ದಾವಣಗೆರೆ: ವಿದ್ಯುತ್ ತಂತಿ ತಗುಲಿ ಬಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ನ್ಯಾಮತಿ ತಾಲೂಕಿನ ಜೊಸಜೋಗಾ ಗ್ರಾಮದಲ್ಲಿ ನಡೆದಿದೆ.
ದೀಪಕ್ ನಾಯಕ್ (11) ಗಾಯಗೊಂಡ ಬಾಲಕ.
ದೀಪಕ್ ನಾಯಕ್ ಆತನ ದೊಡ್ಡಪ್ಪನ ಜೊತೆ ಟ್ರಾಕ್ಟರ್ನಲ್ಲಿ ಜಮೀನಿಗೆ ಹೋಗಿದ್ದನು. ಈ ವೇಳೆ ಕಂಬದಿಂದ ತುಂಡಾಗಿ ಜೋತು ಬಿದ್ದಿದ್ದ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದ ಗಾಯಗೊಂಡ ಬಾಲಕನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತಾಯಿಸುತ್ತಿರುವ ಪೊಲೀಸರು : ಪ್ರಕರಣ ಸಂಬಂಧ ಬೇಸ್ಕಾಂ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಳ್ಳದೇ ನ್ಯಾಮತಿ ಠಾಣೆ ಪೊಲೀಸರು ಸತಾಯಿಸುತ್ತಿರುವ ಆರೋಪ ಕೇಳಿ ಬಂದಿದೆ.