ಲಾಸ್ ಏಂಜಲೀಸ್: ವಿಯೆಟ್ನಾಂ-ಅಮೆರಿಕನ್ ನಟ ಕೆ ಹುಯ್ ಕ್ವಾನ್ ಅವರಿಗೆ ಅತ್ಯುತ್ತಮ ಪೋಷಕ ನಟ ಆಸ್ಕರ್ ಪ್ರಶಸ್ತಿಯನ್ನು ನೀಡಲಾಯಿತು.
ಅವರು ಬ್ರೆಂಡನ್ ಗ್ಲೀಸನ್ (‘ದಿ ಬ್ಯಾನ್ಶೀಸ್ ಆಫ್ ಇನಿಶೆರಿನ್’), ಬ್ರಿಯಾನ್ ಟೈರಿ ಹೆನ್ರಿ (‘ಕಾಸ್ವೇ’), ಜುಡ್ ಹಿರ್ಷ್ (‘ದಿ ಫ್ಯಾಬೆಲ್ಮ್ಯಾನ್ಸ್’) ಮತ್ತು ಬ್ಯಾರಿ ಕಿಯೋಘನ್ (‘ದಿ ಬ್ಯಾನ್ಶೀಸ್ ಆಫ್ ಇನಿಶರಿನ್’) ನಂತಹ ಸಹ ನಾಮನಿರ್ದೇಶಿತರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿದರು.
‘ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್’ ಚಿತ್ರದಲ್ಲಿನ ಪುನರಾಗಮನದ ಪಾತ್ರಕ್ಕಾಗಿ ನಟ ಈ ಗೌರವವನ್ನು ಪಡೆದರು. ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ವಿಯೆಟ್ನಾಂ ಮೂಲದ ನಟನಾಗಿ ಈ ನಟ ಇತಿಹಾಸ ನಿರ್ಮಿಸಿದರು.
ಕೆ ಹುಯ್ ಕ್ವಾನ್ ವೇದಿಕೆಯಲ್ಲಿ ಭಾಷಣ ಮಾಡುವ ವೇಳೆ ಆನಂದಭಾಷ್ಪ ಹರಿಸಿದರು. “ನನ್ನ ತಾಯಿಗೆ 84 ವರ್ಷ ವಯಸ್ಸಾಗಿದೆ ಮತ್ತು ಅವರು ಮನೆಯಲ್ಲಿ ಸಮಾರಂಭವನ್ನು ವೀಕ್ಷಿಸುತ್ತಿದ್ದಾರೆ. ನನ್ನ ಪ್ರಯಾಣವು ದೋಣಿಯಲ್ಲಿ ಪ್ರಾರಂಭವಾಯಿತು, ನಾನು ನಿರಾಶ್ರಿತರ ಶಿಬಿರದಲ್ಲಿ ಒಂದು ವರ್ಷ ಕಳೆದಿದ್ದೇನೆ ಎಂದು ತನ್ನ ಜೀವನದ ವಿವಿಧ ಮಜಲುಗಳನ್ನು ವಿವರಿಸಿದರು.