Categories: ಆರೋಗ್ಯ

ಕ್ಯಾರೆಟ್ ಸೇವನೆಯಿಂದ ಏನೆಲ್ಲ ಆರೋಗ್ಯ ಪ್ರಯೋಜನವಿದೆ ಗೊತ್ತಾ?

ಬೇಸಿಗೆಯ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಹಸಿರು ತರಕಾರಿ ಮತ್ತು ಹಣ್ಣುಗಳ ಸೇವನೆ ಮಾಡಬೇಕು ಇದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.  ಬೇಸಿಗೆಯಲ್ಲಿ ಯಾವ ತರಕಾರಿಯನ್ನು ಹೆಚ್ಚು ಸೇವನೆ ಮಾಡಬೇಕು ಅದು ಆರೋಗ್ಯವನ್ನು ಹೇಗೆ ಕಾಪಾಡುತ್ತದೆ ಎಂಬುದನ್ನು ಅರಿತುಕೊಂಡು ಅಂತಹ ತರಕಾರಿಗೆ ಆದ್ಯತೆ ನೀಡಬೇಕು. ಸಾಮಾನ್ಯವಾಗಿ ಎಲ್ಲ ತರಕಾರಿಗಳಲ್ಲಿಯೂ ಒಂದಲ್ಲ  ಒಂದು ರೀತಿಯ ಆರೋಗ್ಯಕಾರಿ ಗುಣವಿದೆ. ಈ ಪೈಕಿ ಕ್ಯಾರೆಟ್ ನಲ್ಲಿ ಸಮಗ್ರವಾದ ದೇಹಕ್ಕೆ ಬೇಕಾದ ಪೋಷಕ ಶಕ್ತಿಯಿರುವುದನ್ನು ಕಾಣಬಹುದಾಗಿದೆ.

ಸಾಮಾನ್ಯವಾಗಿ ಮಕ್ಕಳು ಚಿಕ್ಕವರಿರುವಾಗ ಕಣ್ಣಿನ ಆರೋಗ್ಯ ಹಾಗೂ ದೃಷ್ಟಿಗೆ  ಕ್ಯಾರೆಟ್ ಸೇವನೆ ಒಳ್ಳೆಯದೆಂದು  ತಿಳಿಹೇಳುವುದನ್ನು ಕೇಳಿದ್ದೇವೆ, ಅಲ್ಲದ ವೃದ್ದಾಪ್ಯದಲ್ಲಿ ಕಾಡುವ ಕಣ್ಣಿನ  ಸಮಸ್ಯೆಗಳಿಗೆ ನಿತ್ಯ ಕ್ಯಾರೆಟ್ ಸೇವನೆಯಿಂದ ಪರಿಹಾರ ಸಾಧ್ಯ ಎಂಬುದನ್ನು ಕಣ್ಣಿನ ವೈದ್ಯರು ದೃಢಪಡಿಸಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಕಿರಿಯರಿಂದ ಹಿಡಿದು ಹಿರಿಯರವರೆಗೆ ಕ್ಯಾರೆಟ್ ಆರೋಗ್ಯಕ್ಕೆ ಉತ್ತಮವಾಗಿದೆ.

ಕ್ಯಾರೆಟ್‌ನಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದರ ಬಗ್ಗೆ ಹಲವು ಸಂಶೋಧನೆಗಳು ನಡೆದಿದ್ದು ಒಂದಷ್ಟು  ಮಾಹಿತಿಯನ್ನು ಹೊರಹಾಕಲಾಗಿದೆ. ಅದೇನೆಂದರೆ ಇದು ದೇಹದ ಲವಲವಿಕೆ ಹೆಚ್ಚಿಸುತ್ತದೆ. ಸಮತೋಲನದಲ್ಲಿ ವಿಟಮಿನ್‌ಗಳು ದೊರೆಯುವಂತೆ ಮಾಡುತ್ತದೆ, ಚರ್ಮದ ಕಾಂತಿ ಹೆಚ್ಚಿಸುತ್ತದೆ.  ಕ್ಯಾನ್ಸರ್ ತಡೆಗೂ ಸಹಕಾರಿಯಾಗಿದೆ.

ಕ್ಯಾರೆಟ್‌ನಲ್ಲಿರುವ ಫಲ್ಕಾರಿನಾಲ್ ಎಂಬ ನೈಸರ್ಗಿಕ ಔಷಧಿ ಶೀಲಿಂದ್ರಗಳಿಂದ ಬರುವ ರೋಗಗಳನ್ನು ಬೇರುಮಟ್ಟದಲ್ಲಿ  ತಡೆಯುತ್ತದೆ. ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ದೂರ ಮಾಡುವಲ್ಲಿಯೂ ಸಹಕಾರಿಯಾಗಿದೆ. ಪಚನ ಕ್ರಿಯೆ ವೃದ್ಧಿಸಿ ಆರೋಗ್ಯ ನೀಡುತ್ತದೆ.

ಕ್ಯಾರೆಟ್‌ನಲ್ಲಿ ವಿಟಮಿನ್ ಎ ಹೇರಳವಾಗಿರುವ ಕಾರಣ ಆರೋಗ್ಯ ನೀಡುವುದಲ್ಲದೆ ಚರ್ಮಕಾಂತಿಯನ್ನು  ವೃದ್ಧಿಸುವಲ್ಲಿಯೂ ಸಹಕಾರಿಯಾಗಿದೆ.  ಬೇಯಿಸಿ ಅಥವಾ ಹಸಿಯಾಗಿ ತಿನ್ನುವುದರಿಂದ ಸೋಂಕನ್ನು ತಡೆಗಟ್ಟುತ್ತದೆ. ಹೃದಯ, ಹಲ್ಲು, ಒಸಡುಗಳಿಗೂ ಇದು ಆರೋಗ್ಯವನ್ನು ನೀಡುತ್ತದೆ.

ವಯೋಸಹಜ ನೇತ್ರ ದೋಷದಿಂದ ಸಮಸ್ಯೆ  ಎದುರಿಸುತ್ತಿರುವವರನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದ  ಬೋಸ್ಟನ್ ಹಾರ್ವಡ್ ಸ್ಕೂಲ್‌ನ ಪಬ್ಲಿಕ್ ಹೆಲ್ತ್  ವಿಭಾಗದ ನೇತ್ರ ತಜ್ಞರು ಕ್ಯಾರೆಟ್, ಸಿಹಿ ಆಲೂಗೆಡ್ಡೆ, ಕಿತ್ತಳೆ, ಮೆಣಸು ಸೇರಿದಂತೆ ಸೊಪ್ಪು  ಬಳಸುವ ಪ್ರಮಾಣವನ್ನು ಹೆಚ್ಚಿಸಿದಂತೆ ಪ್ರಯೋಗಕ್ಕೆ ಒಳಗಾದ ವಯಸ್ಸಾದವರು ಹಾಗೂ ವಯೋಸಹಜವಾಗಿ ನೇತ್ರ ಸಮಸ್ಯೆ ಎದುರಿಸುತ್ತಿರುವವರನ್ನು ಪರೀಕ್ಷಿಸಲಾಗಿತ್ತು.

ಈ ವೇಳೆ ಇಳಿವಯಸ್ಸಿನಲ್ಲೂ ಕ್ಯಾರೆಟ್ ಸೇರಿದಂತೆ ತರಕಾರಿ ಸೊಪ್ಪು ಬಳಸಿದವರಲ್ಲಿ ದೃಷ್ಟಿ ಸಮಸ್ಯೆಯ ಅನುಪಾತ  ಗಣನೀಯವಾಗಿ ಇಳಿಕೆಯಾಗಿರುವುದು ಕಂಡು ಬಂತಂತೆ. ಹೀಗಾಗಿ ಸರ್ವರೂ ಹೆಚ್ಚಿನ ಪ್ರಮಾಣದಲ್ಲಿ ಕ್ಯಾರೆಟ್ ಸೇವಿಸಿದರೆ ದೃಷ್ಠಿದೋಷ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.

ನಿಜ ಹೇಳಬೇಕೆಂದರೆ ಕ್ಯಾರೆಟ್ ದೇಹಕ್ಕೆ ಹಲವು ರೀತಿಯಲ್ಲಿ ಉಪಯುಕ್ತ ತರಕಾರಿಯಾಗಿದ್ದು, ಇದನ್ನು ನಾವು ನಿತ್ಯ  ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಕೆ ಮಾಡಿದರೆ ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಾಧ್ಯವಿದೆ  ಎಂಬುದನ್ನು ತಳ್ಳಿಹಾಕಲಾಗದು.

Ashika S

Recent Posts

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

1 min ago

ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ  ಗ್ಯಾಂಗ್  ಏಕಾಏಕಿ ದಾಳಿ ಮಾಡಿದ ಘಟನೆ ಪಟ್ಟಣದ…

22 mins ago

ಜಿಲ್ಲಾಡಳಿತ ಬೀದರ್ ವತಿಯಿಂದ ಬಸವಣ್ಣ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ…

41 mins ago

ನಟಿ ರೂಪಾ ಅಯ್ಯರ್‌ ಗೆ ಆನ್ ಲೈನ್ ನಲ್ಲಿ ವಂಚನೆ: ಹಣ ದೋಚೋಕೆ ಟ್ರೈ ಮಾಡಿದ ಕಳ್ಳರು

ಸ್ಯಾಂಡಲ್‌ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್…

1 hour ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು: ಪ್ರಹ್ಲಾದ್ ಜೋಶಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ, ಸಂಪೂರ್ಣ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ…

1 hour ago

ಬಿರುಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಅರಳಿ ಮರ: ನಾಲ್ಕು ಮನೆಗಳು ಜಖಂ

ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ನಾಲ್ಕು ಮನೆಗಳ ಮೇಲೆ ಉರುಳಿ ಬಿದ್ದು ಮನೆಗಳು…

2 hours ago