗದವರು ಹಲವಾರು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಾ ನೊಂದ ಬಡ ಮಕ್ಕಳ (ವಿದ್ಯಾರ್ಥಿಗಳ) ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸುತ್ತಾ ಕಣ್ಣೀರೊರೆಸುವ ಒಂದು ಮಹಾಕಾರ್ಯವನ್ನು ಕರ್ಮಭೂಮಿಯಲ್ಲಿ ಮಾಡುತ್ತಾ ಬರುತ್ತಿದೆ. ವರುಷ ವರುಷಗಳು ನಡೆದು ಬಂದ ದಾರಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ‘ಅಕ್ಷರ ದಾಸೋಹಿ’ ಸಾಮಾಜಿಕ ಹಿತಚಿಂತನೆಗೆ ನನ್ನೆರಡು ಕೃತಿಗಳನ್ನು ಸಂಘಕ್ಕೆ ಅರ್ಪಿಸುತ್ತಾ ನಿಮ್ಮ ಸಹಕಾರದೊಂದಿಗೆ ಅಳಿಲ ಸೇವೆಯನ್ನು ಸಂಘಕ್ಕೆ ಅರ್ಪಿಸುತ್ತಿದ್ದೇನೆ.

ಹೊರನಾಡ ಕನ್ನಡಿಗರಾದ ನಾವು ಇಲ್ಲೊಂದು ವಿಷಯವನ್ನು ಗಮನದಲ್ಲಿಡಬೇಕು. ಕನ್ನಡ ಒಂದು ಒತ್ತಾಯದ ಭಾಷೆಯಾಗಿ ಬೆಳೆಯಬಾರದು. ಹುಟ್ಟುವ ಮಗುವೊಂದು ಕನ್ನಡವನ್ನು ತನ್ನ ಆಡುಭಾಷೆಯಾಗಿ ಬಳಸಬೇಕು. ಮಕ್ಕಳಲ್ಲಿ ಮೌಲ್ಯಭರಿತವಾದ ಶಿಕ್ಷಣವನ್ನು ಒದಗಿಸಬೇಕು. ಕನ್ನಡತನದ ಸೊಗಡನ್ನು ಅತ್ಯಂತ ಮಾರ್ಮಿಕವಾಗಿ ಮಕ್ಕಳ ಪ್ರಜ್ಞೆಯಲ್ಲಿ ತುಂಬಿಸಬೇಕು. ಕನ್ನಡ ಭಾಷೆ ಉಳಿಸಬೇಕು, ಬೆಳೆಸಬೇಕು. ಕನ್ನಡಿಗರೆಲ್ಲರೂ ಕನ್ನಡವನ್ನು ಅಪ್ಪಿ ಒಪ್ಪಿಕೊಳ್ಳಬೇಕು. ಹೊರನಾಡ ಕನ್ನಡಿಗರಾದ ನಾವು ಇದನ್ನು ಸರಿಪಡಿಸಬೇಕಾದರೆ ಕಥೆ, ಕವನ, ಕಾದಂಬರಿ, ವಾರ್ತಾ ಪತ್ರಿಕೆಗಳನ್ನು ಕನ್ನಡದಿಂದಲೇ ಹೆಕ್ಕಿ ಓದಬೇಕು. ಇನ್ನಿತರ ಭಾಷೆಗಳಿಗೆ ಮಾರು ಹೋಗದೆ ತಮ್ಮ ಭಾಷೆಯನ್ನು ಬೆಳ ಕಥಾ ಸಂಕಲನ ‘ಕಲ್ಪವೃಕ್ಷ’ಕ್ಕೆ ಡಾ. ಕರುಣಾಕರ ಎನ್. ಶೆಟ್ಟಿಯವರು ಮುನ್ನುಡಿಯನ್ನು ಮತ್ತು ಅಂಕಣ ಬರಹಗಾರ್ತಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆಯವರು ಬೆನ್ನುಡಿ ಬರೆದಿದ್ದು, ‘ಕಾಮಧೇನು’ ಕವನ ಸಂಕಲನಕ್ಕೆ ‘ವಿದ್ಯಾಧರ ಕನ್ನಡ ಪ್ರತಿಷ್ಠಾನ’ದ ರೂವಾರಿ ವಿದ್ಯಾಧರ ಮುತಾಲಿಕ ದೇಸಾಯಿಯವರು ಮುನ್ನುಡಿ, ಪ್ರಖ್ಯಾತ ಪತ್ರಕರ್ತ, ಸುಶೀಲಾ ಮಾಸಪತ್ರಿಕೆಯ ಸಂಪಾದಕ ಎಂ.ಎಂ.ಕನಕೇರಿ ಹುಬ್ಬಳ್ಳಿಯವರು ಬೆನ್ನುಡಿ ಬರೆದಿದ್ದು. ಅಚ್ಚುಕಟ್ಟಾಗಿ ಹೊರಬರಲಿರುವ ನನ್ನೆರಡು ಕೃತಿಗಳು ನಿಮ್ಮ ಮೆಚ್ಚುಗೆ ಪಡೆಯಬಹುದೆಂಬ ವಿಶ್ವಾಸದಿಂದ ಮುಕ್ತ ಅಭಿಪ್ರಾಯವನ್ನು ಮುಂದಿಟ್ಟಿದ್ದೇನೆ.

ಕಥಾ ಸಂಕಲನ ‘ಕಲ್ಪವೃಕ್ಷ’ದ ಬೆಲೆ 150 ರೂಪಾಯಿ, ಕವನ ಸಂಕಲನ ‘ಕಾಮಧೇನು’ ಇದರ ಬೆಲೆ 150 ರೂಪಾಯಿ. ಯಾವುದೇ ಸ್ವಾರ್ಥವಿಲ್ಲದೆ ಮಾರಲ್ಪಟ್ಟ ಕೃತಿಗಳಿಂದ ಬಂದ ಹಣವನ್ನು ಕರ್ನಾಟಕ ಸಂಘ, ಅಂಧೇರಿಯ ಶೈಕ್ಷಣಿಕ ಕಾರ್ಯಕ್ಕೆ ಅರ್ಪಿಸುತ್ತಿದ್ದೇನೆ. ಪ್ರಕಟಣೆಯ ಖರ್ಚನ್ನು ಕೊಡುಗೈ ದಾನಿಯೊಬ್ಬರಿಂದ ಭರಿಸಿರುವುದರಿಂದ ಅವರಿಗೆ ತ್ರಿಕರಣಪೂರ್ವಕವಾಗಿ, ಆತ್ಮಸಾಕ್ಷಿಯಾಗಿ ವಂದನೆಗಳನ್ನು ಅರ್ಪಿಸುತ್ತಾ, ಮತ್ತೊಮ್ಮೆ ಪ್ರಕಟಣೆಯ ಮೂಲಕ ವಿನಂತಿಸುತ್ತಿದ್ದೇನೆ ಎಂದು ಲೇಖ ಕ ಭೋಜರಾಜ ವಿನಂತಿಸಿದ್ದಾರೆ.

ಕೃತಿ ಬಿಡುಗಡೆಯಂದು ಹೊರನಾಡ ಕನ್ನಡದಲ್ಲಿ ಹಿಂದೆಂದೂ ಮಾರಾಟವಾಗದಷ್ಟು ಕೃತಿಗಳು ತಮ್ಮ ಸಹಕಾರದಿಂದ ಹೊಸ ದಾಖಲೆಯೊಂದನ್ನು ನಿರ್ಮಿಸಬೇಕು. ಧಾರ್ಮಿಕ ಮನೋಭಾವನೆಯ ಪುಣ್ಯಕಾರ್ಯಗಳಲ್ಲಿ ಪಾಲುದಾರರಾಗಿ.. ನನ್ನೆರಡು ಕೃತಿಗಳನ್ನು ಮುಂಗಡವಾಗಿ ಪಡೆಯಲು ತಮ್ಮ ಹೆಸರನ್ನು ಮೊಬೈಲ್ ಸಂಖ್ಯೆ ಭೋಜರಾಜ್ ಶೆಟ್ಟಿ – 9137663385, ಕೃಷ್ಣ ಬಿ. ಶೆಟ್ಟಿ -9820661699, ಉದಯ ಕರ್ಗಲ್ – 9167646447 ಇವರಲ್ಲಿ ನೋಂದಾಯಿಸಿ ಕೃತಿಯ ಬೆಲೆಯನ್ನು ‘ಕರ್ನಾಟಕ ಸಂಘ ಅಂಧೇರಿ, ಭಾರತ್ ಕೋ.ಆಪ್. ಬ್ಯಾಂಕ್, ಮರೋಲ್, ಬ್ರಾಂಚ್, IFSC-0000009, A/c, 000810100112150 ಈ ಬ್ಯಾಂಕ್ ಖಾತೆಗೆ ಕಳುಹಿಸಬೇಕಾಗಿ ವಿನಂತಿಸಿದ್ದಾರೆ.

ಕೃತಿಗಳನ್ನು ಜುಲೈ 17ರಂದು ಕಾರ್ಯಕ್ರಮದ ಹಾಲ್‌ನಲ್ಲಿ ಪಡೆದುಕೊಳ್ಳಬೇಕು. ನೀವು ನೀಡುವ 300 ರೂಪಾಯಿ ಹೊಸ ದಾಖಲೆಯೊಂದಕ್ಕೆ ಮತ್ತು ನೇರವಾಗಿ ಸಮಾಜದ ಶೈಕ್ಷಣಿಕ ಸೇವೆಗೆ ಸಂದಾಯವಾಗುತ್ತದೆ. ದೂರದೂರಿನವರು ಆ ದಿನ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕೃತಿಗಳನ್ನು ಅದೇ ದಿನ ಹಣ ಪಾವತಿಸಿ ಅಂಚೆಯ ಮೂಲಕವು ಪಡೆಯ ಬಹುದು. ಹಣ ಪಾವತಿಸಿದ ದಾಖಲೆಗಳನ್ನು ಮತ್ತು ವಿಳಾಸಗಳನ್ನು ನೀಡಲಾಗಿರುವ ಯಾವುದಾದರು ಸಂಖ್ಯೆಗೆ ಕಳುಹಿಸ ಬೇಕು.

ವಿಶೇಷ ವರದಿ: ಡಾ.ಶೇಖರ ಅಜೆಕಾರು ಮುಂಬಯಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು