Categories: ಆರೋಗ್ಯ

ಮುಟ್ಟಿನ ದಿನಗಳಲ್ಲಿ ಮಹಿಳೆಯರ ಆಹಾರ ಕ್ರಮಗಳು

ಮಹಿಳೆಯರ ಮುಟ್ಟಿನ ದಿನಗಳಲ್ಲಿ ಆಹಾರದ ಬಗ್ಗೆ ವಿಶೇಷವಾಗಿ ಗಮನ ನೀಡಬೇಕಾಗುತ್ತದೆ. ಆ ದಿನಗಳಲ್ಲಿ ಹೆಚ್ಚಾಗಿ ತಿನ್ನಲು ಆಸೆಯಾಗುವುದು ತೀರಾ ಸಾಮಾನ್ಯ ಹೀಗಾಗಿ ನಾವು ತಿನ್ನುವ ಆಹಾರಗಳು ಹೇಗಿರಬೇಕು ಹಾಗೂ ಯಾವ ಆಹಾರಗಳನ್ನು ಸೇವಿಸಬೇಕು ಎನ್ನುವುದನ್ನು ನೋಡೋಣ.

ಆಯುರ್ವೇದದಲ್ಲಿ ಹುಳಿ, ಉಪ್ಪು, ಕಹಿ ಹಾಗೂ ಕಷಾಯ ಹೊಂದಿರುವಂತಹ ಆಹಾರಗಳನ್ನು ಮುಟ್ಟಿನ ಸಮಯದಲ್ಲಿ ಸೇವಿಸದಿರುವುದು ಬಹಳ ಉಪಯುಕ್ತ.

ಮಧುರ ರಸ ಹೊಂದಿರುವ ಆಹಾರಗಳಾದ ಸಿಹಿ ಪದಾರ್ಥಗಳು, ಹಾಲಾನ್ನ, ಪಾಯಸ ಮುಂತಾದ ಸಹಿ ಅಂಶವಿರುವ ಆಹಾರ ಸೇವಿಸುವುದು ಉತ್ತಮ ಎಂದು ಕಾಕುಂಜೆ ಆಯುರ್ವೇದಿಕ್ ವೆಲ್‌ನೆಸ್ ಕ್ಲಿನಿಕ್ ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ಮುಟ್ಟಿನ ಸಮಯದಲ್ಲಿ ನಮ್ಮ ದೇಹದಲ್ಲಿ ವಾತ ಮತ್ತು ಪಿತ್ತ ಎನ್ನುವ ಎರಡು ದೋಷಗಳು ಹೆಚ್ಚಾಗುತ್ತವೆ. ಹೀಗಾಗಿ ಇದನ್ನು ಸಮತೋಲನಗೊಳಿಸಲು ಈ ರೀತಿಯ ಮಧುರ ಆಹಾರಗಳನ್ನು ಸೇವಿಸಬೇಕು.

ತರಕಾರಿಗಳಲ್ಲಿ ಕುಂಬಳಕಾಯಿ, ಸೋರೆಕಾಯಿ, ಹೀರೆಕಾಯಿ, ಪಟ್ಲ ಮುಂತಾದ ತರಕಾರಿಗಳನ್ನು ನಮ್ಮ ಆಹಾರದಲ್ಲಿ ಸೇರಿಸುವುದು ಅವಶ್ಯಕ.

ಜೂಸ್‌ಗಳಲ್ಲಿ ಪುನರ್ಪುಳಿ, ಸೊಗತೆ ಬೇರಿನ ಜೂಸ್, ಜೀರಿಗೆ ಹಾಗೂ ಕೊತ್ತಬಂರಿ ಬೀಜ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ದೇಹಕ್ಕೆ ತಂಪು ಹಾಗೂ ಹೊಟ್ಟೆ ನೋವುನ್ನು ಸಹ ಕಡಿಮೆಮಾಡುತ್ತದೆ.

ಇವುಗಳ ಜೊತೆಗೆ ಅನ್ನ, ಮೊಸರನ್ನವನ್ನು ಸೇವಿಸುವುದರಿಂದ ಮುಟ್ಟಿನ ದಿನಗಳಲ್ಲಿ ಮಹಿಳೆಯರ ಹೊಟ್ಟೆನೋವನ್ನು ಸಹ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಗೊಳಿಸಬಹುದು.

ಸಾಧ್ಯವಾದಷ್ಟು ಪ್ರೊಸೆಸ್ಡ್ ಆಹಾರಗಳು, ಜಂಕ್ ಫುಡ್, ಚಿಪ್ಸ್, ಸಾಫ್ಟ್ ಡ್ರಿಂಕ್ , ಮುಂತಾದ ಬೇಕರಿ ಆಹಾರಗಳನ್ನು ಮುಟ್ಟಿನ ಸಮುಯದಲ್ಲಿ ಸೇವಿಸದಿರುವುದು ಉತ್ತಮ.

Ashika S

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

4 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

4 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

4 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

4 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

5 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

5 hours ago