News Karnataka Kannada
Sunday, May 12 2024
ಆರೋಗ್ಯ

ಕೂದಲಿಗೆ ಶಕ್ತಿ ನೀಡುವ ಕರಿಬೇವು

Photo Credit :

ಕೂದಲಿಗೆ ಶಕ್ತಿ ನೀಡುವ ಕರಿಬೇವು

ನಾವು ನಿತ್ಯ ಉಪಯೋಗಿಸುವ ಕರಿಬೇವು ಆರೋಗ್ಯಕ್ಕೆ ಉತ್ತಮವಾಗಿದೆ. ಅಷ್ಟೇ ಅಲ್ಲ ಇದನ್ನು ಬಳಸುವುದರಿಂದ ಕೂದಲಿನ ಪೋಷಣೆಯೂ ಸಾಧ್ಯವಾಗುತ್ತದೆ.
ನನ್ನ ಕೂದಲು ಸೊಂಪಾಗಿ, ಕಡು ಕಪ್ಪಾಗಿ ಸದಾ ಹೊಳೆಯುವಂತೆ ಇಲ್ಲ ಎಂದು ತಲೆಕೆಡಿಸಿಕೊಳ್ಳುವವರು ಕರಿಬೇವು ಎಲೆಯನ್ನು ಕೆಲವೊಂದು ವಿಧಾನದಲ್ಲಿ ಬಳಸಿದ್ದೇ ಆದರೆ ಪ್ರಯೋಜನ ಪಡೆಯಬಹುದಾಗಿದೆ.

ನಿತ್ಯ ಅಡುಗೆಯಲ್ಲಿ ಉಪಯೋಗಿಸುವ ಕರಿಬೇವಿನ ಎಲೆಯಲ್ಲಿ ಕೂದಲಿಗೆ ಶಕ್ತಿಯನ್ನು ನೀಡುವ ಗುಣವಿದೆ ಎಂದರೆ ಹೆಚ್ಚಿನವರು ನಂಬಲಾರರು ಆದರೆ ನೈಸಗಿಕವಾಗಿ ಚಿಕಿತ್ಸೆ ಮಾಡುವುದರಿಂದ ಯಾವುದೇ ತೊಂದರೆಯಾಗಲಾರದು.

ಎಲೆಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ಮೊಸರು ಸೇರಿಸಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ಅದಕ್ಕೆ ಸ್ವಲ್ಪ ನಿಂಬೆರಸ ಹಾಕಬೇಕು ಬಳಿಕ ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಬೇಕು. ಸುಮಾರು 20 ನಿಮಿಷಗಳು ಕಳೆದ ಬಳಿಕ ಬೆಚ್ಚಗಿನ ನೀರಿನಲ್ಲಿ ಕೂದಲನ್ನು  ತೊಳೆಯಬೇಕು. ತಿಂಗಳಿಗೆ ಕನಿಷ್ಠ ಮೂರು ಬಾರಿ ಮಾಡಿದರೂ ಸಾಕು ಕೂದಲಿಗೆ ಒಂದಷ್ಟು ಶಕ್ತಿ ಸಿಗುವುದಲ್ಲದೆ ಬದಲಾವಣೆ ಕಂಡು ಬರುತ್ತದೆ.

ಕರಿಬೇವಿನ ಎಲೆ ಜತೆಗೆ ದಾಸವಾಳ ಸೊಪ್ಪು, ದಾಳಿಂಬೆ ಚಿಗುರು ನೆನೆಸಿಟ್ಟ ಮೆಂತ್ಯಕಾಳನ್ನು ಹಾಕಿ ಚೆನ್ನಾಗಿ ರುಬ್ಬಿ ತಲೆ ಸೇರಿದಂತೆ ಪೂತರ್ಿ ಕೂದಲಿಗೆ ಹಚ್ಚಿ ಸುಮಾರು ಎರಡು ಗಂಟೆ ಬಿಟ್ಟು ತೊಳೆಯಬೇಕು. ಈ ಅಭ್ಯಾಸವನ್ನು ವಾರಕ್ಕೊಮ್ಮೆ ಸಮಯ ಸಿಕ್ಕಾಗ ಮಾಡುತ್ತಾ ಬಂದರೆ ಕೂದಲಿನ ಬಣ್ಣವನ್ನು ಕಾಪಾಡಿಕೊಳ್ಳುವುದರ ಜತೆಗೆ ಕಾಡುವ ಹೊಟ್ಟಿನ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ.

ಕೊಬ್ಬರಿ ಎಣ್ಣೆಗೆ ಕರಿಬೇವಿನ ಸೊಪ್ಪು ಹಾಕಿ ತಯಾರು ಮಾಡಿದ ಎಣ್ಣೆಯನ್ನು ವಾರಕ್ಕೊಮ್ಮೆ ಕೂದಲು ಹಾಗೂ ಕೂದಲಿನ ಬುಡಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡುತ್ತಾ ಬಂದರೆ ಕೂದಲೂ ಕಪ್ಪಾಗಿ, ಸೊಂಪಾಗಿ ಹಾಗೂ ತಲೆಗೂದಲು ಉದುರುವಿಕೆ ಕಡಿಮೆಯಾಗುತ್ತದೆ.

ಅರ್ಧ ಲೀಟರ್ ಕೊಬ್ಬರಿ ಎಣ್ಣೆಗೆ, ಒಂದು ಬಟ್ಟಲು ಹರಳೆಣ್ಣೆಯನ್ನು ಸೇರಿಸಿ ಒಣಗಿಸಿದ ಕರಿಬೇವಿನ ಎಲೆಗಳು ಹಾಗೂ ಮೆಂತ್ಯ ಕಾಳುಗಳನ್ನು ರುಬ್ಬಿಕೊಂಡು, ಎಣ್ಣೆಯ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕುದಿಸಿ ಆರಿಸಿ ಅದನ್ನು ಸೋಸಿಟ್ಟುಕೊಂಡು ಕೂದಲಿಗೆ ಹಚ್ಚುವುದರಿಂದಲೂ ಕೂದಲು ಪುಷ್ಠಿಯಾಗಿ ಉದುರುವುದು ಕಡಿಮೆಯಾಗುತ್ತದೆ.

ಕರಿಬೇವಿನಲ್ಲಿ ಹೆಚ್ಚಾಗಿ ಕಬ್ಬಿಣದ ಅಂಶಗಳು, ಪೋಷಕಾಂಶಗಳು, ವಿಟಮಿನ್ ಬಿ ಅಧಿಕವಾಗಿರುತ್ತದೆ. ಹಾಗಾಗಿ ಆಹಾರ ಪದಾರ್ಥದಲ್ಲಿ ಹಸಿ ಹಸಿಯಾದ ಕರಿಬೇವಿನ  ಸೇವನೆ ಮಾಡಿದರೆ ಕೂದಲನ್ನು ಹೆಚ್ಚು ಶಕ್ತಿಶಾಲಿಗೊಳಿಸಬಹುದು ಹಾಗೂ ಹೊಸ ಕೂದಲಿನ ಹುಟ್ಟುವಿಕೆಗೂ ಇದು ಸಹಾಯವಾಗುತ್ತದೆ.

ಕರಿಬೇವು ಎಲೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಹಾಗೂ ಅಮಿನೋಆಲ್ಮಗಳು  ಹೆಚ್ಚಾಗಿರುವುದರಿಂದ ಕೂದಲಿಗೆ ಹೆಚ್ಚು ಸತ್ವ ಒದಗಿಸುತ್ತದೆ. ಜತೆಗೆ ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತದೆ. ಇದರಿಂದ ಅನಗತ್ಯವಾಗಿ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಎಲೆಗಳನ್ನು ಆಹಾರದಲ್ಲಿ ಸೇವಿಸುವುದರಿಂದ ಜೀರ್ಣ ಕ್ರಿಯೆಯನ್ನು ಸಮತೋಲನಗೊಳಿಸುತ್ತದೆ. ಒಟ್ಟಾರೆ ಕರಿಬೇವು ಆರೋಗ್ಯಕ್ಕೆ ಉತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು