ಶತ ಶತಮಾನ ಆಚರಿಸಿಕೊಂಡ ಸಂತೆಪೇಟೆ ರಸ್ತೆಯಲ್ಲಿರುವ ಸೋಜಿಗದ ಮರ

ದೇಶದ ಇತಿಹಾಸ ತಿಳಿಸುವಂತೆ ಅಂದು ಅನೇಕ ವರ್ಷಗಳ ಕಾಲ ನಮ್ಮನ್ನಾಳಿ ದೇಶದ ಗತವೈಭವದ ಸಕಲ ಸಂಪತ್ತನ್ನು ದೋಚಿ ಸೂರೆಗೈದು ಹೋದ ಬ್ರಿಟಿಷರು ತಮ್ಮ ಆಳ್ವಿಕೆಯ ಕಾಲದಲ್ಲಿ ಸಂತೆಪೇಟೆ ರಸ್ತೆಯಲ್ಲಿರುವ ನಗರಸಭೆ ಆವರಣದಲ್ಲಿ ಬ್ರಿಟಿಷರೇ ನೆಟ್ಟು ಬೆಳಸಿ ರಕ್ಷಣೆ ನೀಡಿದ ಮರವು, ಇಂದಿಗೂ ಹಾಗೆ ಇದೆ.

ಹೆಬ್ಬಾವುಗಳ ಸಮೂಹವೇ ಒಂದನ್ನೊಂದು ಸುತ್ತಿ ಅಪ್ಪಿ, ತಬ್ಬಿ ಮುತ್ತಾಡುತ್ತಿರುವಂತೆ ತನ್ನ ಅನೇಕ ಬಾಹುಗಳಿಂದ ಸುಮಾರು ೩೦*೪೦ ಅಂದರೆ ೧೨೦ ಅಡಿ ಸುತ್ತಳತೆಯಲ್ಲಿ ಚಪ್ಪರದಂತೆ ಚಾಚಿ, ಬಾಚಿ ಬೆಳೆದು ನಿಂತ ಈ ದಪ್ಪ ದಪ್ಪ ಬಳ್ಳಿಗಳು ಅಡಿಯಿಂದ ಮುಡಿವರಗೆ ಒಂದನ್ನೊಂದು ಸುತ್ತಿ ಅಮರಿಕೊಂಡಂತೆ ಬೆಳೆದು ನಿಂತು ನೂರಾರು ಹಕ್ಕಿ ಪಕ್ಷಿಗಳಿಗೆ, ಆಶ್ರಯ ನೀಡುವುದೂ ಅಲ್ಲದೆ ಎಂತಹಾ ಬಿಸಿಲಿನ ತಾಪಕ್ಕೆ ಸಿಕ್ಕಿದವರು ಇದರ ಕೆಳಗೆ ಯಾರೇ ಬಂದರೂ ತಂಪಾದ ನೆರಳು ನೀಡುವ ಹಾಗೂ ಅದರ ಮೇಲೆ ಬಿದ್ದ ಮಳೆಯ ನೀರನ್ನು ಕೆಳಗೆ ಬಿಡದೆ ಒತ್ತಾಗಿರುವ ಹಸಿರು ಎಲೆಗಳ ಶುದ್ದ ಆಮ್ಲಜನಕ ನೀಡುವ ದೃಶ್ಯವನ್ನು ಯಾರಾದರೂ ವೀಕ್ಷಿಸಿಸಬಹುದು ಹಾಗೂ ಆಸ್ವಾಧಿಸಬಹುದಾಗಿದೆ.

ಆದರೆ ಅದೇ ಚಪ್ಪರದಲ್ಲಿ ವಾಸವಿರುವ ಹಕ್ಕಿ ಪಕ್ಷಿಗಳು ಹೆಚ್ಚು ಹೆಚ್ಚು ತಮ್ಮ ಮೊಟ್ಟೆ ಮರಿಗಳನ್ನಿಡುವುದರಿಂದ ಆ ಮೊಟ್ಟೆ ತಿನ್ನುವ ಆಸೆಗೆ ಕೆಲ ಹಾವುಗಳು ಹೇಗೋ ಇದರೊಳಗೆ ನುಸುಳಿ ಕೊಂಡಿರುವುದು ಸತ್ಯ ಸಂಗತಿಯೇ ಸರಿ. ಹಾಗೇ ಅದೇ ಕಾಲದಲ್ಲಿಯೇ ನಗರ ಮಧ್ಯಭಾಗದಲ್ಲಿರುವ ಹಾಸನ ಸಿಟಿ ಕ್ಲಬ್ ಆವರಣದಲ್ಲಿಯೂ ಅಂತಹದೇ ಸಸಿ ನೆಟ್ಟು ಬೆಳಸಿದ ಸಂಗತಿಯೂ ಇದೆ. ಆದರೆ ಇದೇ ಹೊತ್ತಿನಲ್ಲಿ ಆದಿಕಾಲದಿಂದ ನಗರ ಸಭೆಯವರು ಅದನ್ನು ಇಂದಿನವರೆಗೂ ಉಳಿಸಿಕೊಂಡಿ ಬಂದಿರುವುದು ಸಂತೋಷದ ವಿಷಯವಲ್ಲವೇ?

Ashika S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

3 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

4 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

4 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

4 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

5 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

6 hours ago