ಬೆಳಗಾವಿ: ತಾಲೂಕಿನ ಬಸವನಕುಡಚಿ ಗ್ರಾಮದಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟಕ್ಕೆ ನಾಲ್ಕು ಕುರಿಗಳು ಸಾವನ್ನಪ್ಪಿದ್ದು, ಮನೆ ಸುಟ್ಟು ಕರಕಲಾಗಿದ ಘಟನೆ ನಡೆದಿದೆ.
ಅಭಿಷೇಕ್ ಕೌಲಗಿ ಎಂಬುವವರಿಗೆ ಸೇರಿದ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಸ್ಫೋಟದ ವೇಳೆ ಮನೆ ಮಂದಿ ಯಾರೂ ಇರಲಿಲ್ಲ. ಆದರೆ, ನಾಲ್ಕು ಕುರಿಗಳು ಸಜೀವ ದಹನಗೊಂಡಿದ್ದು, ಮನೆ ಸುಟ್ಟು ಹೋಗಿದೆ
ಬಲಿಪಾಢ್ಯಮಿಯಂದು ಟ್ರ್ಯಾಕ್ಟರ್ ಖರೀದಿಸಲು ಅಭಿಷೇಕ್ ಅವರು ನಿರ್ಧರಿಸಿದ್ದರು. ಅದರಂತೆ ಬ್ಯಾಂಕ್ನಿಂದ ಹಣ ತೆಗೆಸಿ ಮನೆಯಲ್ಲಿಟ್ಟಿದ್ದು, ನಾಳೆ ಖರೀದಿಗೆ ಹೋಗಲಿದ್ದರು. ಈ ಹಣ ಕೂಡ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕದ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.