News Karnataka Kannada
Monday, April 29 2024
ಶಿಕ್ಷಣ

ಸಿಎಫ್ಎಎಲ್ ನ ಅತ್ಯುತ್ತಮ ಸಾಧನೆ: 24 ವಿದ್ಯಾರ್ಥಿಗಳಿಗೆ ಅತ್ಯುತ್ತಮ ರ‍್ಯಾಂಕ್

CFAL Results
Photo Credit : News Kannada

ಮಂಗಳೂರು: ಸಿಎಫ್‍ಎಎಲ್ (ಸೆಂಟರ್ ಫಾರ್ ಅಡ್ವಾನ್ನ್ಡ್ ಲರ್ನಿಂಗ್ ) ಜೆಇಇ ಅಡ್ವಾನ್ನ್ಡ್ 2023 ಪರೀಕ್ಷೆಯಲ್ಲಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಅದರ 24 ವಿದ್ಯಾರ್ಥಿಗಳನ್ನು ಅತ್ಯುತ್ತಮ ರ‍್ಯಾಂಕ್ ಗಳನ್ನು ಗಳಿಸಿ ಸಾಧನೆ ಗೈದಿದ್ದಾರೆ.

ಸಾಧಕರಲ್ಲಿ ಕೇತನ್ ಸುಮನ್ ಅವರು 331 ರ ಒಬಿಸಿ ವರ್ಗದ ರ‍್ಯಾಂಕ್ನ್ನು ಮತ್ತು 1923ರ ಅಖಿಲ ಭಾರತ ರ‍್ಯಾಂಕ್ನ್ನು(ಎಐ ಆರ್) ಪಡೆದುಕೊಂಡಿದ್ದಾರೆ. ಅಫ್ಘಾನ್ ಅರ್ಷದ್ 753 ಮತ್ತು ಎಐಆರ್ 3982 ರ‍್ಯಾಂಕ್ ಮೂಲಕ ಅಸಾಧಾರಣ ಕಾರ್ಯಕ್ಷಮತೆಯಿಂದ ಹೊರಹೊಮ್ಮಿದ್ದಾರೆ. ಇನ್ನು ಸಿಎಫ್‍ಎಎಲ್ ಇತರ ಯಶಸ್ವಿ ವಿದ್ಯಾರ್ಥಿಗಳೆಂದರೆ ಸಮಂತ್ ಮಾರ್ಟಿಸ್(ಎಐ ಆರ್ 2500), ಅನನ್ಯ ಎ ಕೆ(ಎಐಆರ್ 3087), ಶಶಾಂಕ್ ಎಮ್ ಎನ್ (ಎಐಆರ್ 3468), ಅಂಕಿತ್ ಕಿಣಿ(ಎಐಆರ್ 3753), ಅಚಿಂತ್ಯ ರಾಘವನ್ (ಎಐ ಆರ್ 5541), ವರುಣ್ ಆಚಾರ್ಯ ಕೆ ವಿ( ಎಐಆರ್ 6089), ಆದಿತ್ಯ ರವೀಂದ್ರ( ಎಐ ಆರ್ 7495), ವಸಂತ ಪ್ರಭು ಕುಂಬ್ಳೆ( ಎಐ ಆರ್ 8466), ಪ್ರಮಥ ರಾವ್(ಎಐ ಆರ್ 9793), ಅನನ್ಯ ಬಾಳಿಕೆ (ಎಐ ಆರ್9859), ಆರ್.ರಿಕಿ ರೋಜರ್(ಎಐ ಆರ್ 10516), ಶಿಶಿರ ಅಗ್ಗಿತ್ತಾಯ(ಎಐ ಆರ್ 12821), ಮೇಧಾಂಶ ಶೆಟ್ಟಿ (ಎಐ ಆರ್ 13090), ನಿನಾದ್ ಶ್ರೀ ನಿವಾಸ್ ರಾವ್( ಎಐ ಆರ್13911), ಧ್ರುವ ರಮೇಶ್ ಜೋಷಿ( ಎಐ ಆರ್ 14172), ಹರ್ಷಿತ್ ಕೃಷ್ಣ ಆರ್‍ಎಐ ಆರ್ 14897), ಜೈತೇಗ್ ಸಿಂಗ್ ದಿಲ್(ಎಐ ಆರ್ 17184), ಅಖಿಲ್ ಮೆನನ್ (ಎಐ ಆರ್18837), ಯಶಸ್ವಿನಿ ಕೆ( ಎಐ ಆರ್ 19999), ರಜತ್ ಜಿ ಎ( ಎಐ ಆರ್21189), ಅದ್ನಾನ್ ದಾವೂದ್ (ಎಐ ಆರ್ 23148), ಮತ್ತು ವಿಜೀತ್ ಜೆ ಪೂಜಾರಿ( ಎಐ ಆರ್ 23342) ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಸಿ ಎಫ್ ಎ ಎಲ್ ಇತ್ತೀಚೆಗೆ ನೀಟ್ ಮತ್ತು ಜೆಇಇ ರಿಪೀಟರ್ ಲಾಂಗ್ ಟರ್ಮ್ ಕಾರ್ಯಕ್ರಮವನ್ನು ಕೈಗೊಂಡಿದೆ. ಜೆಇಇ ಮತ್ತು ನೀಟ್ ಪರೀಕ್ಷೆಗಳಲ್ಲಿ ಸವಾಲುಗಳನ್ನು ಎದುರಿಸಿದ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ, ಅವರು ಬಯಸಿದ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶವನ್ನು ಪಡೆಯಲು ಕೇಂದ್ರಿಕೃತ ಒಂದು ವರ್ಷದ ತಯಾರಿ ಅವಧಿಯನ್ನು ನೀಡುತ್ತದೆ. ಸಿ ಎಫ್ ಎ ಎಲ್ ನ ಕಾರ್ಯಕ್ರಮ ಸಂಯೋಜಕ ವಿಜಯ್ ಮೊರಾಸ್ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು