News Karnataka Kannada
Sunday, April 28 2024
ಕ್ರೈಮ್

ಅಗ್ನಿ ಅವಘಡ: ಶೆಡ್ ನಲ್ಲಿದ್ದ ಕಾರು, ಬೈಕ್ ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳು ಭಸ್ಮ

Fire breaks out in Shirur, property, including a car, bike and other valuables gutted in the shed
Photo Credit : News Kannada

ಉಡುಪಿ: ಬೈಂದೂರು ತಾಲೂಕಿನ ಶಿರೂರಿನ ಬುಖಾರಿ ಕಾಲನಿಯ ಮನೆಯೊಂದರಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಕಾರು, ದ್ವಿಚಕ್ರ ವಾಹನ ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮವಾಗಿದೆ.

ಬುಖಾರಿ ಕಾಲನಿಯ ಸಿನಾ ಫರ್ಹಿನ್ ಎಂಬವರಿಗೆ ಸೇರಿದ ಮನೆಯಲ್ಲಿ ಬುಧವಾರ ತಡರಾತ್ರಿ 1:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಬೆಂಕಿಯ ರೌದ್ರಾವತಾರಕ್ಕೆ ಮನೆಗೆ ತಾಗಿಕೊಂಡಿರುವ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್ ಸುಟ್ಟು ಕರಕಲಾಗಿದೆ.

ಮನೆಯೊಳಗೆ ಅಳವಡಿಸಿದ್ದ ಏರ್ ಕಂಡಿಶನರ್, ಮನೆಯ ಗೋಡೆ ಮತ್ತು ಪೈಪ್ ಲೈನ್, ಕಿಟಕಿ, ಗಾಜುಗಳಿಗೆ ಮತ್ತು ಕೋಣೆಯಲ್ಲಿದ್ದ ಮರದ ಮಂಚ, ಬೆಡ್ ಗೆ ಹಾನಿಯುಂಟಾಗಿದೆ. ಅಂದಾಜು 16.70 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು