ಬೊಜ್ಜು ಎಂಬುದು ಇಂದು ಆರೋಗ್ಯ ಸಮಸ್ಯೆಯೂ ಹೌದು- ಸೌಂದರ್ಯ ಸಮಸ್ಯೆಯೂ ಹೌದು. ಹಾಗಾಗಿಯೇ ದಿಢೀರ್ ತೂಕ ಇಳಿಸುವ ನಿಟ್ಟಿನಲ್ಲಿ ಹಲವು ಡಯಟ್ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ದಿನಕ್ಕೊಂದೇ ದ್ರಾಕ್ಷಿ ತಿನ್ನುವ ಅತಿರೇಕದ ಡಯಟ್ಗಳಿಂದ ಹಿಡಿದು ತರಕಾರಿ- ಹಣ್ಣು ಮಾತ್ರ ಸೇವಿಸುವ ಡಯಟ್ಗಳು ಇಂದು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ.
ಈ ಡಯಟ್ಗಳ ಅವಧಿ ಮುಗಿದೊಡನೆಯೇ ತಿನ್ನುವ ಆಸೆ ಇವರಲ್ಲಿ ಎಷ್ಟು ಮಿತಿಮೀರುತ್ತದೆಯೆಂದರೆ ಹೋದ ತೂಕ ಅದೇ ವೇಗದಲ್ಲಿ ವಾಪಾಸಾಗುತ್ತದೆ. ಜೊತೆಗೆ ಇನ್ನೆರಡು ಕೆಜಿ ತೂಕ ನಮ್ಮ ದೇಹಕ್ಕೆ ಹೆಚ್ಚುವರಿಯಾಗಿ ಸೇರಿರುತ್ತದೆ. ಹಾಗಾಗಿ ದೇಹವನ್ನು ಸಂಪೂರ್ಣ ಉಪವಾಸ ಕೆಡವದೆ, ಬೇಕಷ್ಟೇ ಆಹಾರ ತೆಗೆದುಕೊಳ್ಳುವುದರ ಮೂಲಕ ನಿಧಾನವಾಗಿ ತಿಂಗಳಿಗೆ 2-3 ಕಿ.ಗ್ರಾಂನಷ್ಟು ತೂಕ ಇಳಿಸಿಕೊಳ್ಳುವುದು ಸೂಕ್ತ. ಇದಕ್ಕೆ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿಗಳು ಆಹಾರ ರೂಪದಲ್ಲಿ ಹೋಗದಂತೆ ನೋಡಿಕೊಳ್ಳುವುದು ಅವಶ್ಯಕ. ಪ್ರತಿನಿತ್ಯದ ಆಹಾರ ಸೇವನೆಯಲ್ಲಿ ಸುಮಾರು 500 ಕ್ಯಾಲೊರಿಗಳಷ್ಟನ್ನು ಕಡಿಮೆಗೊಳಿಸಿದರೆ ಸಾಕು.
ನಾವು ತಿಂಗಳಿಗೆರಡು ಕಿಲೋ ತೂಕ ಕಳೆದುಕೊಳ್ಳುವುದು ಖಚಿತ. ಇದಕ್ಕೆ ಕ್ಯಾಲೊರಿ ಅರಿವು ಅತಿ ಮುಖ್ಯ. ನಾವು ತಿನ್ನುವ ಆಹಾರದಲ್ಲಿ ಎಷ್ಟೆಟ್ಟು ಕ್ಯಾಲೊರಿಗಳಿವೆ ಎಂಬುದನ್ನು ಅರಿತರೆ ಅದಕ್ಕೆ ತಕ್ಕಂತೆ ಡಯಟ್ ಚಾರ್ಟ್ ರೂಪಿಸಿಕೊಳ್ಳಬಹುದಾಗಿದೆ.