News Karnataka Kannada
Saturday, May 04 2024
ಆರೋಗ್ಯ

ಮದುಮೇಹಿಗಳಿಗೆ ಉತ್ತಮ ಆಹಾರ ಸಲಹೆಗಳು

Untitled 1
Photo Credit :

ಈಗಿನ ಸಮಾಜದಲ್ಲಿ ನಮ್ಮ ಆಹಾರ ಮತ್ತು ಜೀವ ಶೈಲಿಗಳು ಮದುಮೇಹಕ್ಕೆ ಮುಖ್ಯ ಕಾರಣ ಎಂದರೂ ತಪ್ಪಾಗಲಾರದು. ದೇಹಕ್ಕೆ ಯಾವುದೇ ರೀತಿಯ ಚಲನೆಗಳಿಲ್ಲದಿರುವುದು, ಕೂತಲ್ಲಿಯೇ ಕೆಲಸ ಮಾಡುವುದು, ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸುವುದು, ಜಂಕ್‍ಫುಡ್‍ಗಳನ್ನು ಸೇವಿಸುವುದರಿಂದ ಮದುಮೇಹವನ್ನು ನಾವೇ ಬರಿಸಿಕೊಳ್ಳುವಂತೆ ನಮ್ಮ ಜೀವನ ಶೈಲಿಯು ಬದಲಾಗುತ್ತಿದೆ.

ಮದುಮೇಹವನ್ನು ಎರಡು ವಿಧಗಳಾಗಿ ವಿಂಗಡಿಸಬಹುದಾಗಿದೆ. ಮೊದಲನೆ ವಿಧದ ಮದುಮೇಹ ಖಾಯಿಲೆಯಲ್ಲಿ ಇನ್ಸುಲಿನ್ ಉತ್ಪತ್ತಿ ಕಡಿಮೆ, ಈ ಮದುಮೇಹ ಖಾಯಿಲೆ ಹೆಚ್ಚಾಗಿ ಸಣ್ಣ ವಯಸ್ಸಿನವರಲ್ಲಿ ಕಂಡುಬರುತ್ತದೆ. ಎರಡನೇ ವಿಧದ ಮದುಮೇಹ ಖಾಯಿಲೆ ಒಂದು ನಿರ್ಧಿಷ್ಟ ವಯಸ್ಸು ದಾಟಿದ ಮೇಲೆ ಪ್ರಾರಂಭವಾಗುತ್ತದೆ. ಇಲ್ಲಿ ಇನ್ಸುಲಿನ್ ಉತ್ಪತ್ತಿಯಾಗುತ್ತದೆ, ಆದರೆನಮ್ಮ ದೇಹದ ಜೀವಕೋಶಗಳು ಇನ್ಸುಲಿನ್‍ಅನ್ನು ತೆಗೆದುಕೊಳ್ಳುವಷ್ಟು ಸಧೃಢವಾಗಿರುವುದಿಲ್ಲ.

ಈ ಮದುಮೇಹ ಖಾಯಿಲೆ ಇರುವವರು ಕೇವಲ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವಲ್ಲಿ ಮಾತ್ರ ಹೆಚ್ಚಿನ ಗಮನವನ್ನು ನೀಡುತ್ತೇವೆ. ಇಂತಹ ಸಂದರ್ಭದಲ್ಲಿ ದೇಹದ ಜೀರ್ಣಕ್ರಿಯೆ ಕುಂದುತ್ತದೆ, ನಿಶ್ಯಕ್ತಿ, ನಿದ್ದೆ ಹೆಚ್ಚಾಗಿ ಬರುವುದು, ಕಣ್ಣು ಉರಿ, ಕೈಕಾಲುಗಳಲ್ಲಿ ಉರಿ, ಹೆಚ್ಚಾಗಿ ಬಾಯಾರಿಕೆಯಾಗುವುದು, ಪದೇ ಪದೇ ಮೂತ್ರ ಹೋಗುವುದು, ಈ ಎಲ್ಲಾ ಲಕ್ಷಣಗಳನ್ನು ಕಡಿಮೆ ಮಾಡುವುದರ ಜೊತೆಗೆ ಮದುಮೇಹದ ಖಾಯಿಲೆಯನ್ನು ಕೂಡ ಸಮ ಪ್ರಮಾಣದಲ್ಲಿ ಸಮದೂಗಿಸಿಕೊಳ್ಳಬಹುದು. ಎಂದು, ಕಾಕುಂಜೆ ಆಯುರ್ವೇದಿಕ್ ವೆಲ್ ನೆಸ್ ಕ್ಲಿನಿಕ್ ವೈದ್ಯೆ ಡಾ. ಅನುರಾಧ ಹೆಳುತ್ತಾರೆ.

ನಾವು ಸೇವಿಸುವ ದಿನ ನಿತ್ಯದ ಆಹಾದಲ್ಲಿ ಈ ಮದುಮೇಹವನ್ನು ಹತೋಟಿಗೆ ತೆಗೆದುಕೊಳ್ಳಬಹುದು. ನಮ್ಮ ಆಹಾರದಲ್ಲಿ ಹೆಚ್ಚಾಗಿ ಹಾಲಿನ ಉತ್ಪನ್ನಗಳನ್ನು ಬಳಸುವುದನ್ನು ಕಡಿಮೆ ಮಾಡಿಕೊಳ್ಳಬೇಕು, ಹಣ್ಣುಗಳನ್ನು ಹೆಚ್ಚಿನಪ್ರಮಾಣದಲ್ಲಿ ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

ನಾವು ತಿನ್ನುವ ಅನ್ನ, ಬ್ರೆಡ್, ದೋಸೆ ಇತ್ಯಾದಿಗಳಲ್ಲಿಯೂ ಸಕ್ಕರೆಯ ಅಂಶಗಳಿರುವುದರಿಂದ ಅದದ ಬದಲಾಗಿ ಕಾಂಪ್ಲೆಕ್ಸ್ ಕಾಬ್ರೋಹೈಡ್ರೇಟ್ಸ್‍ಗಳನ್ನು ಹೆಚ್ಚಾಗಿ ಬಳಸಿಕೊಳ್ಳುವುದು ಅವುಗಳು ರಾಗಿ, ಜೋಳ, ಮಿಲೆಟ್ಸ್, ಓಟ್ಸ್ ಗಳನ್ನು ಸೇವಿಸುವುದರ ಮೂಲಕ ಮದುಮೇಹವನ್ನು ಕಡಿಮೆ ಮಾಡಿಕೊಳ್ಳಬಹುದು. ಕೇವಲ ಕಾಂಪ್ಲೆಕ್ಸ್ ಕಾಬ್ರೋಹೈಡ್ರೇಟ್ಸ್‍ಗಳನ್ನು ಸೇವಿಸುವುದರಿಂದಲೂ ದೇಹದಲ್ಲಿ ವಾತದ ಅಂಶವನ್ನು ಜಾಸ್ತಿ ಮಾಡುತ್ತದೆ, ಇದರಿಂದ ಎರಡನ್ನು ಸಮ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಪದೇ ಪದೇ ಆಹಾರವನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಹೆಚ್ಚಾಗುತ್ತಾ ಹೋಗುತ್ತದೆ. ಸಾಧ್ಯವಾದಷ್ಟು ಈ ರೀತಿಯ ಆಹಾರ ಕ್ರಮಗಳನ್ನು ನಿಲ್ಲಿಸುವುದು ಉತ್ತಮ. ದಿನದಲ್ಲಿ 3 ಸಲ ಉತ್ತಮವಾದ ಫ್ಯಾಟ್, ಪ್ರೋಟಿನ್‍ಗಳನ್ನು ಸೇರಿಸಿಕೊಳ್ಳುವುದರಿಂದ ಶುಗರ್ ಮಟ್ಟವನ್ನು ಸರಿದೂಗಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು