ಬೆಂಗಳೂರು: ಬಟ್ಟೆ ಅಂಗಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಬಟ್ಟೆ ಬೆಂಕಿಗೆ ಆಹುತಿಯಾಗಿದ ಘಟನೆ ನಗರದ ಮಾರತಹಳ್ಳಿ ಬ್ರಿಡ್ಜ್ ಸಮೀಪದ ಲೂಯಿಸ್ ಫಿಲಿಪ್ ಬಟ್ಟೆ ಅಂಗಡಿಯಲ್ಲಿ ನಡೆದಿದೆ.
ಮೂರಂತಸ್ತಿನಲ್ಲಿದ್ದ ಬಟ್ಟೆ ಶೋ ರೂಂ. ಪಕ್ಕದ ಕಟ್ಟಡದಲ್ಲಿದ್ದ ಮೂರ್ನಾಲ್ಕು ಅಂಗಡಿಗೂ ಬೆಂಕಿ ತಗುಲಿ ಕ್ಷಣ ಮಾತ್ರದಲ್ಲಿ ಮೂರು ಕಟ್ಟಡಕ್ಕೆ ಹೊತ್ತಿಕೊಂಡು ಅಂಗಡಿ ಸುಟ್ಟು ಬೂದಿಯಾಗಿದೆ. ಬಟ್ಟೆ ಶೋ ರೂಂನಿಂದ ಮುಖ್ಯ ರಸ್ತೆವರೆಗೂ ಚಾಚಿಕೊಂಡಿದ್ದ ಬೆಂಕಿ ಕಟ್ಟಡದ ಮುಂದಿದ್ದ ತೆಂಗಿನಮರ, ಟ್ರಾನ್ಸ್ಫಾರ್ಮರ್ಗೂ ತಗುಲಿ ಇನ್ನಷ್ಟೂ ಅನಾಹುತವಾಗಿದೆ.
ಈ ಘಟನೆಯಲ್ಲಿ ನಾಲ್ವರು ರೋಚಕವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವ ಅಗ್ನಿ ಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ: ಬಟ್ಟೆ ಅಂಗಡಿಗೆ ಬೆಂಕಿ: ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿ