News Karnataka Kannada
Wednesday, May 01 2024
ಆರೋಗ್ಯ

ನೇರಳೆ ಶರಬತ್ತು ನೀಡುತ್ತದೆ ದೇಹಕ್ಕೆ ಪೋಷಕ ಶಕ್ತಿ

ಬೇಸಿಗೆಯಲ್ಲಿ ನೇರಳೆ ಮಾರುಕಟ್ಟೆಗೆ ಬರುತ್ತದೆ. ಜತೆಗೆ ಮಲೆನಾಡುಗಳ ಕಾಡುಗಳಲ್ಲಿಯೂ ಇದು ಹೇರಳವಾಗಿ ಸಿಗುತ್ತದೆ. ಇದನ್ನು ಶರಬತ್ತು ಮಾಡಿ ಕುಡಿದರೆ ಬೇಸಿಗೆಯ ಬಾಯಾರಿಕೆ ನೀಗಿಸಬಹುದಲ್ಲದೆ, ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
Photo Credit : Pixabay

ಬೇಸಿಗೆಯಲ್ಲಿ ನೇರಳೆ ಮಾರುಕಟ್ಟೆಗೆ ಬರುತ್ತದೆ. ಜತೆಗೆ ಮಲೆನಾಡುಗಳ ಕಾಡುಗಳಲ್ಲಿಯೂ ಇದು ಹೇರಳವಾಗಿ ಸಿಗುತ್ತದೆ. ಇದನ್ನು ಶರಬತ್ತು ಮಾಡಿ ಕುಡಿದರೆ ಬೇಸಿಗೆಯ ಬಾಯಾರಿಕೆ ನೀಗಿಸಬಹುದಲ್ಲದೆ, ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಮಲೆನಾಡಿನಲ್ಲಿ ಎಲ್ಲೆಂದರಲ್ಲಿ ನೇರಳೆ ಮರಗಳು ಸಿಗುತ್ತವೆ. ಈ ಹಣ್ಣುಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ರುಚಿಯಾಗಿರುತ್ತವೆ. ಬೇಸಿಗೆ ಕಾಲದ ಕೊನೆಯಲ್ಲಿ ಇವು ಹಣ್ಣಾಗುತ್ತವೆ. ಚಿಕ್ಕ ಮರಗಳಿಂದ ಹಿಡಿದು ಹೆಮ್ಮರವಾಗಿ ಬೆಳೆಯುವ ಮರಗಳಲ್ಲಿಯೂ ಹೇರಳವಾಗಿ ಹಣ್ಣು ದೊರೆಯುತ್ತವೆ.

ಈ ಹಣ್ಣುಗಳನ್ನು ಗ್ರಾಮೀಣ ಪ್ರದೇಶದಲ್ಲಿ ಜನರಿಗಿಂತ ಪ್ರಾಣಿಪಕ್ಷಿಗಳೇ ಜಾಸ್ತಿ ತಿನ್ನುವುದನ್ನು ಕಾಣಬಹುದು. ಬಹಳಷ್ಟು ಮಂದಿಗೆ ನೇರಳೆ ಹಣ್ಣಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ಗೊತ್ತಿಲ್ಲ. ಹೀಗಾಗಿ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಮನೆ ಬಳಿ ನೇರಳೆ ಮರವಿದ್ದರೆ ಅದರಲ್ಲಿ ಹಣ್ಣುಗಳಿದ್ದರೆ ಅವುಗಳ ಬಗ್ಗೆ ನಿರ್ಲಕ್ಷ್ಯ ಮಾಡದೆ ಸೇವಿಸಿ. ಏಕೆಂದರೆ ಈ ನೇರಳೆ ಹಣ್ಣುಗಳು ಸಾಮಾನ್ಯವಲ್ಲ. ಇವುಗಳಲ್ಲಿಯೂ ಆರೋಗ್ಯದಾಯಕ ಪೋಷಕಾಂಶಗಳು ಬಹಳಷ್ಟು ಇವೆ.

ನೂರು ಗ್ರಾಂ ನೇರಳೆ ಹಣ್ಣಿನಲ್ಲಿ ತೇವಾಂಶ 83.7ಗ್ರಾಂ, ಸಸಾರಜನಕ 0.7, ಮೇದಸ್ಸು 0.3, ಖನಿಜಾಂಶ 0.3, ಕಾರ್ಬೋಹೈಡ್ರೇಟ್ 14, ಕ್ಯಾಲ್ಸಿಯಂ 15 ಮಿ.ಗ್ರಾಂ, ಫಾಸ್ಫರಸ್ 1.5, ಕಬ್ಬಿಣ 1.2, ಥಿಯಾಮಿನಾ 2.23, ರೈಬೋಫ್ಲಾವಿನ್ 0.01, ನಯಾಸಿನ್ 0.1, ಸಿ ಜೀವಸತ್ವ 18 ಮಿಲಿಗ್ರಾಂ ಇದೆ ಹೀಗಾಗಿ ಇದರ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ನೇರಳೆ ಹಣ್ಣಿನ ಜ್ಯೂಸ್ ನಲ್ಲಿ ದಾಹವನ್ನು ತಣಿಸುವ ಶಕ್ತಿಯಿದೆ ಜತೆಗೆ ನಿದ್ದೆಕೊರತೆ, ಅತಿಯಾದ ಟೀ ಸೇವನೆಯಿಂದ ಉಂಟಾಗುವ ಪಿತ್ತದ ತೊಂದರೆಯನ್ನು ನೇರಳೆ ಹಣ್ಣನ್ನು ಸೇವಿಸುವುದರಿಂದ ಶಮನ ಮಾಡಲು ಸಾಧ್ಯವಾಗುತ್ತದೆ. ಆಹಾರ ಜೀರ್ಣವಾಗದೆ ತೊಂದರೆ ಪಡುವವರು ನೇರಳೆಹಣ್ಣನ್ನು ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.

ಅಜೀರ್ಣದಿಂದಾಗುವ ಬೇಧಿಗೂ ನೇರಳೆ ಶರಬತ್ತು ಉತ್ತಮ ಔಷಧಿಯಾಗಿದೆ. ಇನ್ನು ಅರ್ಧ ಲೋಟದಷ್ಟು ನೇರಳೆ ಹಣ್ಣಿನ ಶರಬತ್ತಿಗೆ ಒಂದು ಚಮಚದಷ್ಟು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಅಂಗಾಲು, ಅಂಗೈ ಉರಿ ಕಡಿಮೆಯಾಗಿ ನಿದ್ದೆ ಮಾಡಲು ಸಹಾಯವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು