ಲಾಸ್ ಏಂಜಲೀಸ್: ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಮಾಹಿತಿಯ ಪ್ರಕಾರ, ಹೊಸ ಒಮಿಕ್ರಾನ್ ಸಬ್ವೇರಿಯಂಟ್ ಎಕ್ಸ್ಬಿಬಿ.1.16 ಯುಎಸ್ನಲ್ಲಿ ವೇಗವಾಗಿ ಹರಡುತ್ತಿದೆ, ಈ ವಾರ ಅದರ ಹರಡುವಿಕೆ ಪ್ರಮಾಣ ಶೇಕಡಾ 12.5 ಕ್ಕೆ ಏರಿದೆ ಎಂದು ಅಧ್ಯಯನ ವರದಿ ಹೇಳಿದೆ.
“ಆರ್ಕ್ಟುರಸ್” ಎಂದು ಕರೆಯಲ್ಪಡುವ ಸಬ್ವೇರಿಯಂಟ್, ದೇಶದಲ್ಲಿ ಎರಡನೇ ಪ್ರಬಲ ತಳಿಯಾಗಿದೆ. ಮುಂಬರುವ ವಾರಗಳಲ್ಲಿ ಸೋಂಕು ಹೆಚ್ಚುವ ನಿರೀಕ್ಷೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಎಕ್ಸ್ ಬಿಬಿ 1.16 ಪ್ರಾಯಶಃ ದೇಶದಲ್ಲಿ ಮುಂದಿನ ಪ್ರಬಲವಾದ ಕರೋನವೈರಸ್ ಸ್ಟ್ರೈನ್ ಆಗಬಹುದು ಎನ್ನಲಾಗಿದೆ.