ಶಿವಮೊಗ್ಗ: ಲಾಡ್ಜ್ ವೊಂದರಲ್ಲಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪತ್ತೆಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಶಿವಮೊಗ್ಗದ ಕೆ.ಆರ್.ಪುರಂ ರಸ್ತೆಯಲ್ಲಿರುವ ಬ್ಲೂ ಕ್ರಿಸ್ಟಲ್ ಲಾಡ್ಜ್ ಮೇಲೆ ಪೊಲೀಸರು ರೇಡ್ ಮಾಡಿದ್ದು, ದಾಳಿ ವೇಳೆ ಲಾಡ್ಜ್ ಕೊಠಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಇಬ್ಬರೂ ವಿದ್ಯಾರ್ಥಿಗಳೆಂಬ ಅಂಶ ಬೆಳಕಿಗೆ ಬಂದಿದೆ. ಅನೇಕ ಯುವಕ, ಯುವತಿಯರು ಲಾಡ್ಜ್ಗೆ ಬಂದು ಹೋಗುವುದನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದು ಮಾಹಿತಿ ನೀಡಿದ್ದರು. ಇನ್ನು ವಿದ್ಯಾರ್ಥಿಗಳು ಪರಸ್ಪರ ಒಪ್ಪಿಗೆ ಮೇರೆಗೆ ಲಾಡ್ಜ್ಗೆ ಬಂದಿದ್ದರಂತೆ. ಹೀಗಾಗಿ ಲಾಡ್ಜ್ ಪರವಾನಗಿ ರದ್ದುಪಡಿಸುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದರು.