ಕ್ರೈಮ್

300 ರೂ. ಬೆಲೆಯ ಲಿಪ್ ಸ್ಟಿಕ್ ಗೆ 1 ಲಕ್ಷ ರೂ. ಕಳೆದುಕೊಂಡ ವೈದ್ಯೆ

ಮುಂಬೈ: ದೇಶದಲ್ಲಿ ದಿನೇ ದಿನೇ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಆನ್​​​ಲೈನ್​​​ ಖರೀದಿಯಲ್ಲಿ ಆಗುವ ಮೋಸಗಳು ಒಂದೆರೆಡಲ್ಲ, ಆನ್​​​ಲೈನ್​​​ ಮೂಲಕ ವಸ್ತುಗಳನ್ನು ಖರೀದಿ ಮಾಡಿ ಮೋಸಕ್ಕೊಳಗಾಗುವುದು ಇದೀಗ ಸರ್ವೇ ಸಾಮಾನ್ಯವಾಗಿದೆ.

ಮುಂಬೈನಲ್ಲಿ ಇಂತಹದೇ ಒಂದು ಪ್ರಕರಣ ನಡೆದಿದೆ. ಮಹಿಳಾ ವೈದ್ಯರೊಬ್ಬರು ಆನ್​​​ಲೈನ್​​ನಲ್ಲಿ ಲಿಪ್ ಸ್ಟಿಕ್ ಆರ್ಡರ್​​​ ಮಾಡಿ ಮೋಸ ಹೋಗಿದ್ದಾರೆ. 1 ಲಕ್ಷ ರೂ. ಕೊಟ್ಟು ಒಂದು ಲಿಪ್ ಸ್ಟಿಕ್​​ನ್ನು ಆನ್​​​ಲೈನ್​​​​ನಲ್ಲಿ ಖರೀದಿ ಮಾಡಿದ್ದು ಆದರೆ  ಲಿಪ್ ಸ್ಟಿಕ್​​ನ ಮೂಲ ಬೆಲೆ 300 ರೂ. ಆಗಿದೆ.

ಮುಂಬೈನಲ್ಲಿ ವಾಸವರಿರುವ ವೈದ್ಯರು ನವೆಂಬರ್ 2 ರಂದು ಇ-ಕಾಮರ್ಸ್ ಪೋರ್ಟಲ್‌ನಲ್ಲಿ ಲಿಪ್‌ಸ್ಟಿಕ್‌ ಆರ್ಡರ್ ಮಾಡಿದ್ದರು. ಕೆಲವು ದಿನಗಳ ನಂತರ, ನಿಮ್ಮ ಲಿಪ್‌ಸ್ಟಿಕ್ ಅನ್ನು ತಲುಪಿಸಲಾಗಿದೆ ಎಂದು ವೈದ್ಯರಿಗೆ ಕೊರಿಯರ್ ಕಂಪನಿಯಿಂದ ಸಂದೇಶ ಬಂದಿತು. ಆದರೆ ಮಹಿಳೆಗೆ ಲಿಪ್ ಸ್ಟಿಕ್ ಸಿಗದ ಕಾರಣ ಕೊರಿಯರ್ ಕಂಪನಿಯನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ನಂತರ ನಮ್ಮ ಕಸ್ಟಮರ್ ಕೇರ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಕೊರಿಯರ್ ಕಂಪನಿ ಎಂದು ಹೇಳಿದ್ದಾರೆ.

ನಂತರ ವೈದ್ಯರಿಗೆ ಒಂದು ಫೋನ್​​ ಬರುತ್ತದೆ, ನಿಮ್ಮ ಆರ್ಡರ್​ನ್ನು ತಲುಪಿಸಲು 2 ಸಾವಿರ ನೀಡಬೇಕು ಎಂದು ಹೇಳಿದ್ದಾರೆ. ಆದರೆ ಇದಕ್ಕೆ ವೈದ್ಯೆ ನಿರಕಾರಿಸಿದ್ದಾರೆ. ನಂತರ ಒಂದು ವೆಬ್​​​ ಲಿಂಕ್​​​ ಬರುತ್ತದೆ. ಅದರಲ್ಲಿ ಬ್ಯಾಂಕ್​​​ ವಿವರಗಳನ್ನು ಕೇಳಲಾಗಿದೆ. ವೈದ್ಯೆ ಎಲ್ಲ ವಿವರಗಳನ್ನು ಭರ್ತಿ ಮಾಡಿದ್ದಾರೆ. ಆಕೆಗೆ ಒಂದು ಭಿಪ್ ಯುಪಿಐ ಲಿಂಕ್ ರಚಿಸುವ ಕುರಿತು ಸಂದೇಶ ಬಂದಿದೆ. ಇನ್ನು ಪಾರ್ಸೆಲ್​​​ ಬಗ್ಗೆ ಆಕೆ ಕರೆ ಮಾಡಿದವರಲ್ಲಿ ಕೇಳಿದಾಗ, ನಿಮ್ಮ ಪಾರ್ಸೆಲ್​​​ನ್ನು ತಕ್ಷಣದಲ್ಲಿ ಡೆಲಿವರಿ ಮಾಡಲಾಗುವುದು ಎಂದು ಹೇಳಿದ್ದಾರೆ.

ನವೆಂಬರ್​​ 9ರಂದು ವೈದ್ಯೆಯ ಖಾತೆಯಿಂದ ಮೊದಲು 95 ಸಾವಿರ ನಂತರ 5 ಸಾವಿರ, ಒಟ್ಟು ಒಂದ ಲಕ್ಷ ಡೆಬಿಟ್ ಆಗಿದೆ. ಇದರಿಂದ ಕಕ್ಕಾಬಿಕ್ಕಿಯಾದ ಮಹಿಳೆ ತಕ್ಷಣ ಹತ್ತಿರದ ಪೊಲೀಸ್​​​ ಠಾಣೆಗೆ ದೂರು ನೀಡಿದ್ದಾರೆ. ವೈದ್ಯರ ದೂರಿನ ಆಧಾರ ಮೇಲೆ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Ashika S

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

8 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

9 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

9 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

10 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

10 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

10 hours ago