News Karnataka Kannada
Monday, May 06 2024
ಶಿಕ್ಷಣ

ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ವಚನ ದಿನ’ ಆಚರಣೆ

Dr. Nitte 'Vachana Diwas' celebrated at Shankara Adyanthaya Memorial English Medium School
Photo Credit : News Kannada

ನಿಟ್ಟೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು (ರಿ) ಕಾರ್ಕಳ ತಾಲೂಕು ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ‘ವಚನ ದಿನ’ ಕಾರ್ಯಕ್ರಮವನ್ನು ಸೆ.೧೧ ರಂದು ಮಧ್ಯಾಹ್ನ 02.30 ಕ್ಕೆ ಹಮ್ಮಿಕೊಳ್ಳಲಾಯಿತು.

ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಪೂಜ್ಯರ ಜಯಂತಿ (29-08-2023) ಪ್ರಯುಕ್ತ ಡಾ. ಎನ್.ಎಸ್.ಎ.ಎಂ ಕನ್ನಡ ಮಾಧ್ಯಮ ಹೈಯರ್ ಪ್ರೈಮರಿ ಸ್ಕೂಲ್, ನಿಟ್ಟೆಯಲ್ಲಿ ಮಕ್ಕಳಿಗೆ ವಚನಗಳಲ್ಲಿ ನಿಸರ್ಗದ ಪರಿಕಲ್ಪನೆ – ವಚನ ಸ್ಪರ್ಧೆ – ಗಾಯನ ಮತ್ತು ಅದರ ವಿಶ್ಲೇಷಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸುಮಾರು 25 ಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಕ್ಯಾಂಪಸ್‌ ಮೈಂಟೆನೆನ್ಸ್ & ಡೆವಲಪ್ಮೆಂಟ್ ನಿರ್ದೇಶಕ ಎ.ಯೋಗೀಶ್ ಹೆಗ್ಡೆ ವಹಿಸಿದ್ದರು. ಅವರು ನೆರೆದಿದ್ದ ಮಕ್ಕಳಿಗೆ, ಜೆ ಸ್ ಸ್ ವಿದ್ಯಾ ಸಂಸ್ಥೆಯನ್ನು ಬೆಳೆಸುವಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಪಾತ್ರ ಹಾಗು ಬಸವಣ್ಣನವರ ವಚನಗಳ ಹಿರಿಮೆಯ ಬಗ್ಗೆ ಅರಿವು ನೀಡಿದರು.

ಶಾಲೆಯ ಪ್ರಾಂಶುಪಾಲೆ ಶ್ರೀಮತಿ ರಾಧಾ ಪ್ರಭು ಅವರು ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಬಹಳ ಅಗತ್ಯ ಎಂದು ಹೇಳಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ. ಶಂಕರ್ ಬಿ ಬಿ ಅವರು ಗೌರವ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ಶುಭ ಕೋರಿದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಹಾಗೂ ನಿಟ್ಟೆ ಕ್ಯಾಂಪಸ್ ಮಹಿಳಾ ಹಾಸ್ಟೆಲ್ಸ್ ನ ಚೀಫ್ ವಾರ್ಡನ್ ಡಾ. ವೀಣಾ ದೇವಿ ಶಾಸ್ತ್ರೀಮಠ ಇವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ – ಕಾರ್ಕಳ ತಾಲೂಕು ಅಧ್ಯಕ್ಷರು ಮತ್ತು ಕದಳಿ ಮಹಿಳಾ ವೇದಿಕೆ ಉಡುಪಿ ಜಿಲ್ಲೆಯ ಪ್ರಧಾನ ಅಧ್ಯಕ್ಷರಾಗಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ಅವರು ತಮ್ಮ ಪ್ರಸ್ತಾವನೆಯಲ್ಲಿ ಶರಣರ ವಚನಗಳ ಅದ್ರಶ್ಗಳನ್ನು ಜನರಲ್ಲಿ ಉಣಬಡಿಸಿ ಅರಿವಿನ ವ್ಯಾಪ್ತಿಯನ್ನು ಹೆಚ್ಚಿಸಿದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಪೂಜ್ಯರ ಮಹಾನ್ ಸಾಧನೆಗಳ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿ ನಿರೀಕ್ಷಾ ಅವರು ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು