News Karnataka Kannada
Monday, April 29 2024
ಆರೋಗ್ಯ

ರಕ್ತದೊತ್ತಡದ ಔಷಧವು ನಿಮ್ಮ ಜೀವಿತಾವಧಿ ವಿಸ್ತರಿಸಬಹುದು: ಸಂಶೋಧನೆ

drug rilmenidine
Photo Credit : By Author

ಸಾಮಾನ್ಯವಾಗಿ, ಕಡಿಮೆ ಕ್ಯಾಲೋರಿ ಆಹಾರಗಳು ಕೂದಲು ತೆಳುವಾಗುವುದು, ತಲೆತಿರುಗುವಿಕೆ ಮತ್ತು ಮೂಳೆಗಳ ಮೇಲೆ ಅಡ್ಡಪರಿಣಾಮವನ್ನುಂಟು ಮಾಡುತ್ತದೆ. ಆದಾಗ್ಯೂ, ಈ ಅಧಿಕ ರಕ್ತದೊತ್ತಡದ ಔಷಧವು ದೇಹದ ಮೇಲೆ ಯಾವುದೇ ಪರಿಣಾಮ ಬೀರದೆ, ಕಡಿಮೆ ಕ್ಯಾಲೋರಿ ಆಹಾರದಂತೆಯೇ ಅದೇ ಪ್ರಯೋಜನಗಳನ್ನು ಕಾರ್ಯಗತಗೊಳಿಸುತ್ತದೆ ಎಂದು ವಿಜ್ಞಾನಿಗಳು ಸಮರ್ಥಿಸಿದ್ದಾರೆ.

ಅಧಿಕ ರಕ್ತದೊತ್ತಡದ ಔಷಧ, ರಿಲ್ಮೆನಿಡಿನ್ ಹುಳುಗಳಲ್ಲಿ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುವ ಸಾಮರ್ಥ್ಯವನ್ನು ತೋರಿಸಿದೆ. ವಿಜ್ಞಾನಿಗಳ ಪ್ರಕಾರ, ಈ ಫಲಿತಾಂಶವು ಮಾನವರಲ್ಲಿ ಯಶಸ್ವಿಯಾದರೆ, ದೀರ್ಘ ಮತ್ತು ಆರೋಗ್ಯಕರ ಜೀವಿತಾವಧಿಯಲ್ಲಿ ಸಹಾಯ ಮಾಡಬಹುದು ಎಂದು ಬಹಿರಂಗಪಡಿಸಿದ್ದಾರೆ.ರಕ್ತದೊತ್ತಡದ ಔಷಧಿಗಳೊಂದಿಗೆ ಚಿಕಿತ್ಸೆ ನೀಡಿದಾಗ ಹುಳುಗಳು ಹೆಚ್ಚು ಕಾಲ ಬದುಕುವುದು ಮತ್ತು ಆರೋಗ್ಯಕರವಾಗಿರುವುದು ಸಂಶೋಧಕರಿಗೆ ತಿಳಿದುಬಂದಿದೆ. ಇದರ ಜೊತೆಗೆ ಕೆನೊರ್ಹಬ್ಡಿಟಿಸ್ ಎಲೆಗನ್ಸ್ ಹುಳುಗಳನ್ನು ಈ ಸಂಶೋಧನೆಗೆ ಆಯ್ಕೆಮಾಡಲಾಗಿದೆ.  ಏಕೆಂದರೆ ಈ ಹುಳಗಳು ಮನುಷ್ಯರಿಗೆ ಹೋಲುವ ಜೀನ್ಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಇದಲ್ಲದೆ, ಈ ಔಷಧಿಯು ವಯಸ್ಸಾದ ವಿರೋಧಿ ಔಷಧದ ಸಾಮರ್ಥ್ಯವನ್ನು ಹೊಂದಿದೆ, ಏಕೆಂದರೆ ಇದನ್ನು ಮೌಖಿಕವಾಗಿ ತೆಗೆದುಕೊಳ್ಳಬಹುದು, ಇದನ್ನು ಈಗಾಗಲೇ ವ್ಯಾಪಕವಾಗಿ ಶಿಫಾರಸು ಮಾಡಲಾಗಿದೆ ಮತ್ತು ಅದರ ಅಡ್ಡಪರಿಣಾಮಗಳು ಅಪರೂಪ ಮತ್ತು ತುಲನಾತ್ಮಕವಾಗಿ ಸೌಮ್ಯವಾಗಿರುತ್ತವೆ. ವಯಸ್ಸಾಗುವುದನ್ನು ವಿಳಂಬಗೊಳಿಸುವ ಪ್ರಯೋಜನಗಳು ಸ್ವಲ್ಪಮಟ್ಟಿಗೆ ಸಹ ಅಪಾರವಾಗಿವೆ ಎಂದು ಹಲವಾರು ಮಾಧ್ಯಮಗಳು ಉಲ್ಲೇಖಿಸಿದಂತೆ ಮ್ಯಾಗಲ್ಹೇಸ್ ಹೇಳಿದರು. ಅಧ್ಯಯನದ ಆವಿಷ್ಕಾರಗಳನ್ನು ಈ ವರ್ಷದ ಆರಂಭದಲ್ಲಿ ಏಜಿಂಗ್ ಸೆಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಇನ್ನು  ಔಷಧಿ ಇಲ್ಲದೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸೇವಿಸಬೇಕಾದ ಅತ್ಯುತ್ತಮ ಆಹಾರಗಳೆಂದರೆ. .
ದ್ರಾಕ್ಷಿ, ಕಿತ್ತಳೆ ಮತ್ತು ನಿಂಬೆಹಣ್ಣು ಸೇರಿದಂತೆ ಸಿಟ್ರಸ್ ಹಣ್ಣುಗಳು ರಕ್ತದೊತ್ತಡ ಕಡಿಮೆಗೊಳಿಸುವ ಶಕ್ತಿಯನ್ನು ಹೊಂದಿವೆ. ಇವು ವಿಟಮಿನ್‌ಗಳು, ಖನಿಜಗಳು ಮತ್ತು ಸಸ್ಯ ಸಂಯುಕ್ತಗಳಿಂದ ತುಂಬಿವೆ. ಹೀಗಾಗಿ ಇವು ಅಧಿಕ ರಕ್ತದೊತ್ತಡದಂತಹ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಫ್ಯಾಟಿ ಮೀನುಗಳು ಒಮೆಗಾ-3 ಕೊಬ್ಬಿನ ಅತ್ಯುತ್ತಮ ಮೂಲವಾಗಿದೆ. ಇದು ಹೃದಯದ ಆರೋಗ್ಯಕ್ಕೆ ನೆರವಾಗುವ ಹಲವು ಪ್ರಯೋಜನಗಳನ್ನು ಹೊಂದಿದೆ. ಇವುಗಳು ಉರಿಯೂತ ಕಡಿಮೆ ಮಾಡುವ ಮೂಲಕ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೆಗ್ನೀಸಿಯಂ, ಪೊಟ್ಯಾಸಿಯಂ ಮತ್ತು ಅರ್ಜಿನೈನ್ ಸೇರಿದಂತೆ ರಕ್ತದೊತ್ತಡ ನಿಯಂತ್ರಣಕ್ಕೆ ಮುಖ್ಯವಾದ ಪೋಷಕಾಂಶಗಳ ಕೇಂದ್ರೀಕೃತ ಮೂಲ ಇದಾಗಿದೆ. ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಅಗತ್ಯವಾದ ಅಮೈನೋ ಆಮ್ಲವು, ರಕ್ತನಾಳಗಳ ವಿಶ್ರಾಂತಿ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಅವಶ್ಯಕವಾಗಿದೆ. ಅಧಿಕ ರಕ್ತದೊತ್ತಡದಂತಹ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಿರುವ ಬೆರ್ರಿಗಳು, ವಿವಿಧ ಪ್ರಭಾವಶಾಲಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಕ್ಯಾರೆಟ್‌ಗಳು ಅನೇಕ ಜನರ ಆಹಾರದಲ್ಲಿ ದಿನನಿತ್ಯದ ಸಸ್ಯಾಹಾರಿ ಆಹಾರವಾಗಿದೆ. ಕ್ಲೋರೊಜೆನಿಕ್, ಪಿ-ಕೌಮರಿಕ್ ಮತ್ತು ಕೆಫೀಕ್ ಆಮ್ಲಗಳಂತಹ ಫೀನಾಲಿಕ್ ಸಂಯುಕ್ತಗಳಿಂದ ಅಧಿಕವಾಗಿರುವ ಕ್ಯಾರೆಟ್, ರಕ್ತನಾಳಗಳಿಗೆ ವಿಶ್ರಾಂತಿ ನೀಡಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು