News Karnataka Kannada
Saturday, May 04 2024
ಕ್ರೈಮ್

ನಿಂತಿದ್ದ ಟಿಪ್ಪರ್‌ಗೆ ಫಾರ್ಚೂನರ್ ಕಾರು ಡಿಕ್ಕಿ: ಓರ್ವ ಸಾವು ಇಬ್ಬರು ಗಂಭೀರ

One killed, two injured as Fortuner car collides with stationary tipper
Photo Credit : News Kannada

ಮಂಗಳೂರು: ನಿಂತಿದ್ದ ಟಿಪ್ಪರ್‌ಗೆ ಫಾರ್ಚೂನರ್ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಸಂಭವಿಸಿದ ಅಫಘಾತದಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ರಾಷ್ಠ್ರೀಯ ಹೆದ್ದಾರಿ 66 ರಲ್ಲಿ ಪಣಂಬೂರು ಸಮೀಪದ ಹೊಸಬೆಟ್ಟುವಿನಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ.

ಅರ್ಜುನ್ ಮೃತಪಟ್ಟ ಚಾಲಕ. ಕಾರಿನಲ್ಲಿ ಸಹಪ್ರಯಾಣಿಕನಾಗಿದ್ದಮೊಹಮ್ಮದ್ ಫೈಜಾನ್ ಗಂಭೀರವಾಗಿ ಗಾಯಗೊಂಡವರು.ಇನ್ನೋರ್ವ ಪ್ರಯಾಣಿಕ ಅನಿರುದ್ದ ನಾಯರ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಫಾರ್ಚೂನರ್ ಕಾರು ಮಂಗಳೂರಿನಿಂದ ಸುರತ್ಕಲ್ ಕಡೆಗೆ ಸಾಗುತ್ತಿದ್ದು ನಸುಕಿನ ಜಾವ ಸುಮಾರು 3.30ಹೊಸಬೆಟ್ಟುವಿನ ಎಚ್‌ಪಿ ಪೆಟ್ರೋಲ್ ಪಂಪ್‌ನ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಟಿಪ್ಪರ್‌ಗೆ ಢಿಕ್ಕಿ ಹೊಡೆದಿದ್ದು ಕಾರು ಚಲಾಯಿಸುತ್ತಿದ್ದ ಅರ್ಜುನ್ ಗೆ ತೀವ್ರ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು