ಗಾಂಧೀನಗರ: ಆಯುರ್ವೇದದ ಹೆಸರಿನಲ್ಲಿ ಹೊರಬರುತ್ತಿರುವ ಹಲವು ಉತ್ಪನ್ನಗಳು ಗುಣಮಟ್ಟದಲ್ಲಿ ಕಳಪೆಯಾಗಿವೆ ಎಂಬ ಮಾತಿದೆ. ಅದೇ ರೀತಿ ಗುಜರಾತ್ನ ಖೇಡಾ ಜಿಲ್ಲೆಯಲ್ಲಿ ಮಿಥೈಲ್ ಆಲ್ಕೋಹಾಲ್ ಹೊಂದಿರುವ ಕಲುಷಿತ ಆಯುರ್ವೇದಿಕ್ ಸಿರಪ್ ಸೇವಿಸಿ ದ ಎರಡು ದಿನಗಳಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ.
ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಕಲ್ಮೇಘಸವ್ – ಅಸವ ಅರಿಷ್ಟ’ ಎಂಬ ಹೆಸರಿನ ಆಯುರ್ವೇದಿಕ್ ಸಿರಪ್ ಅನ್ನು ಬಿಲೋದರ ಗ್ರಾಮದ ಅಂಗಡಿಯಾತ ಕೌಂಟರ್ನಲ್ಲಿ ಸುಮಾರು 50 ಜನರಿಗೆ ಮಾರಾಟ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.