News Karnataka Kannada
Friday, May 03 2024
ಸಮುದಾಯ

ಅಲ್ನೋಬೈಹ್ ಆಡಿಟೋರಿಯಂ ನಲ್ಲಿ ಬಿಸ್ಮಿ ರಿಯಾದ್ ವಾರ್ಷಿಕ ಮಹಾ ಸಭೆ

Bsmi
Photo Credit : News Kannada

ಬಿಸ್ಮಿ ರಿಯಾದ್ ಇದರ ವಾರ್ಷಿಕ ಮಹಾ ಸಭೆಯು ಮಾ. 18ರಂದು ಮಧ್ಯಾಹ್ನ ರಿಯಾದಿನ ಅಲ್ನೋಬೈಹ್ ಆಡಿಟೋರಿಯಂ ನಲ್ಲಿ ನಡೆಯಿತು.

ಮೊಹಮ್ಮದ್ ರಾಯೀಸ್ ಕಿರಾತ್ ಓದುವ ಮೂಲಕ ಸಭೆಯು ಪ್ರಾರಂಭಗೊಂಡಿತು ಮತ್ತು ಬಿಸ್ಮಿ ರಿಯಾದ್ ಇದರ ಅಧ್ಯಕ್ಷರಾದ ಇರ್ಷಾದ್ ಮೊಯಿದಿನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಸಾಬಿತ್ ಬಜ್ಪೆ ಮಂಡಿಸಿದರು.

ಬಜ್ಪೆ ಮತ್ತು ಸುತ್ತಮುತ್ತಲ ಜಮಾತ್‌ನ ಅಭಿವೃದ್ಧಿಗೆ ಕೈಗೊಳ್ಳಬಹುದಾದ ವಿವಿಧ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಂಸ್ಥೆಯ ಉದ್ದೇಶ ಮತ್ತು ಭವಿಷ್ಯದ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚಿಸಲಾಯಿತು.

ಬಿಸ್ಮಿ ರಿಯಾದ್‌ನ ಹೊಸ ಸಮಿತಿಯನ್ನು ರಚಿಸಲಾಯಿತು ಮತ್ತು ಬಿಸ್ಮಿ ರಿಯಾದ್ ಸ್ಥಾಪಕ ಸದಸ್ಯರೂ ಮತ್ತು ಸಲಹೆಗಾರರೂ ಆದ  ಅಜೀಜ್ ಬಂಕಲ್ ನೇತೃತ್ವದಲ್ಲಿ ಚುನಾವಣಾ ಕಾರ್ಯ ವಿಧಾನವನ್ನು ನಡೆಸಿಕೊಟ್ಟರು.  2022-2023 ಸಾಲಿನ ಅಧ್ಯಕ್ಷರಾಗಿ ಹರ್ಷದ್  ಅಯೂಬ್ , ಉಪಾಧ್ಯಕ್ಷರಾಗಿ ಖಾಲಿದ್ ಕಂಚಿ ಆಯ್ಕೆಯಾದರು, ಪ್ರಧಾನ ಕಾರ್ಯದರ್ಶಿಯಾಗಿ ಮೊಯ್ದಿನ್ ನಿಸಾರ್, ಕಾರ್ಯದರ್ಶಿಯಾಗಿ ಶಫೀಕ್ ಶರೀಫ್, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ತೌಸೀಫ್, ಸಲಹೆಗಾರಾರಾಗಿ ಅಜೀಜ್ ಬಂಕಲ್ ಮತ್ತು ಇರ್ಷಾದ್ ಮೊಯ್ದಿನ್ ಆಯ್ಕೆಯಾದರು.

ಅದೇ ರೀತಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಿಸಾರ್ ಅಹಮದ್, ಆಕಿಬ್, ಆಸಿಫ್, ಸಾಬಿತ್ ಹಸ್ಸನ್, ಸಾಮಿತ್ ಅಬ್ದುಲ್ಲಾ, ಸಲಾವುದ್ದೀನ್, ರಾಝಿಕ್, ಸಲಾಂ, ಅನ್ಸಾರ್ ಅಹಮದ್ ಆಯ್ಕೆಯಾದರು. ಅದೇ ರೀತಿ ಬಜ್ಪೆ ಹಾಗೂ ಸುತ್ತಮುತ್ತಲಿನ ಅನಿವಾಸಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು