ಪೋಲೆಂಡ್: ಸತತ ೩ ಗಂಟೆ ೬ ನಿಮಿಷ ೪೫ ಸೆಕೆಂಡ್ ಐಸ್ ಪೆಟ್ಟಿಗೆಯಲ್ಲಿರುವ ಮೂಲಕ ಪೋಲೆಂಡ್ ನ ಮಹಿಳೆಯೊಬ್ಬರು ವಿಶ್ವದಾಖಲೆ ಬರೆದಿದ್ದಾರೆ. ಈ ಮೂಲಕ 1 ಗಂಟೆ 53 ನಿಮಿಷಗಳ ವರೆಗೆ ಐಸ್ ಬಾಕ್ಸ್ನಲ್ಲಿ ನಿಂತು ದಿ ಐಸ್ಮ್ಯಾನ್ ಎನಿಸಿಕೊಂಡಿದ್ದ ವ್ಯಕ್ತಿಯ ದಾಖಲೆಯನ್ನು ಮುರಿದು ಕಟರ್ಜಿನಾ ಜಕುಬೌಸ್ಕಾ (48) ‘ದಿ ಐಸ್ ವುಮೆನ್’ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ಡಿಸೈನರ್ ಆಗಿರುವ ಕಟರ್ಜಿನಾ, ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ಹಾಗು ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಈ ಪ್ರಯತ್ನಕ್ಕೆ ಮುಂದಾದರೆಂದು ಹೇಳಿಕೊಂಡಿದ್ದಾರೆ. ಸವಾಲನ್ನು ಸ್ವೀಕರಿಸುವ ಮೊದಲು ಅವರನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು ಹಾಗು ಐಸ್ ಪೆಟ್ಟಿಗೆಯೊಳಗೆ ಇದ್ದಾಗ ಅವರ ದೇಹದ ಉಷ್ಣತೆಯ ಏರಿಳಿತಗಳನ್ನು ಪರೀಕ್ಷಿಸಲಾಗಿತ್ತು.
ಆ ೩ ಗಂಟೆಗಳ ಕಾಲ ತಾನು ಯಾವುದೇ ನೋವು ಅಥವ ಅಸ್ವಸ್ಥತೆಯನ್ನು ಅನುಭವ ಮಾಡಲಿಲ್ಲ ಎಂದು ಕಟರ್ಜಿನಾ ಹೇಳಿಕೊಂಡಿದ್ದಾರೆ.