News Karnataka Kannada
Sunday, April 21 2024
Cricket
ಕ್ರೈಮ್

ರೈಲು ಹಳಿಗಳಲ್ಲಿ ಪಟಾಕಿ ಸಿಡಿಸಿ ಯುವಕನ ಹುಚ್ಚಾಟ: ರೈಲ್ವೆ ಇಲಾಖೆ ಹೇಳಿದ್ದೇನು?

Young man bursts crackers on railway tracks: What did the Railways say?
Photo Credit : IANS

ನವದೆಹಲಿ: ಇತ್ತೀಚೆಗೆ ಯೂಟ್ಯೂಬರ್‌ಗಳು ಸೇರಿದಂತೆ ಸಾಮಾಜಿಕ ಮಾಧ್ಯಮದ ಸ್ಟಾರ್ಗಳು ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರ ವಿಚಿತ್ರ ವರ್ತನೆ ತೋರುವುದು ಸಾಮಾನ್ಯವಾಗಿದೆ. ಅದೇ ರೀತಿ ಯೂಟ್ಯೂಬರ್‌ ಒಬ್ಬ ಫುಲೇರಾ-ಅಜ್ಮೀರ್ ವಿಭಾಗದ ದಂತ್ರಾ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಗೂಂಡಾವರ್ತನೆ ತೋರಿದ್ದಾನೆ.

ರೈಲು ಹಳಿಗಳಲ್ಲಿ ಹಾನಿಯಾಗುವ ಯಾವುದೇ ಕೃತ್ಯ ನಡೆಸಬಾರದು ಎಂಬ ನಿಯಮವಿದ್ದರೂ ಅದನ್ನೆಲ್ಲ ಮರೆತು ಕೇವಲ ಪ್ರಚಾರಕ್ಕಾಗಿ ಯೂಟ್ಯೂಬರ್‌ ಇಂತಹ ಕೃತ್ಯ ನಡೆಸಿರುವುದು ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಟ್ರೈನ್ಸ್ ಆಫ್ ಇಂಡಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ರೈಲು ಹಳಿಗಳಲ್ಲಿ ಪಟಾಕಿ ಸಿಡಿಸಿರುವ ಯುವಕನ ಕುರಿತು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಈ ಕಿಡಿಗೇಡಿ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈಲ್ವೆ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು