ಪಣಜಿ: ಉತ್ತರ ಗೋವಾದಲ್ಲಿ ರಷ್ಯಾ ಪ್ರವಾಸಿ ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿ ಮೂವರು ಪ್ರವಾಸಿಗರು ಮೃತಪಟ್ಟಿದ್ದಾರೆ.
ನಾಸಿಕ್ ಮೂಲದ ಮಹೇಶ್ ಶರ್ಮಾ, ಹೈದರಾಬಾದ್ ನ ದಿಲೀಪ್ ಕುಮಾರ್, ಮನೋಜ್ ಕುಮಾರ್ ಮೃತಪಟ್ಟವರು. ರಷ್ಯಾದ ಪ್ರವಾಸಿ ಆಂಟನ್ ಬೈಚೋವ್ ಚಾಲನೆ ಮಾಡುತ್ತಿದ್ದ ಕಾರು ಪ್ರವಾಸಿಗರಿಗೆ ಡಿಕ್ಕಿಯಾಗಿ ನಂತರ ನಾಲೆಗೆ ಉರುಳಿದೆ. ಇದರಿಂದ ಮೂವರು ಕೂಡ ಸಾವನ್ನಪ್ಪಿದ್ದು , ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕ ಅತಿವೇಗದಿಂದ ಚಾಲನೆ ಮಾಡುತ್ತಿದ್ದರು. ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.