News Karnataka Kannada
Monday, April 29 2024
ವಿದೇಶ

ಸಂಘಟನೆಯ ಬೋಧನೆಗಳು ದೇಶದ್ರೋಹದ ರೀತಿಯಂತಿವೆ ಅದಕ್ಕೆ ಸ್ಫೋಟ ಮಾಡಿದೆ ಎಂದ ಮಾರ್ಟಿನ್‌

Martin said that the organization's teachings were a form of treason
Photo Credit : News Kannada

ತಿರುವನಂತಪುರ: ಕೊಚ್ಚಿಯ ಕಲಸಮೇರಿ ಕ್ರಿಶ್ಚಿಯನ್‌ ಧಾರ್ಮಿಕ ಸಮಾವೇಶದಲ್ಲಿ ಇಂದು ಸಂಭವಿಸಿದ ಸ್ಫೋಟದ ಕುರಿತು ವ್ಯಕ್ತಿಯೊಬ್ಬ ವಿಡಿಯೋ ಬಿಡುಗಡೆ ಮಾಡಿದ್ದಾನೆ.

ವಿವಿಧ ಚಾನೆಲ್‌ ಗಳಲಿ ಪ್ರಸಾರವಾದ ವಿಡಿಯೋದಲ್ಲಿ ತನ್ನನ್ನು ಮಾರ್ಟಿನ್‌ ಎಂದು ಗುರುತಿಸಿಕೊಂಡ ವ್ಯಕ್ತಿ ಯಹೋವನ ವಟ್ನಸೆಸ್‌ ಎಂಬ ಕ್ರಿಶ್ಚಿಯನ್‌ ಸಂಘಟನೆಗೆ ತಾನು ಸೇರಿದವನೆಂದು ಹೇಳಿದ್ದಾನೆ. ಸಂಘಟನೆಯ ಬೋಧನೆಗಳು ದೇಶದ್ರೋಹದ ರೀತಿಯಂತಿದ್ದು, ಅದರ ವಿರುದ್ಧವಾಗಿ ಸ್ಫೋಟದ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾನೆ.

ಅಲ್ಲಿ ಏನಾಯಿತು ಎಂಬುದು ನನಗೆ ಪೂರ್ಣವಾಗಿ ತಿಳಿದಿಲ್ಲ. ಆದರೆ ಸ್ಫೋಟದ ಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ವಿಡಿಯೋದಲ್ಲಿ ಆತ ಹೇಳಿದ್ದಾನೆ. ಅಲ್ಲದೆ ತಾನು 16 ವರ್ಷಗಳಿಂದ ಯೆಹೋವನ ವಿಟ್ನಸೆಸ್‌ ಕ್ರಿಶ್ಚಿಯನ್‌ ಧಾರ್ಮಿಕ ಗುಂಪಿನ ಭಾಗವಾಗಿದ್ದೇನೆ ಎಂದು ಆತ ಹೇಳಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು