News Karnataka Kannada
Friday, May 03 2024
ಆರೋಗ್ಯ

ಚರ್ಮಮದ ಆರೈಕೆಗೆ ಕೆಲವು ಆಹಾರ ಕ್ರಮಗಳು

Some diets for skin care
Photo Credit :

ಹೆಚ್ಚಿನವರು ಚರ್ಮದ ಕಾಂತಿಹೆಚ್ಚಿಸಲು ಫೇಸ್ ಪ್ಯಾಕ್ ಹಾಕುವುದು, ಕ್ರೀಂ ಹಚ್ಚುವುದು ಹಾಗೂ ಮುಖಕ್ಕೆ ಬ್ಲೀಚಿಂಗ್ ಮಾಡಿಸುವುದುದರಿಂದ ಚರ್ಮದ ಅಂದ ಹೆಚ್ಚಾಗುತ್ತದೆ ಎಂದು ಭಾವಿಸುತ್ತಾರೆ, ಇದು ಕೂಡ ಬೇಕು. ಆದರೆ ಇದು ಸೌಂದರ್ಯದ ಒಂದು ಭಾಗವಷ್ಟೆ. ಇದನ್ನು ಎಕ್ಸ್ಟರ್ನಲ್ ಬ್ಯೂಟಿ ಎನ್ನಬಹುದು.

ನಮ್ಮ ದೇಹದ ಚರ್ಮವನ್ನು ಕಾಪಾಡಲು ಕೇವಲ ಹೊರಗಿನಿಂದ ಚರ್ಮದ ಆರೈಕೆ ಮಾಡುವುದು ಮಾತ್ರವಲ್ಲ ಆಹಾರದ ಮೂಲಕವು ಸಹ ನಮ್ಮ ಚರ್ಮವನ್ನು ಸುಂದರಗೊಳಿಸಬಹುದು ಎಂದು ಕಾಕುಂಜೆ ಆಯುರ್ವೇದಿಕ್ ವೆಲ್‍ನೆಸ್ ಕ್ಲಿನಿಕ್‍ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ನಮ್ಮ ದಿನ ನಿತ್ಯದ ಜೀವನದಲ್ಲಿ ಒತ್ತಡವಿದ್ದಲ್ಲಿ ಅದು ನಮ್ಮ ಚರ್ಮದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಇದರ ಜೊತೆಗೆ ನಿತ್ಯ 7ರಿಂದ 8 ಗಂಟೆಗಳ ನಿದ್ರೆ ಚರ್ಮದ ಆರೈಕೆಗೆ ಅವಶ್ಯಕವಾಗಿರುತ್ತದೆ.

ಹಾರ್ಮೋನಲ್ ನಿಂದಲೂ ನಮ್ಮ ಚರ್ಮದ ಮೇಲೆ ಹಲವಾರು ಪರಿಣಾಮಗಳನ್ನು ಬೀರುತ್ತದೆ. ಜೊತೆಗೆ ಸೂರ್ಯನಿಗೆ ನೇರವಾಗಿ ನಮ್ಮ ಚರ್ಮವನ್ನು ತೆರೆದುಕೊಳ್ಳುವುದು ಕೂಡ ಚರ್ಮದ ಮೇಲೆ ಪರಿಣಾಮ ಬೀರುತ್ತದೆ.

ಆಹಾರದಲ್ಲಿ ಮುಖ್ಯವಾಗಿ ಕಾಬ್ರೋಹೈಡ್ರೈಟ್ಸ್, ಪ್ರೊಸೆಸ್ ಆಹಾರಗಳನ್ನು ಆದಷ್ಟು ಕಡಿಮೆ ಮಾಡಿ ಹಣ್ಣುಗಳಾದ ಅವಕಾಡೋ, ಬಾಳೆಹಣ್ಣು, ತರಕಾರಿ, ಸೇರಿದಂತೆ ಡ್ರೈ ಫ್ರೂಟ್ಸ್, ನಟ್ಸ್ ಹಾಗೂ ಸೀಡ್ಸ್‍ಗಳನ್ನು ಸೇವಿಸುವುದು ಉತ್ತಮ. ಇವುಗಳ ಜೊತೆಗೆ ನಮ್ಮ ಜೀರ್ಣಕ್ರಿಯೆ ಸಹ ಉತ್ತಮವಾಗಿರುವಂತೆ ನೋಡಿಕೊಳ್ಳವುದು ನಮ್ಮ ಚರ್ಮಕ್ಕೆ ಬಹಳ ಮುಖ್ಯವಾಗಿರುತ್ತದೆ.

ಪ್ರೋಟಿನ್, ಓಮೆಗಾ3, ಮೈಕ್ರೋನ್ಯೂಟ್ರಿಯಂಟ್ಸ್, ವೈಟಮಿನ್ ಬಿ12, ಇವುಗಳೆಲ್ಲ ನಮ್ಮ ಚರ್ಮದ ಆರೈಕೆಗೆ ಬಹಳ ಉಪಕಾರಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು