News Karnataka Kannada
Monday, April 29 2024
ಕ್ರೈಮ್

ಪಾಕ್ ಧ್ವಜ ಮಾರಾಟ: ಅಮೇಜಾನ್ ಕಚೇರಿ ಮೇಲೆ ದಾಳಿ

Amazon office attacked over sale of Pakistan flag
Photo Credit : News Kannada

ಮುಂಬೈ: ಪಾಕಿಸ್ತಾನದ ಧ್ವಜ ಹಾಗೂ ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಅಮೇಜಾನ್ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿ ನಾಗ್ಪುರದ ಅಮೇಜಾನ್ ಕಚೇರಿ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ಗಣೇಶ್ ಪೇಟ್ ಪ್ರದೇಶದಲ್ಲಿರುವ ಅಮೇಜಾನ್ ಕಚೇರಿಗೆ ನುಗ್ಗಿದ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿದ್ದಾರೆ. ಅಮೇಜಾನ್ ಇಂಡಿಯಾ ಲಿಮಿಟೆಡ್ ಗೆ ಉದ್ದೇಶಿಸಿ ಬರೆದಿರುವ ಪತ್ರಕ್ಕೆ ಎಂಎನ್‌ಎಸ್ ನಾಯಕರಾದ ಚಂದು ಲಾಡೆ ಹಾಗೂ ವಿಶಾಲ್ ಬಗ್ಡೆ ಸಹಿ ಮಾಡಿದ್ದು, ಅಮೇಜಾನ್ ನ ವೆಬ್ ಸೈಟ್ ನಲ್ಲಿ ಪಾಕಿಸ್ತಾನದ ಧ್ವಜ ಮಾರಾಟಕ್ಕೆ ಲಭ್ಯವಿದೆ, ಇಂತಹ ವಸ್ತುಗಳನ್ನು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರು ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೇ ಅಮೇಜಾನ್ ವೆಬ್ ಸೈಟ್ ನಲ್ಲಿ ಮಾರಾಟ ಮಾಡಲಾಗುತ್ತಿರುವ ಡೆಡ್ಲಿ ಭಗವದ್ಗೀತಾ ಎಂಬ ಭಗವದ್ಗೀತೆಗೆ ಅವಹೇಳನ ಮಾಡುವ ಪುಸ್ತಕವನ್ನೂ ವೆಬ್ ಸೈಟ್ ನಿಂದ ತೆಗೆದುಹಾಕಬೇಕೆಂದು ಪತ್ರದ ಮೂಲಕ ಆಗ್ರಹಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು