Categories: ಕ್ರೈಮ್

ಕೊರಿಯನ್‌ ಯುವತಿಯನ್ನು ತಬ್ಬಿಹಿಡಿದು ಕಿರುಕುಳ ನೀಡಿದ ಬೀದರ್‌ ಯುವಕ ಅಂದರ್‌

ಬೀದರ್‌: ಇತ್ತೀಚೆಗೆ ಯುವಕ ಯುವತಿಯರು ಯೂಟ್ಯೂಬ್‌ ವಿಡಿಯೋ ಮಾಡುತ್ತಾರೆ. ಅದೇ ರೀತಿ ವಿದೇಶಿಯರು ಕೂಡ ಭಾರತಕ್ಕೆ ಬಂದು ಇಲ್ಲಿ ಸುತ್ತಾಡಿ ವಿಡಿಯೋ ಮಾಡಿ ಭಾರತದ ಆಹಾರ ಆತಿಥ್ಯದ ಕುರಿತು ಜಗತ್ತಿನೆಲ್ಲೆಡೆ ವಿಷಯ ಹಂಚುತ್ತಾರೆ. ಆದರೆ ಹಲವು ಕಡೆ ಇಂತಹ ವಿದೇಶ ಯುವಕ ಯುವತಿಯರಿಗೆ ಕಹಿ ಅನುಭವಗಳು ಆಗುತ್ತದೆ.

ಅಂತಹುದೇ ಘಟನೆ ಪುಣೆಯಲ್ಲಿ ನಡೆದಿದ್ದು, ಕಪಿಚೇಷ್ಟೆ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಪುಣೆ ನಗರಕ್ಕೆ ಭೇಟಿ ನೀಡಿದ್ದ ಕೊರಿಯನ್ ಮೂಲದ ಯುವತಿ ಭಾರತದ ಬಗ್ಗೆ ಹತ್ತು ಹಲವು ಕುತೂಹಲಕಾರಿ ಸಂಗತಿಗಳ ವಿಡಿಯೋ ಮಾಡುತ್ತಿದ್ದರು ಈ ವೇಳೆ ಪುಣೆಯ ಮಾರ್ಕೆಟ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಜನರನ್ನು ಮಾತನಾಡಿಸುತ್ತಿದ್ದಾಗ ಯುವಕನೊಬ್ಬ ಆಕೆಯನ್ನು ತಬ್ಬಿಕೊಂಡು ಮುಜುಗರ ಉಂಟಾಗುವಂತೆ ಮಾಡಿದ್ದಾನೆ.

ಸದ್ಯ ಕೊರಿಯನ್ ಮೂಲದ ಯೂಟ್ಯೂಬರ್‌ಗೆ ಕಿರುಕುಳ ಆರೋಪದ ಮೇಲೆ ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ರಾವೆಟ್ ಪ್ರದೇಶದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಭರತ್ ಕರಂರಾವ್ ಹುನುಸ್ನಾಲೆ ಎಂದು ಗುರುತಿಸಲಾಗಿದ್ದು, ಪಿಂಪ್ರಿ ಚಿಂಚ್‌ವಾಡ್ ಪೊಲೀಸ್‌ನ ಆಂಟಿ ಗುಂಡಾ ಸ್ಕ್ವಾಡ್ ತಂಡವು ಆರೋಪಿಯನ್ನು ಬಂಧಿಸಿದೆ.

ಮಂಗಳವಾರ ಕೊರಿಯಾದ ವ್ಲಾಗರ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ ಪೊಲೀಸರು ಆರೋಪಿ ಭರತ್ ಕರಂರಾವ್ ಹುನುಸ್ನಾಲೆಯನ್ನು ಬಂಧಿಸಿದ್ದಾರೆ.

ಈತ ಕರ್ನಾಟಕದ ಬೀದರ್‌ ನವನು ಎಂದು ತಿಳಿದು ಬಂದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಸಂತ್ರಸ್ತ ಯುವತಿ ಕೈಯಲ್ಲಿ ಎಳನೀರು ಹಿಡಿದುಕೊಂಡು ವಿಡಿಯೋ ಮಾಡುತ್ತಿದ್ದಾಗ ಆಕೆಗೆ ಆರೋಪಿಯು ಕಿರುಕುಳ ನೀಡುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.

Ashika S

Recent Posts

ನಮ್ಮ ಸರ್ಕಾರ ಇನ್ನೂ ನಾಲ್ಕು ವರ್ಷ ಇರಲಿದೆ: ಸತೀಶ್ ಜಾರಕಿಹೊಳಿ

ಕರ್ನಾಟಕದಲ್ಲಿ ಸರ್ಕಾರ ಬೀಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ ಎಂಬ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆಯವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ…

5 mins ago

ಗುರು-ಶಿಷ್ಯರ ಸಂಬಂಧ ಹೂ ಬಳ್ಳಿಯಂತೆ: ಪ್ರತಿಭಾ ಚಾಮಾ

'ಗುರು-ಶಿಷ್ಯರ ಸಂಬಂಧ ಹೂ ಬಳ್ಳಿಯಂತೆ' ಎಂದು ವಿದ್ಯಾರಣ್ಯ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ ಹೇಳಿದರು.

24 mins ago

ರ್‍ಯಾಲಿಯಲ್ಲಿ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ ರಾಹುಲ್ ಗಾಂಧಿ

ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರು ಇಂದು ಉತ್ತರ ಪ್ರದೇಶ ಕ್ಷೇತ್ರದಲ್ಲಿ ನಡೆದ ರ್‍ಯಾಲಿಯಲ್ಲಿ ಭಾವನಾತ್ಮಕ ಭಾಷಣ ಮಾಡಿದ್ದು, ತಮ್ಮ…

38 mins ago

ಬೀದರ್: ಕರಿ ಬಸವೇಶ್ವರ ಜಾತ್ರೆಯಲ್ಲಿ ಪಶು ಪ್ರದರ್ಶನ

ʼಕರಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಶು ಪ್ರದರ್ಶನ ಆಯೋಜನೆ ಮಾಡಿರುವುದು ಶ್ಲಾಘನೀಯ' ಎಂದು ಹುಡಗಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ…

44 mins ago

ಬೀದರ್: ಸಂಚಾರ ದಟ್ಟಣೆಯಿಂದ ಹೈರಾಣಾದ ನಾಗರಿಕರು

ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಯ ಕಾರಣಕ್ಕೆ ಜನ ಬೇಸತ್ತು ಹೋಗಿದ್ದಾರೆ. ಕೆಲಸ-ಕಾರ್ಯಗಳಿಗೆ ಪಟ್ಟಣಕ್ಕೆ ಬರುವ ತಾಲ್ಲೂಕಿನ ಹಾಗೂ…

57 mins ago

ರೇವಣ್ಣ ಹತ್ತು ನಿಮಿಷಗಳ ಕಾಲ ಕಣ್ಣೀರು ಹಾಕಿದ್ರು: ಜಿ.ಟಿ ದೇವೇಗೌಡ

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ ಅವರನ್ನು ಭೇಟಿಯಾದ ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ  ಏನೂ ತಪ್ಪು ಮಾಡದೇ ಪ್ರಕರಣದಲ್ಲಿ ಸಿಲುಕಿಸಿ,…

1 hour ago