ವಿಶೇಷ

ಸಾಲಿಗ್ರಾಮ ಪಾರಂಪಳ್ಳಿಯಲ್ಲಿ ಕಯಾಕಿಂಗ್‌ ಎಂಬ ಮೋಜಿನ ಲೋಕ

ಪ್ರವಾಸೋದ್ಯಮ ಎಂಬ ಪದ ಕೇಳಿದೊಡನೆ ತಟ್ಟನೆ ನಮಗೆಲ್ಲ ಹೊಳೆಯುವುದು ಕೇರಳ ರಾಜ್ಯ. ಭೌಗೋಳಿಕವಾಗಿ ಚಿಕ್ಕ ರಾಜ್ಯವಾದರೂ ಅಲ್ಲಿನ ಸರ್ಕಾರ, ಜನತೆ ಪ್ರವಾಸೋದ್ಯಮದಲ್ಲಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಆಹಾರ, ಭಾಷೆ, ಸಂಸ್ಕೃತಿಯಲ್ಲಿರುವ ಭಿನ್ನತೆಯನ್ನು ಸಂಪನ್ಮೂಲವಾಗಿಸಿಕೊಂಡ ಅಲ್ಲಿನ ಜನತೆ ಟೆಂಪಲ್‌ ಟೂರಿಸಂ, ಆರೋಗ್ಯ ಪ್ರವಾಸೋದ್ಯಮ, ಬೋಟ್‌ ಹೌಸ್‌ ಗಳಿಂದ ಸಾಕಷ್ಟು ಆದಾಯ ಗಳಿಸುವ ಜತೆಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಆದರೆ ಕರ್ನಾಟಕ ರಾಜ್ಯದಲ್ಲಿ ಇಂತಹ ಪ್ರಯತ್ನಗಳು ವಿರಳ. ಇದಕ್ಕೆ ಅಪವಾದವೆಂಬಂತೆ ಇದೀಗ ಕರಾವಳಿಯಲ್ಲಿಯ ಕೆಲವೆಡೆ ಉತ್ಸಾಹಿ ಯುವಕರು ಬೋಟ್‌ಹೌಸ್‌, ಕಯಾಕಿಂಗ್‌ ಮೊದಲಾದ ಜಲಪ್ರವಾಸೋದ್ಯಮ ಸಾಹಸಗಳಿಗೆ ಕೈಹಾಕಿದ್ದಾರೆ. ಆ ಪೈಕಿ ಸಾಲಿಗ್ರಾಮ ಪಾರಂಪಳ್ಳಿಯ ಬ್ರಿಜ್‌ ಸಮೀಪ ಕಯಾಕಿಂಗ್‌ ನಡೆಸುತ್ತಿರುವ ಮಿಥುನ್‌ ಮೆಂಡನ್‌, ಲೋಕೇಶ್‌ ಮೆಂಡನ್‌ ಯುವಕರಿಗೆ ಮಾದರಿಯಾಗಿದ್ದಾರೆ.

ಕಯಾಕಿಂಗ್‌ ಎಂದರೇನು: ಸಮುದ್ರ ಮತ್ತು ನದಿ ನಡುವಿನ ಹಿನ್ನೀರಿನಲ್ಲಿ ನಡೆಸುವ ಪುಟ್ಟ ದೋಣಿಯಾನವೆ ಕಯಾಕಿಂಗ್‌. ಪ್ರವಾಸಿಗರೇ ಸ್ವತಃ ಪುಟ್ಟ ದೋಣಿ ಮುನ್ನಡೆಸಬೇಕು. ದೋಣಿಯಾನಕ್ಕೆ ಮೊದಲು ಕೆಲ ನಿಮಿಷಗಳ ತರಬೇತಿ ನೀಡುವ ಕ್ರಮವಿದೆ. ಭರತ ಇಳಿತದ ಅಬ್ಬರವಿರದ ಸಮಯದಲ್ಲಿ ಮಾತ್ರ ಯಾನಕ್ಕೆ ಅವಕಾಶವಿದ್ದು, ಮೊದಲು ಜಲರಾಶಿ ಕಂಡು‌ ಅಯ್ಯೋ ದೋಣಿ ನಡೆಸುವುದು ಸಾಧ್ಯವೇ ಎಂದು ಅಂಜುವವರು ಕೆಲಹೊತ್ತಿನ ದೋಣಿ ಪಯಣದ ಬಳಿಕ ನಿಜವಾದ ಮೋಜು ಅನುಭವಿಸುತ್ತಾರೆ. ಹಿನ್ನೀರು ಕೇವಲ ಎದೆಯತ್ತರಕ್ಕೆ ಮಾತ್ರವಿದ್ದು ಯಾವುದೇ ಅಪಾಯಕ್ಕೆ ಅವಕಾಶವಿಲ್ಲ. ಆದರೂ ಸುರಕ್ಷತೆ ದೃಷ್ಟಿಯಿಂದ ದೋಣಿ ಮಾಲೀಕರು ಲೈಫ್‌ ಜಾಕೆಟ್‌ ಅಳವಡಿಸುವಂತೆ ಸಲಹೆ ನೀಡುತ್ತಾರೆ. ನಮ್ಮ ಮನೆಯ ಸದಸ್ಯರಂತೆಯೇ ಪ್ರತಿ ಪ್ರವಾಸಿಗರನ್ನು ಪರಿಗಣಿಸುವ ದೋಣಿ ಮಾಲೀಕರು ದೋಣಿ ಪಯಣದ ಪಟ್ಟುಗಳನ್ನು ಎಳೇ ಮಕ್ಕಳಿಗೆ ತಿಳಿಹೇಳುವಂತೆ ತಿಳಿಸುವ ಪರಿ ಅನನ್ಯ.

ದರವೂ ದುಬಾರಿಯಲ್ಲ: ಈ ಯುವಕರು ಆರಂಭಿಸಿದ ಕಯಾಕಿಂಗ್‌‌ ಜಲಕ್ರೀಡೆ ಸಾಹಸ ಕ್ರೀಡೆ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದು, ದರವೂ ಹಿತʻಮಿತವಾಗಿದೆ. ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿ ಜಲಸಾಹಸದಲ್ಲಿ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಪ್ಲಾಸ್ಟಿಕ್‌ ತ್ಯಾಜ್ಯ ತೊಂದರೆ: ನದಿ ತೊರೆಗಳಿಗೆ ಜನರು ಎಸೆಯುವ ಕಸ, ಪ್ಲಾಸ್ಟಿಕ್‌ ತ್ಯಾಜ್ಯಗಳು ಹಿನ್ನೀರಿನ ಪ್ರದೇಶದಲ್ಲಿ ಸಂಗ್ರಹಗೊಂಡು ತೊಂದರೆ ಅನುಭವಿಸುವಂತಾಗದೆ. ಪದೇ ಪದೇ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡರೂ ಸಮಸ್ಯೆ ಮರುಕಳಿಸುತ್ತಿದೆ ಎಂದು ದೋಣಿ ಮಾಲೀಕರು ನುಡಿಯುತ್ತಾರೆ.

Gayathri SG

Recent Posts

ಈಜಲು ಹೋಗಿ‌ದ್ದ ಮೂವರು ನೀರುಪಾಲು: 5 ಜನ ಪ್ರಾಣಾಪಾಯದಿಂದ ಪಾರು

ಈಜಲು ಹೋಗಿ‌ದ್ದ ಮೂವರು ನೀರುಪಾಲಾಗಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ.

22 mins ago

“ಪಟ್ಲ ಸಂಭ್ರಮ” ಯಶಸ್ವಿಗೊಳಿಸಲು ಪಟ್ಲ ಸತೀಶ್ ಶೆಟ್ಟಿ ಕರೆ

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ "ಪಟ್ಲ ಸಂಭ್ರಮ" ನಮ್ಮೆಲ್ಲರ ಮನೆಯ ಕಾರ್ಯಕ್ರಮ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಟ್ಲ…

32 mins ago

ಮಂಗಳೂರು: ಕರ್ತವ್ಯದಲ್ಲಿದ್ದ ವಾಹನದ ಬಗ್ಗೆ ಸುಳ್ಳು ಸಂದೇಶ ರವಾನಿಸಿದ ಸಾರ್ವಜನಿಕ

ಕಳೆದ ದಿನ (ಮೇ 16) ಸಂಜೆ ಮಂಗಳೂರು ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಕೆಎ-19-ಜಿ-1023 ನೊಂದಣೆ ಸಂಖ್ಯೆಯ ಹೆದ್ದಾರಿ ಗಸ್ತು…

37 mins ago

ಹೊಸ ರುಚಿ: ಅವಲಕ್ಕಿ ಹುಳಿ ಮಾಡುವುದು ಹೇಗೆ?

ಗಡಿಬಿಡಿಯ ಜೀವನದಲ್ಲಿ ಬೆಳಗ್ಗಿನ ಉಪಹಾರ ಮಾಡಿಕೊಂಡು ಆಫೀಸಿಗೆ ಹೋಗುವುದೇ ಸವಾಲ್. ಇಂತಹ  ಸಂದರ್ಭದಲ್ಲಿ ಅವಲಕ್ಕಿ ಇದ್ದರೆ ಅದರಿಂದ ಹುಳಿ ತಯಾರಿಸಿ…

45 mins ago

ಬಾವಿಗೆ ಬಿದ್ದ ಮಗುವನ್ನು ರಕ್ಷಿಸಿದ ಯುವಕನಿಗೆ ಮೆಚ್ಚುಗೆಯ ಸುರಿಮಳೆ

ಸರಪಾಡಿಯ ಹಂಚಿಕಟ್ಟೆಯಲ್ಲಿ ಬಾವಿಗೆ ಬಿದ್ದ ಮಗುವೊಂದನ್ನು ತನ್ನ ಪ್ರಾಣದ ಹಂಗನ್ನು ತೊರೆದು ತುಂಡಾಗುವ ಸ್ಥಿತಿಯಲ್ಲಿದ್ದ ಹಳೆಯ ಹಗ್ಗವನ್ನು ಬಳಸಿ ಮೇಲಕ್ಕೆತ್ತಿದ…

54 mins ago

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು

ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ, ಶ್ರೀರಾಮ ಸೇನೆಯ ಅಧ್ಯಕ್ಷ ಸಿದ್ದಲಿಂಗ ಶ್ರೀಗಳ ವಿರುದ್ಧ ಕಲಬುಗಿಯಲ್ಲಿ ಜಾತಿ…

58 mins ago