ಮಡಿಕೇರಿ: ಡೆತ್ನೋಟ್ ಬರೆದಿಟ್ಟು ನಿವೃತ್ತ ಯೋಧ ನಾಪತ್ತೆ ಆಗಿದ್ದು, ಜೊತೆಗೆ ತನ್ನನ್ನು ಮಹಿಳೆಯೊಬ್ಬಳು ಹನಿಟ್ರ್ಯಾಪ್ ಮಾಡಿರುವುದಾಗಿ ಆರೋಪ ಮಾಡಿದ್ದಾರೆ. ಜಿಲ್ಲೆಯ ಮಡಿಕೇರಿ ನಗರದ ಉಕ್ಕುಡ ನಿವಾಸಿ ಸಂದೇಶ್ (38) ನಾಪತ್ತೆಯಾದ ನಿವೃತ್ತ ಯೋಧ. ಜೀವಿತಾ ಎಂಬ ಮಹಿಳೆ ವಿರುದ್ಧ ಸಂದೇಶ್ ಆರೋಪ ಮಾಡಿದ್ದಾರೆ. ಸತೀಶ್ ಎಂಬ ಪೊಲೀಸ್ ಹೆಸರನ್ನೂ ಯೋಧ ಸಂದೇಶ್ ಬರೆದಿದ್ದಾರೆ. ಪೊಲೀಸ್ ಮಾನಸಿಕ ಕಿರುಕುಳ ಆರೋಪ ಮಾಡಿದ್ದಾರೆ.
ಮಡಿಕೇರಿ ನಗರದ ಪಂಪಿನ ಕೆರೆ ಬಳಿ ಸಂದೇಶ್ಗೆ ಸೇರಿದ ವಸ್ತು ಪತ್ತೆಯಾಗಿವೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರಿಂದ ಶೋಧ ಕಾರ್ಯ ಆರಂಭಿಸಲಾಗಿದೆ.