News Karnataka Kannada
Tuesday, April 23 2024
Cricket
ರಾಮನಗರ

ರಾಮನಗರ: ಅನ್ಯಾಯಕಾರಿ ಬ್ರಹ್ಮ ಹಾಡನ್ನು ತಾಯಿಂದ ಕಲಿತದ್ದು- ಮಹದೇವಸ್ವಾಮಿ

Ramanagara: I learnt the song 'Unjust Brahma' from my mother- Mahadevaswamy
Photo Credit : By Author

ರಾಮನಗರ: ನನ್ನ ತಾಯಿ ಹೇಳಿಕೊಟ್ಟ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ? ಈ ಹಾಡನ್ನು ಲಕ್ಷಾಂತರ ಜನರು ಕೇಳುತ್ತಿದ್ದಾರೆ. ಈ ಹಾಡನ್ನು ಯಾರೋ ಬರೆದಿರುವುದಲ್ಲ. ಇದು ಜಾನಪದ ಹಾಡಾಗಿದ್ದು, ನನ್ನ ತಾಯಿ, ಗುರುಗಳ ಬಾಯಿಂದ ಕೇಳಿ ನಾನು ಹಾಡಿದ್ದೇನೆ. ಈಗ ಹಾಡು, ದೇಶ ವಿದೇಶದಲ್ಲೂ ವೈರಲ್ ಆಗ್ತಾ ಇದೆ ಎಂದು ಗಾಯಕ ಮಳವಳ್ಳಿ ಮಹದೇವಸ್ವಾಮಿ ಹೇಳಿದರು.

ತಾಲ್ಲೂಕಿನ ಕೃಷ್ಣಾಪುರದೊಡ್ಡಿ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತಿಂಗಳ ಕಲಾ ಬೆಳಕು ಕಾರ್ಯಕ್ರಮದಲ್ಲಿ ಕರುನಾಡ ಜಾನಪದ ಜಂಗಮ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಮದುವೆ ಆಗದವರು, ಹೆಣ್ಣು ಸಿಗದ ಗಂಡು ಮಕ್ಕಳಿಗೆ ಸನ್ಯಾಸಿ ಹಾಡೊಂದನ್ನು ಬಳಸಿ ತಮಾಷೆ ಮಾಡುತ್ತಿದ್ದಾರೆ. ಈ ಹಾಡು ವೈರಲ್ ಆದ ಬಳಿಕ ನಿರ್ಮಾಪಕರೊಬ್ಬರು ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ ಎಂದರು.

ಮನೆಯಲ್ಲಿ ಹಿಟ್ಟಿಲ್ಲದ ಹೊತ್ತಲ್ಲಿ ಜನಪದ ಹಾಡು ಕಲಿತುಕೊಂಡು ಬಹಳಷ್ಟು ಕಷ್ಟಪಟ್ಟ ಮೇಲೆ ನಾನು ಈ ಸ್ಥಾನಕ್ಕೆ ಬರಲು ಜನಪದವೇ ಕಾರಣವಾಯಿತು. ಗ್ರಾಮೀಣ ಭಾಗದಲ್ಲಿ ಜನಪದ ಸಾಹಿತ್ಯ ಉಳಿಯಬೇಕು. ಜನಪದದಲ್ಲಿ ಹಲವು ಗಾದೆ ಮಾತುಗಳು ಲೋಕರೂಢಿಯಲ್ಲಿವೆ. ಅವುಗಳ ಬಗ್ಗೆ ವಿದ್ಯಾರ್ಥಿಗಳು ಗಮನಿಸಬೇಕು. ಜನಪದವು ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು.

ವಿದ್ಯಾರ್ಥಿಗಳು ತಮ್ಮ ತಂದೆ, ತಾಯಂದಿರ ಮಾತುಗಳನ್ನು ಆಲಿಸಿ ಅವರ ಅಣತಿಯಂತೆ ನಡೆಯಬೇಕು. ಕೋಲಾಟ, ತಮಟೆ, ನಗಾರಿ, ಕಂಸಾಳೆ ಸೇರಿದಂತೆ ಅದೆಷ್ಟೋ ಕಲೆಗಳಿವೆ, ಅವುಗಳನ್ನು ಶ್ರದ್ಧೆಯಿಂದ ಕಲಿತುಕೊಂಡರೆ ನಿಮ್ಮ ಭವಿಷ್ಯ ಉಜ್ವಲಗೊಳ್ಳಲು ಸಹಾಯವಾಗುತ್ತದೆ ಎಂದರು. ಓದಿದವರಿಗೆಲ್ಲಾ ಕೆಲಸ ಸಿಗುವುದಿಲ್ಲ ಎಂಬುವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಕಾಯಕವೇ ಕೈಲಾಸ ಎಂದ ಬಸವಣ್ಣನವರ ನುಡಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಸಾರ್ಥಕವಾಗಲಿದೆ ಎಂದರು.

ಈ ಹಿಂದೆ ಸಿನಿಮಾದಲ್ಲಿ ಹಾಡುಗಳಿಗಾಗಿ ಬರೆಯುತ್ತಿದ್ದ ಸಾಹಿತ್ಯವು ಎಲ್ಲರ ಮನೆ ಹಾಗೂ ಮನಸ್ಸು ಮುಟ್ಟುತ್ತಿತ್ತು. ಈಗಿನ ಸಾಹಿತ್ಯವೇ ಅರ್ಥವಾಗುವುದಿಲ್ಲ ಅದರ ಬಗ್ಗೆ ಆಲೋಚನೆ ಬಿಟ್ಟು, ಉತ್ತಮ ಸಾಹಿತ್ಯ ಕಡೆಗೆ ಗಮನಹರಿಸಿ, ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಾಂತಲಾ ಚಾರಿಟೇಬಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್ ಮಾತನಾಡಿ, ಗಾಯನದ ಮೂಲಕ ಮಳವಳ್ಳಿ ಮಹದೇವಸ್ವಾಮಿ ಅವರು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ನೈಜ ಕಲಾವಿದರ ಸಾಧನೆಯನ್ನು ಪಠ್ಯಪುಸ್ತಕಕ್ಕೆ ಅಳವಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಗೋಪಾಲಗೌಡ, ಸಾಹಿತಿ ಸುಮಂಗಲಾ ಸಿದ್ದರಾಜು, ಸಾಹಿತಿ ರವಿಕುಮಾರ್ ಕುಮಾರನಪುರ, ರಂಗ ನಿರ್ದೇಶಕ ಎಂ.ಸಿ. ನಾಗರಾಜ್, ಕಲಾವಿದರಾದ ಕಾವ್ಯರಾವ್, ಚಿತ್ರರಾವ್, ಗಾಯಕ ಮಹದೇವಯ್ಯ, ಶಿಕ್ಷಕ ರಾಜಶೇಖರ್ ಮತ್ತಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು