ಟೆಲ್ ಅವೀವ್: ಗಾಜಾಪಟ್ಟಿಯೊಳಗೆ ನುಗ್ಗಿರುವ ಇಸ್ರೇಲ್ ಸೇನಾಪಡೆ ಹಮಾಸ್ ಭಯೋತ್ಪಾದಕನನ್ನು ಹತ್ಯೆ ಮಾಡಿದ್ದು, ಆತನ ಹೆಸರು ಮತ್ತು ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದೆ.
ಹತ್ಯೆಗೀಡಾದ ಭಯೋತ್ಪಾದಕ ಹಮಾಸ್ನ ಹಿರಿಯ ಕಮಾಂಡರ್ ಎಂದು ಇಸ್ರೇಲಿ ರಕ್ಷಣಾ ಪಡೆ ಹೇಳಿಕೊಂಡಿದೆ. ಕಿಬ್ಬುಟ್ಜ್ ಸೇರಿದಂತೆ ಮೋಶವ್ ನೆಟೀವ್ ಹಠಾರಾ ದಾಳಿಯಲ್ಲಿ ಈತ
ಪ್ರಮುಖ ಪಾತ್ರವಹಿಸಿದ್ದ ಎನ್ನಲಾಗಿದೆ. ಅಕ್ಟೋಬರ್ 7ರಂದು ಕಿಬ್ಬುಟ್ಜ್, ಎರೆಜ್ ಮತ್ತು ಮೋಶವ್ ನೆಟೀವ್ ಹತಾರಾ ಮೇಲೆ ದಾಳಿ ನಡೆಸುವಲ್ಲಿ ನಸೀಮ್ ಸೇರಿದಂತೆ ಅನೇಕ ಭಯೋತ್ಪಾದಕರು ಭಾಗಿಯಾಗಿದ್ದರು. ನಸೀಮ್ ವೈಮಾನಿಕ ದಾಳಿ ನಡೆಸುವಲ್ಲಿ ಪರಿಣತನಾಗಿದ್ದನು. ಹಮಾಸ್ನ ಮಾನವರಹಿತ ವೈಮಾನಿಕ ವಾಹನ ಮತ್ತು ಡ್ರೋನ್ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ನಸೀಮ್ನ ಹತ್ಯೆ ಮೂಲಕ ಇಸ್ರೇಲ್ ಹಮಾಸ್ಗೆ ದೊಡ್ಡ ಹೊಡೆತ ನೀಡಿದೆ.