ಬೆಂಗಳೂರು: ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಸೋಮವಾರ 14ನೇ ಆವೃತ್ತಿಯ ‘ಏರೋ ಇಂಡಿಯಾ 2023’ ವೈಮಾನಿಕ ಪ್ರದರ್ಶನ ಉದ್ಘಾಟನೆಗೊಂಡಿತು.
ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವು ಮಾನವ ರಹಿತ ವಿಮಾನ ಕ್ಷೇತ್ರದ ಬೆಳವಣಿಗೆ, ಬಾಹ್ಯಾಕಾಶ ರಕ್ಷಣೆ, ಭವಿಷ್ಯದ ತಂತ್ರಜ್ಞಾನ ಕುರಿತ ವಿಚಾರ ವಿನಿಮಯಕ್ಕೆ ಸಾಕ್ಷಿಯಾಯಿತು.